ಕರಾವಳಿ

ಪ್ರತಿದಿನ ಕಡಲೆಬೀಜವನ್ನು ತಿನ್ನುವುದರಿಂದ ರಕ್ತದ ಸಮಸ್ಯೆ ನಿವಾರಣೆ

Pinterest LinkedIn Tumblr

ಕಡಲೆ ಬೀಜ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ….? ಕಡಲೆಬೀಜವನ್ನು ಬಡವರ ಬಾದಾಮಿ ಎನ್ನುತ್ತಾರೆ. ಈ ಕಡಲೆಬೀಜ ಬಾದಾಮಿಯಲ್ಲಿರುವಷ್ಟೇ ಪೌಷ್ಠಿಕತೆಯನ್ನ ಒಳಗೊಂಡಿದೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತದೆ. ಇದು ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ ಉತ್ತಮ ಸೌಂದರ್ಯಕ್ಕೂ ಸಹಾಯಕ. ಕಡಲೆಬೀಜದಲ್ಲಿನ ಇನ್ನಷ್ಟು ಆರೋಗ್ಯಕರ ಅಂಶಗಳು ಇಲ್ಲಿವೆ ನೋಡಿ..

* ಕಡಲೆಬೀಜ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಕಡಲೆ ಬೀಜ ಸೇವಿಸುವುದರಿಂದ ಗ್ಯಾಸ್ ಹಾಗೂ ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ.
* ಎರಡು ದಿನಕೊಮ್ಮೆಯಾದರು ಕಡಲೆಬೀಜವನ್ನು ಸೇವಿಸಿದ್ರೆ ಹೃದಯ ಸಂಬಂಧಿ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
* ರಕ್ತ ಹೀನತೆ ಇರುವವರು ಅವಶ್ಯವಾಗಿ ಕಡಲೆಬೀಜವನ್ನು ಸೇವಿಸಬೇಕು. ಪ್ರತಿದಿನ ಕಡಲೆಬೀಜವನ್ನು ತಿನ್ನುವುದರಿಂದ ರಕ್ತದ ಸಮಸ್ಯೆಗಳು ಎದುರಾಗುವುದಿಲ್ಲ.
* ಪ್ರತಿ ದಿನ ಪುರುಷ ಹಾಗೂ ಮಹಿಳೆಯರಿಬ್ಬರು ಕಡಲೆಬೀಜವನ್ನು ಸೇವಿಸುವುದರಿಂದ ಸೆಕ್ಸ್ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದರಿಂದಾಗಿ ನಿಮ್ಮ ಲೈಂಗಿಕ ಜೀವನ ಸುಖಮಯವಾಗಿರುತ್ತದೆ.
* ಗರ್ಭಿಣಿಯರಿಗೆ ಕಡಲೆಬೀಜ ಬಹಳ ಒಳ್ಳೆಯದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಉತ್ತಮ ಬೆಳವಣಿಗೆಗೆ ಕಡಲೆಬೀಜದ ಪಾತ್ರ ಬಹಳ ಇದೆ. ಇದು ಮಗುವಿನ ಬೆಳವಾಗಿಗೆಗೆ ಸಹಕಾರಿ.
* ಚರ್ಮದ ಕಾಂತಿಗೆ ಕಡಲೆಬೀಜ ಒಳ್ಳೆಯದು. ಕಡಲೆ ಬೀಜದ ಎಣ್ಣೆಯನ್ನು ಬಳಸಿ ಸಹ ನಾವು ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಇದ್ರಲ್ಲಿ ಒಮೆಗಾ -6 ಎಂಬ ಕೊಬ್ಬಿನಂಶವಿರುತ್ತದೆ.
* ಹೇರಳ ಪ್ರೊಟೀನ್: ಕಡಲೆಕಾಯಿಯಲ್ಲಿ ಹೆಚ್ಚು ಪ್ರೊಟೀನ್ ಇದ್ದು, ಬಾಡಿ ಬಿಲ್ಡಿಂಗ್ ಬಯಸುವವರು ಮತ್ತು ಕಡಿಮೆ ತೂಕ ಇರುವವರಿಗೆ ಇದು ಹೆಚ್ಚು ಉಪಯೋಗಕರ. ಅದರಲ್ಲೂ ಕಡಲೆಕಾಯಿಯಿಂದ ತಯಾರಿಸುವ ಪೀನಟ್ ಬಟರ್ ನಲ್ಲಿ ಹೆಚ್ಚಿನ ಪೋಷಕಾಂಶವಿದೆ. ಪೀ ನಟ್ ಬಟರ್ ಒಂದೇ ಅಲ್ಲ, ಕಡಲೆ ಕಾಯಿಯನ್ನು ಯಾವ ರೀತಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.
* ಆಂಟಿಯಾಕ್ಸಿಡಂಟ್: ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಅದರಲ್ಲೂ ಕಡಲೆ ಬೀಜದಲ್ಲಿರುವ ಪಿ-ಕೌಮ್ಯಾರಿಕ್ ಆಸಿಡ್ ದೇಹಕ್ಕೆ ಹೆಚ್ಚು ಅವಶ್ಯಕ. ಕಡಲೆಕಾಯಿಯನ್ನು ಹುರಿಯುವುದರಿಂದ ಪಿ-ಕೌಮ್ಯಾರಿಕ್ ಇನ್ನಷ್ಟು ಹೆಚ್ಚಾಗಿ ಆಂಟಿಯಾಕ್ಸಿಡಂಟ್ ಗಳೂ ಶೇಕಡಾ 22 ರಷ್ಟು ಅಧಿಕವಾಗುತ್ತದೆ.
* ಸೇಬಿಗೆ ಸರಿಸಾಟಿ: ಕಪ್ಪು ದ್ರಾಕ್ಷಿ ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿಯಾಕ್ಸಿಡಂಟ್ ಕಡಲೆ ಬೀಜದಲ್ಲೂ ದೊರೆಯುತ್ತೆ. ಸೇಬು, ಕ್ಯಾರೆಟ್ ಮತ್ತು ಬೀಟ್ ರೂಟ್ ಗಿಂತ ಕಡಲೆ ಕಾಯಿಯಿಂದಲೇ ಹೆಚ್ಚಿನ ಉಪಯೋಗವನ್ನು ಪಡೆಯಬಹುದು.
* ರಕ್ತದಲ್ಲಿನ ಕೊಲೆಸ್ಟ್ರಾಲ್ ಕರಗಿಸುತ್ತೆ: ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ
* ಜೀವ ಕಣಗಳ ರಕ್ಷಣೆ: ಜೀವ ಕಣಗಳು ತೊಂದರೆಗೀಡಾಗಿದ್ದರೆ ಕಡಲೆಕಾಯಿ ಸೇವನೆಯಿಂದ ಅದಕ್ಕೆ ಚೈತನ್ಯ ನೀಡಬಹುದು. ಇದರಲ್ಲಿನ ನಿಯಾಸಿನ್ ಅಂಶ ವ್ಯಕ್ತಿ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಮರೆವು ರೋಗ ಮತ್ತು ಇನ್ನಿತರ ವಯಸ್ಸಿನ ಸಂಬಂಧಿ ರೋಗಗಳನ್ನು ದೂರವಿರಿಸಲು ಸಹಕಾರಿ.
* ವಿಟಮಿನ್ ಇ: ಕಡಲೆ ಕಾಯಿಯಲ್ಲಿನ ವಿಟಮಿನ್ ಇ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿರಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿದೆ.
* ಕಬ್ಬಿಣಾಂಶ: ಕಡಲೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ಕೆಂಪು ರಕ್ತಕಣಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.
* ಅಧಿಕ ಕ್ಯಾಲ್ಸಿಯಂ: ಕಡಲೆ ಕಾಯಿಯಲ್ಲಿ ಕ್ಯಾಲ್ಸಿಯಂ ಅಧಿಕವಿದೆ. ಆದ್ದರಿಂದ ಕಡಲೆ ಕಾಯಿ ಸೇವನೆ ಮೂಳೆ, ಎಲುಬುಗಳು ಗಟ್ಟಿಯಿರುವಂತೆ ನೋಡಿಕೊಳ್ಳುತ್ತದೆ.
* ಲಕ್ವ ಸಮಸ್ಯೆ: ಕಡಲೆ ಕಾಯಿಯಲ್ಲಿನ ಬಯೋಫ್ಲೇವನಾಯ್ಡ್ ಅಂಶ ಮೆದುಳಿನಲ್ಲಿ ರಕ್ತಸಂಚಲನವನ್ನು ಶೇಕಡಾ 30 ರಷ್ಟು ಹೆಚ್ಚಾಗಿಸಿ ಲಕ್ವ ಹೊಡೆಯುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆಹಾರದಲ್ಲಿ ಸ್ವಲ್ಪವೇ ಕಡಲೆ ಕಾಯಿ ಅಥವಾ ಬೀಜ ಬಳಸಿದರೂ ಸರಿ ದೇಹದಲ್ಲಿ ತುಂಬಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲನ್ನು ಶೇಕಡಾ 14 ರಷ್ಟು ಕರಗಿಸುತ್ತದೆ.
* ನಾರಿನಂಶ-ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದವರು ಇದರ ಸೇವನೆಯನ್ನು ಮಾಡಿದರೆ ಉತ್ತಮ. ಅಷ್ಟೇ ಅಲ್ಲ, ಕಡಲೆ ಕಾಯಿ ಸೇವನೆ ಪುರುಷ ಮತ್ತು ಸ್ರೀಯರ ಹಾರ್ಮೋನುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

Comments are closed.