ಕರಾವಳಿ

ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಈ ಚಾಕಲೇಟ್ ಉತ್ತಮ

Pinterest LinkedIn Tumblr

ಡಾರ್ಕ್ ಚಾಕಲೇಟ್ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ನೆನಪುಶಕ್ತಿ ಹೆಚ್ಚಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ ಮನಸ್ಥಿತಿಯನ್ನು ಕೂಡ ಉತ್ತಮಪಡಿಸುತ್ತದೆ

ಡಾರ್ಕ್ ಚಾಕಲೇಟ್ ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಿರುವುದರಿಂದ ಈ ಲಾಭವಾಗುತ್ತದೆ. ಕೊಕೊ ಬೀಜದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯುವ ಅಂಶಗಳಿದ್ದು ಅದು ಮೆದುಳು ಹಾಗೂ ಹೃದಯದ ಆರೋಗ್ಯಗಳಿಗೆ ಉತ್ತಮವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ.

ಮೆದುಳಿನ ಕಾರ್ಯದ ಮೇಲೆ ಡಾರ್ಕ್ ಚಾಕಲೇಟ್ ಗಳ ಪ್ರಭಾವ ಕುರಿತು ವರ್ಷಗಳ ಕಾಲ ಅಧ್ಯಯನ ನಡೆಸಿದ್ದು ಅದರಲ್ಲಿನ ಸಕ್ಕರೆ ಅಂಶಗಳು ಕೂಡ ಮನುಷ್ಯನನ್ನು ಸಂತೋಷವಾಗಿಡುವಲ್ಲಿ ಸಹಕಾರಿಯಾಗಿದೆ ಎಂದು ಮುಖ್ಯ ಸಂಶೋಧಕ ಕ್ಯಾಲಿಫೋರ್ನಿಯಾದ ಲೊಮ ಲಿಂಡಾ ವಿಶ್ವವಿದ್ಯಾಲಯದ ಲೀ ಎಸ್ ಬರ್ಕ್ ತಿಳಿಸಿದ್ದಾರೆ.

ಮಾನವನ ಅನುವಂಶದ ಮೇಲೆ ಕೂಡ ಡಾರ್ಕ್ ಚಾಕಲೇಟ್ ಗಳು ಪ್ರಭಾವ ಬೀರುತ್ತವೆ. ಇದು ಸೆಲ್ಯುಲರ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿಯಂತ್ರಿಸುವುದಲ್ಲದೆ ನರ ಸಂಕೇತ ಮತ್ತು ಸಂವೇದನಾತ್ಮಕ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ ಕೂಡ.

ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿ ಇರುವುದರಿಂದ ಸಂವೇದನೆ, ಸ್ಮರಣೆ, ಮನಸ್ಥಿತಿ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರಯೋಗದಿಂದ ತಿಳಿದುಬಂದಿದೆ ಎನ್ನುತ್ತಾರೆ ಬರ್ಕ್.
ಈ ಅಧ್ಯಯನ ಅಮೆರಿಕಾದ ಸಾನ್ ಡಿಯಗೊದ ಎಕ್ಸರಿಮೆಂಟಲ್ ಬಯೊಲಜಿಯಲ್ಲಿ ಪ್ರಕಟವಾಗಿದೆ.

Comments are closed.