ಕರಾವಳಿ

ಮುಜುಗರ ತರುವಂತಹ ಕುರದ ಸಮಸ್ಯೆಗೆ ಸರಳ ಸುಲಭ ಪರಿಹಾರ.

Pinterest LinkedIn Tumblr

ಕುರ ಆದರೆ, ಅಪ್ಪ ಅದರ ನೋವು ಯಾರಿಗೂ ಬರಬಾರದಪ್ಪ ದೇವರೇ ಎನ್ನುತ್ತೇವೆ, ಏಕೆಂದರೆ ಅದರ ನೋವು ಅನುಭವಿಸಿದವರಿಗೆ ಗೊತ್ತು. ಕೂರಲು ಕಷ್ಟವಾಗುವಂತಹ ಜಾಗಗಳಲ್ಲಿಯೇ ಹೆಚ್ಚು ಕುರವಾಗುವುದು. ಇಂತಹ ಕುರಗಳಿಗೆ ವೈದ್ಯರ ಬಳಿ ಹೋಗಲು ಬಹಳಷ್ಟು ಮಂದಿ ಮುಜುಗರ ಪಡುತ್ತಾರೆ ಅಂತವರು ಇನ್ನು ಮುಂದೆ ಬಹಳ ಕಷ್ಟ ಪಡಬೇಕಿಲ್ಲ ನಿಮ್ಮ ಮನೆಯಲ್ಲಿಯೇ ಕುರದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹದು, ಹೇಗೆ ಅಂತೀರಾ…?

* ಬೇವಿನ ಎಲೆಯ ರಸ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಬಾಧಿತ ಭಾಗಕ್ಕೆ ಲೇಪಿಸುವದರಿಂದ ಪರಿಣಾಮಕಾರಿ ಫಲಿತಾಂಶ ದೊರೆಯುವುದು.
* ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನುಣ್ಣಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಮಾಯವಾಗುತ್ತದೆ.
* 3 ದಿವಸ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ತುಪ್ಪ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಿಂದರು ಕುರ ಕಡಿಮೆ ಆಗುತ್ತೆ.
* ಬಾಳೆ ದಿಂಡಿನ ಪಲ್ಯ ಮಾಡಿ ತಿನ್ನಬೇಕು ಕುರ ಬೇಗ ಶಮನವಾಗುತ್ತದೆ.
* ವೀಳ್ಯದೆಲೆಯನ್ನು ಸ್ವಲ್ಪ ಬಿಸಿ ಮಾಡಿ ಕಟ್ಟಿದರೆ ಕುರ ಕಡಿಮೆಯಾಗಿತ್ತದೆ.
* ನೀರನ್ನು ಒಲೆಯಮೇಲಿಟ್ಟು ಅದು ಕುದಿಯುವಾಗ ಅದಕ್ಕೆರಾಗಿಹಿಟ್ಟು, ಮೆಂತೆಯ ಕಾಳಿನ ಹಿಟ್ಟು ಮತ್ತು ಅರಿಶಿನ ಸೇರಿಸಿ ಕಲೆಸಿ ಅದು ಗಟ್ಟಿಯಾದ ಕೂಡಲೇ ಅದನ್ನು ಬಟ್ಟೆಯ ಮೇಲೆ ಸವರಿ ಸ್ವಲ್ಪ ಬಿಸಿಯಾಗಿರುವಾಗ ಕುರದ ಮೇಲೆ ಲೇಪಿಸಬೇಕು ಇದರಿಂದ ಕುರ ಕಡಿಮೆಯಾಗುತ್ತದೆ.
* ದಾಸವಾಳದ ಎಲೆಗಳನ್ನು ಅಕ್ಕಿಯೊಂದಿಗೆ ಅರೆದು ದೋಸೆ ಮಾಡಿ ತಿಂದರೆ ಕುರದ ನೋವು ಕಡಿಮೆಯಾಗುತ್ತದೆ.
* ಆಗತಾನೇ ಏಳುತ್ತಿರುವ ಕುರಕ್ಕೆ ಶುದ್ಧ ಜೇನುತುಪ್ಪವನ್ನುಹತ್ತಿಯಲ್ಲಿ ಅದ್ದಿ ಕುರದ ಮೇಲಿರಿಸುವುದು. ಇದು ಎಲ್ಲಾ ಬಾವುಗಳ ಮೇಲೂ ಉಪಯೋಗವಾಗುತ್ತದೆ

Comments are closed.