ಕರಾವಳಿ

ಕೆಎಂಸಿಯಲ್ಲಿ ಪರ್ಯಾಯ ಸಂಹವನ ಮಾಹಿತಿ ಕಾರ್ಯಾಗಾರ

Pinterest LinkedIn Tumblr

ಮಂಗಳೂರು : ತೀವ್ರ ಸಂವಹನ ತೊಂದರೆಗಳನ್ನು ಹೊಂದಿರುವ ಮಕ್ಕಳು ಮತ್ತು ವಯಸ್ಕರಿಗೆ ಪರ್ಯಾಯ ಸಂವಹನ ವ್ಯವಸ್ಥೆಗಳ ಕುರಿತು ಮಾಹಿತಿ ನೀಡುವ ಕಾರ್ಯಾಗಾರ ಇತ್ತೀಚೆಗೆ ಇಲ್ಲಿನ ಕೆಎಂಸಿ ಆಸ್ಪತ್ರೆಯ ಶ್ರವಣ ಶಾಸ್ತ್ರ ಮತ್ತು ಭಾಷಾಶಾಸ್ತ್ರ ವಿಭಾಗದ ವತಿಯಿಂದ ನಡೆಯಿತು.

ಕಾರ್ಯಾಗಾರದಲ್ಲಿ ಭಾಷಾಶಾಸ್ತ್ರಜ್ಞರು ಮತ್ತು ವಿಶೇಷ ಶಿಕ್ಷಕರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಆನಂದ್ ವೇಣುಗೋಪಾಲ್, ತೀವ್ರ ರೀತಿಯಮಾತು ಅಥವಾ ಭಾಷಾ ಸಮಸ್ಯೆಗಳನ್ನೊಂದಿರುವ ಮಕ್ಕಳು ಮತ್ತು ವಯಸ್ಕರು ಸಂವಹನ ನಡೆಸಲು ಇತರೆ ಮಾರ್ಗಗಳನ್ನು ಅನುಸರಿಸುವಅಗತ್ಯವಿರುತ್ತದೆ.

ವರ್ಧಕ ಮತ್ತು ಪರ್‍ಯಾಯ ಸಂವಹನ(ಎಎಸಿ) ಕ್ಷೇತ್ರ ಲಿಖಿತ ಮತ್ತು ಮೌಖಿಕ ಭಾಷೆ ಹೊರಡಲು ಅಥವ ಅರ್ಥ ಮಾಡಿಕೊಳ್ಳಲು ಕಷ್ಟಪಡುವ ವ್ಯಕ್ತಿಗಳಿಗೆ ಮಾತು ಅಥವ ಬರಹದ ಬದಲಿಗೆ ಉಪಯೋಗಿಸುವ ಸಂವಹನ ಕ್ರಮಗಳನ್ನು ಕುರಿತು ತಿಳಿಸುತ್ತದೆ. ಈ ಕುರಿತು ಜಾಗೃತಿ ಮೂಡಿಸುವುದು ಅತಿಮುಖ್ಯ ಎಂದರು.

ಕೆಎಂಸಿ ಕಾಲೇಜಿನ ಎಸ್‌ಎಲ್‌ಪಿ ಮತ್ತು ಶ್ರವಣಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರದೀಶ್ ಕುಮಾರ್ ಮಾತನಾಡಿ, ಜನ್ಮಜಾತ ಸಮಸ್ಯೆಗಳಾದ ಸೆಲಬ್ರೆಲ್ ಪಾಲ್ಸಿ, ಬೌದ್ಧಿಕ ತೊಂದರೆ ಮತ್ತು ಆಟಿಸಂನಂತಹ ವಿಸ್ತಾರವಾದ ಶ್ರೇಣಿಯ ಮಾತು ಮತ್ತು ಭಾಷಾ ತೊಂದರೆಗಳನ್ನು ಹೊಂದಿರುವವರು ಮತ್ತು ವಯಸ್ಸಿನೊಂದಿಗೆ ಬರುವ ಸಮಸ್ಯೆಗಳಾದ ಅಮೈಯೊಟ್ರೋಫಿಕ್ ಲ್ಯಾಟರಲ್ ಕ್ಲೇರೋಸಿಸ್ ಮತ್ತು ಪಾರ್ಕಿನ್‌ಸನ್ಸ್ ರೋಗ ಮುಂತಾದ ತೊಂದರೆಗಳನ್ನುಉಳ್ಳವರು ಎಎಸಿಗಳನ್ನು ಬಳಸುತ್ತಾರೆ. ಎಎಸಿ ಅಂದರೆ ವರ್ಧಕ
ಮತ್ತು ಪರ್‍ಯಾಯ ಸಂವಹನ ಎಂಬ ಮಾತನ್ನು ಬಳಸಲಾಗುತ್ತದೆ ಎಂದವರು ವಿವರಿಸಿದರು.

ಕ್ಯಾಲಿಫೋರ್ನಿಯಾದ ಓರಿನ್ ಡಿಸಿಲ್ವ ಮತ್ತು ರಾಮ್ ಗೆಂಜಿಸೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

Comments are closed.