ವಿಶಿಷ್ಟ

ಮಗುವಿನ ಜೊತೆ ನಿಮ್ಮ ಸಂಬಂಧ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ…

Pinterest LinkedIn Tumblr

ಎಂತಹ ಗಟ್ಟಿ ಮನಸ್ಸುಳ್ಳ ವ್ಯಕ್ತಿಯೇ ಆದರೂ ತನ್ನ ಮಕ್ಕಳ ವಿಷಯ ಬಂದಾಗ ಸ್ವಲ್ಪ ವಿಚಲಿತನಾಗಿ ಬಿಡುತ್ತಾನೆ. ಶಾಲೆಯಿಂದ ಅಥವಾ ಬೇರೆಯವರಿಂದ ದೂರುಗಳು ಬಂದಾಗ ದಿಡೀರನೆ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ನಿಮ್ಮ ಆ ಮನಸ್ಥಿತಿ ನಿಮ್ಮ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನೆಪಿರಲಿ. ನಿಮ್ಮ ಮಗುವಿನ ವಿಷಯದಲ್ಲಿ ನೀವು ಹೇಗೆ ನೆಡೆದುಕೊಳ್ಳಬೇಕು, ಮಗುವಿನ ಜೊತೆ ನಿಮ್ಮ ಸಂಬಂಧ ಹೇಗಿರಬೇಕು ಎಂಬ 10 ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ.

ಬಂದ ದೂರಿನ ಬಗ್ಗೆ ಕ್ರಮ ತೆಗೆದುಕೊಳ್ಳುವ ಮೊದಲು ನಿಮ್ಮ ಮಗುವನ್ನು ಏನು ನಡೆಯಿತು ಎಂಬುದರ ಕುರಿತು ವಿಚಾರ ಮಾಡಿ

ಮಗುವಿನ ಜೊತೆ ಸ್ನೇಹದಿಂದ ಮಾತನಾಡಿ. ಮಗುವಿಗೂ ಭಾವನಾತ್ಮಕವಾಗಿ ಉತ್ತರಿಸುವಂತಹ ವಾತಾವರಣ ನೀಡಿ.

ಮಗುವಿನ ಅಭಿಪ್ರಯವನ್ನು, ಕುತೂಹಲವನ್ನು, ಪ್ರಶ್ನೆಗಳನ್ನು ಗೌರವಿಸಿ.

ನಿಮ್ಮ ಮಗುವಿಗೆ ಸಮಸ್ಯೆ ಇದ್ದರೆ ಅದನ್ನು ತಕ್ಕಣ ಪರಿಹರಿಸಿ.

ನಿಮ್ಮ ಒತ್ತಡವನ್ನು ಮಗುವಿನ ಮೇಲೆ ಹೇರಬೇಡಿ.

ಮಗುವನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಮಗು ಬಾಗಿಯಾಗುವಂತೆ ಮಾಡಿ.

ನಿಮ್ಮ ಮಗು ಶಾಲೆಯಲ್ಲಿಯೂ ಎಲ್ಲ ಚಟುವಟಿಕೆಗಳಲ್ಲಿ ಸಕ್ರಯವಾಗಿ ತೊಡಗಿಕೊಳ್ಳುವಂತೆ ಸಲಹೆ ನೀಡಿ.

ಮನೆಯಲ್ಲಿ ಇರುವ ಸಂಪನ್ಮೂಲಗಳನ್ನು ಮಗು ಸರಿಯಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಿ. ಸಂಪನ್ಮೂಲಗಳ ಜೊತೆ ಮಗು ಸಂಪರ್ಕ ಇಟ್ಟು ಕೊಳ್ಳಲಿ,

ಮಗುವಿನ ಕಾಳಜಿ ನಿಮ್ಮ ಮೇಲಿದೆ. ಮಗುವಿನ ಅಗತ್ಯತೆಗಳನ್ನು ನೇವೇ ಗಮನಿಸಿ. ತನಗೇನು ಬೇಕು ಏನು ಬೇಡ ಎಂದು ನಿರ್ಧರಿಸುವ ಸಾಮರ್ತ್ಯ ನಿಮ್ಮ ಮಗುವಿಗಿಲ್ಲ ಎಂಬುದನ್ನು ಮಗುವಿಗೆ ನಿಧಾನವಾಗಿ ತಿಳಿಸಿ.

ನಮ್ಮ ಮಗುವಿಗೆ ಮೊಬೈಲ್ ಕೊಟ್ಟು ಆಟ ಆಡುವುದನ್ನು ಅಭ್ಯಾಸ ಮಾಡಬೇಡಿ. ಊಟ ತಿಂಡಿ ಸಮಯದಲ್ಲಿ ಟಿ.ವಿ ಣೊಡುವುದು, ಮೊಬೈಲ್ ನೋಡುವುದು ಕೆಟ್ಟ ಅಭ್ಯಾಸ ಎಂಬುದನ್ನು ನೀವು ಅರಿತುಕೊಳ್ಳಿ ಮಗುವಿಗೂ ಅದನ್ನು ತಿಳಿಸಿ. ಮಕ್ಕಳಿಗೆ ಹೊಡೆಯುವುದು ಬೈಯುವುದು ಮಾಡಬೇಡಿ.

Comments are closed.