ಕರಾವಳಿ

ಹಾರ್ಮೋನ್ಸ್ ಅಸಮತೋಲನದಿಂದ ದೇಹದಲ್ಲಿನ ಬದಲಾವಣೆ ಲಕ್ಷಣಗಳು

Pinterest LinkedIn Tumblr

ದೇಹದಲ್ಲಿನ ಅಂಗಾಂಗಗಳು ಕಾರ್ಯ ನಿರ್ವಹಿಸಲು ಸರಿಯಾದ ಸಮಯದಲ್ಲಿ ಹಾರ್ಮೋನ್ಸ್ ಬಿಡುಗಡೆಯಾಗುತ್ತದೆ. ಕೆಲವೊಮ್ಮೆ ಹಾರ್ಮೋನ್ಸ್ ಬಿಡುಗಡೆ ತಡವಾಗುತ್ತದೆ ಮತ್ತು ಹೆಚ್ಚುಕಡಿಮೆ ಆಗುವುದು ಸಾಮಾನ್ಯ ಆದರೆ ಹಾಗಾದಾಗಲೆಲ್ಲ ದೇಹದಲ್ಲಿ ಕೆಲವು ಬದಲಾವಣೆಯಾಗುತ್ತದೆ, ಅದರಿಂದ ಕೆಲವು ಸಮಸ್ಯೆಗಳುಗುತ್ತದೆ. ಹಾರ್ಮೋನ್ಸ್ ಅಸಮತೋಲನವಾದಾಗ ಇಂತಹ ಬದಲಾವಣೆಯವಾಗುವುದೆಂದು ಇಲ್ಲಿ ತಿಳಿಸಿದ್ದೇವೆ ಓದಿ.

ಮಟ್ಟಿನ ಸಮಸ್ಯೆ
ಸಾಮಾನ್ಯವಾಗಿ ಮಹಿಳೆ 21-35ದಿನಗಳ ಅಂತರದಲ್ಲಿ ಮುಟ್ಟಾಗುತ್ತಾಳೆ. ಆದರೆ ಅತಿ ಬೇಗ ಅಂದರೆ ಮೂರೇ ವಾರದಲ್ಲಿ ಅಥವಾ ತಿಂಗಳು ಕಳೆದರು ಮುಟ್ಟಾಗದೆ ಇರುವುದು ಹಾರ್ಮೋನ್ಸ್ ಸಮಸ್ಯೆ ಇಂದಾಗಿರಬಹುದು. ನೀವು 45-50 ವಯಸ್ಸಿನ ಆಸುಪಾಸಿನಲ್ಲಿದ್ದರೆ ಹಾರ್ಮೋನ್ಸ್ ಸಮಸ್ಯೆಯಲ್ಲ. ನೀವು ಹೀಗೆ ತೊಂದರೆ ಅನುಭವಿಸುತ್ತಿದ್ದರೆ ವೈದ್ಯರನ್ನ್ನು ಭೇಟಿ ಮಾಡಿ.

ನಿದ್ರೆಯ ಸಮಸ್ಯೆ
ನೀವು ನಿದ್ದೆಯ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡುತ್ತಿಲ್ಲವಾದರೆ ಅಥವಾ ಕಣ್ಣು ಮುಚ್ಚಿ ಮಲಗಿದರು ನಿದ್ದೆಯೇ ಬರುವುದಿಲ್ಲವಾದರೆ ಇದು ಸಹ ಹಾರ್ಮೋನ್ಸ್ ಸಮಸ್ಯೆಯಾಗಿರಬಹುದು. ನಿದ್ರೆಗೆ ಜಾರಲು ದೇಹದಲ್ಲಿ ಪ್ರೊಜೆಸ್ಟರಾನ್ ಎಂಬ ಹಾರ್ಮೋನ್ ಪ್ರಮುಖಪಾತ್ರ ವಹಿಸುತ್ತದೆ. ನಿಮ್ಮ ಹಾರ್ಮೋನ್ಸ್ ಲೆವೆಲ್ ಸಾಮಾನ್ಯಮಟ್ಟಕಿಂತ ಕಡಿಮೆ ಇದ್ದರೆ ನಿದ್ರೆ ಮಾಡಲು ಕಷ್ಟವಾಗುತ್ತದೆ. ಕಡಿಮೆ ಈಸ್ಟ್ರೋಜೆನ್ ನಿಮಗೆ ಬೆವರುವಂತೆ ಮಡಿಮಾಡುವುದು ಮತ್ತು ನಿದ್ದೆಗೆ ತೊಂದರೆಯನ್ನುಟುಮಾಡುವುದು.

ಮೊಡವೆಗಳು ಹೆಚ್ಚಾಗುವುದು
ಸಾಮಾನ್ಯವಾಗಿ ಮುಟ್ಟಾಗುವ ಸಮಯದಲ್ಲಿ ಅಂದರೆ 2-3ದಿನ ಮುಖದಲ್ಲಿ ಮೊಡವೆ ಆಗುವುದು ಸಾಮಾನ್ಯ. ಮೊಡವೆಗಳು ಹೆಚ್ಚಾಗಿ ಆಗುತ್ತಿದ್ದರೆ ಅದಕ್ಕೆ ಹಾರ್ಮೋನ್ಸ್ ಕಾರಣವಾಗಿರಬಹುದು.

ಮರೆಗುಳಿತನ
ನಿಮಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದ್ದರೆ ಅದಕ್ಕೆ ಹಾರ್ಮೋನ್ಸ್ ಸಮಸ್ಯೆ ಕಾರಣವಾಗಿರಬಹುದು. ಹಾಗೆ ನೀವು ರ್ತಿರೋಇಸಂಸ್ಯೆ ಎದುರಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ.

ಹೊಟ್ಟೆನೋವು
ನಿಮಗೆ ಪಿರೇಡ್ಸ್ ಸಮಯದಲ್ಲಿ ಹೊಟ್ಟೆನೋವು ತೀವ್ರವಾಗಿ ಕಾಣಿಸಿಕೊಂಡರೆ ಮತ್ತು ಡಿಯೇರಿಯ,ವಾಂತಿ-ಭೇದಿ ತಿಂದ ಆಹಾರ ಅರಗದೆ ಇರುವ ರೀತಿಯಾಗುತ್ತಿದ್ದರೆ ಇದಕ್ಕೆ ಹಾರ್ಮೋನ್ಸ್ ಸಮಸ್ಯೆ ಕಾರಣವಿರಬಹುದು.

ದೇಹದ ತೂಕ ಹೆಚ್ಚಾಗುವುದು
ಅತಿಯಾಗಿ ತಿನ್ನಬೇಕೆನಿಸುವುದು,ಮನಸ್ಸಿಗೆ ಕಿರಿಕಿರಿ ಉಂಟಾಗುವುದು ಈಸ್ಟ್ರೋಜಿನ್ ನ ಮಟ್ಟ ಕಡಿಮೆ ಇದ್ದಾಗ ಹೇಗಾಗಬಹುದು. ಈಸ್ಟ್ರೋಜಿನ್ ಕಡಿಮೆ ಇದ್ದಾಗ ದೇಹದಲ್ಲಿ ಲೆಪ್ಟಿನ್ ಮಟ್ಟದಮೇಲೆ ಪರಿಣಾಮ ಬೀರುತ್ತದೆ, ಲೆಪ್ಟಿನ್ ಹಾರ್ಮೋನ್ ದೇಹದ ಆಹಾರದ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖಪಾತ್ರವಹಿಸುತ್ತದೆ.

ತಲೆ ನೋವು
ತಲೆ ನೋವು ಬರುವುದು ಸಂನ್ಯ, ಆದರೆ ಈಸ್ಟ್ರೋಜಿನ್ ಮಟ್ಟ ಕಡಿಮೆ ಇದ್ದಾಗ ಮುಟ್ಟಿನ ಸಮಯದಲ್ಲಿ ಆಗಾಗ್ಗೆ ತಲೆನೋವು ಸಂಭವಿಸಬಹುದು. ಇದು ಕೂಡ ಹಾರ್ಮೋನ್ ಸಮಸ್ಯೆ ಆಗಿರಬಹುದು.

ಯೋನಿ ಒಣಗುವುದು
ಸಾಮನ್ಯವಾಗಿ ಯೋನಿ ಒಣಗಿದ್ದರೆ ಏನು ತೊಂದರೆ ಇಲ್ಲ. ಆದರೆ ನಿಮಗೆ ಅಲ್ಲಿ ಯಾವಾಗಲು ಕಡಿತ ಮತ್ತು ಒಣಗಿದ್ದರೆ ಹಾರ್ಮೋನ್ಸ್ ಸಮಸ್ಯೆ ಇಂದಾಗಿರಬಹುದು. ಈಸ್ಟ್ರೋಜೆನ್ ಹಾರ್ಮೋನ್ ಯೋನಿಯ ಟಿಶ್ಯೂ ಅನ್ನು ತೇವದಿಂದಿಡಲು ಕಡಿಮೆ ಮಾಡುತ್ತದೆ, ನಿಮಗೆ ಈ ಸಮಸ್ಯೆ ಇದ್ದಾರೆ ಇದು ಕೂಡ ಹಾರ್ಮೋನ್ಸ್ ನಲ್ಲಿನ ಏರುಪೇರಿಂದಾಗಿರಬಹುದು.

Comments are closed.