ಕರಾವಳಿ

ಮಗು ಬೆರಳು ಚೀಪುವುದು ಅತಿಯಾದರೆ, ಬಿಡಿಸಲು ಈ ಸಲಹೆ

Pinterest LinkedIn Tumblr

ಮಕ್ಕಳು ಆರಾಮ ಮತ್ತು ಭದ್ರತೆಯನ್ನ ಎಲ್ಲಾ ಸಮಯದಲ್ಲೂ ಬಯಸುತ್ತಾರೆ. ನಿಮ್ಮ ಮಗುವಿಗೆ ಬೋರ್ ಆದಾಗ ಅಥವಾ ಅಭದ್ರತೆಯ ಭಾವ ಕಾಡಿದಾಗ, ನಿಮ್ಮ ಮಗುವಿನ ಬೆರಳು ಅದರ ಬಾಯಿಯ ಕಡೆ ಹೋಗುತ್ತದೆ. ಈ ಅಭ್ಯಾಸ ಹೀಗೆ ತಿಂಗಳು, ವರ್ಷಗಳ ಕಾಲ ಮುಂದುವರೆಯುತ್ತದೆ. ಬೆರಳು ಚೀಪುವುದು ಮಗುವಿನ ತನ್ನನ್ನ ತಾನು ಸಮಾಧಾನಪಡಿಸಿಕೊಳ್ಳುವ ವಿಧಾನಗಳಲ್ಲಿ ಒಂದು. ಆದರೆ ಅತಿಯಾದರೆ ಎಲ್ಲವೂ ಕೆಟ್ಟದೆ. ಬೆರಳು ಚೀಪುವುದನ್ನ ಬಿಡಿಸಲು ಕೆಲವೊಂದು ಸಲಹೆಗಳು ಇಲ್ಲಿವೆ :

೧. ಮಗುವನ್ನ ಟ್ರಿಗರ್ ಮಾಡುವುದು ಯಾವುದೆಂದು ತಿಳಿಯಿರಿ
ನಿಮ್ಮ ಮಗುವು ಬೆರಳು ಚೀಪುವುದು ಯಾವುದೋ ಒಂದು ವಿಷಯಕ್ಕೆ ಪ್ರತಿಕ್ರಿಯೆ ಆಗಿರುತ್ತದೆ. ಉದಾಹರಣೆಗೆ, ನಿಮ್ಮ ಮಗುವಿಗೆ ಬೋರ್ ಆದಾಗ ಅಥವಾ ಹಸಿವಾದಾಗ ಅಥವಾ ಸುಸ್ತಾದಾಗ, ಮಗುವು ಬೆರಳು ಚೀಪುತ್ತದೆ. ಇಂತಹ ಪ್ರಕರಣದಲ್ಲಿ, ನಿಮ್ಮ ಮಗುವಿಗೆ ಈ ರೀತಿ ಬೆರಳು ಚೀಪುವಂತೆ ಉತ್ತೇಜನ ನೀಡುವ ವಿಷಯ ಯಾವುದೆಂದು ತಿಳಿದುಕೊಳ್ಳಿ. ಒಂದು ವೇಳೆ ಕೇವಲ ಏನು ಚಟುವಟಿಕೆಯಿಲ್ಲದೆ ಬೋರ್ ಆದಾಗ ನಿಮ್ಮ ಮಗುವು ಬೆರಳು ಚೀಪುತ್ತದೆ ಎಂದರೆ, ನಿಮ್ಮ ಮಗುವು ಕಾರ್ಯನಿರತ ಆಗಿರುವಂತೆ ಚಟುವಟಿಕೆಗಳು, ಆಟಗಳಲ್ಲಿ ತೊಡಗಿಸಿ, ಮಗುವಿನ ಕೈಗಳಿಗೆ ಕೆಲಸ ಕೊಡಿ.

ಒಂದು ವೇಳೆ ಹಸಿವು ಉಂಟಾದಾಗ ನಿಮ್ಮ ಮಗುವು ಬೆರಳು ಚೀಪುತ್ತದೆ ಎಂದರೆ, ಸಮಯಕ್ಕೆ ಸರಿಯಾಗಿ ಎದೆಹಾಲು, ಆಹಾರ ನೀಡಿ ಮಗುವು ಹಸಿವಿನಿಂದ ಇರದಂತೆ ನೋಡಿಕೊಳ್ಳಿ. ಒಂದು ವೇಳೆ ನಿಮ್ಮ ಮಗುವು ಸುಸ್ತಾದಾಗ ಬೆರಳು ಚೀಪುತ್ತದೆ ಎಂದರೆ, ನಿಮ್ಮ ಮಗುವಿಗೆ ಬೇಕಿರುವುದು ಒಂದು ತೊಟ್ಟಿಲು ಮತ್ತು ಒಳ್ಳೆಯ ನಿದ್ದೆ.

ಬೆರಳು ಚೀಪುವುದು ಒತ್ತಡಕ್ಕೆ ಅಥವಾ ಇನ್ನೊಬ್ಬರ ಸಾನಿಧ್ಯ ಬಯಸುವ ಪ್ರತಿಕ್ರಿಯೆ ಆಗಿರಬಹುದು. ಒಂದು ವೇಳೆ ನಿಮ್ಮ ಮಗುವು ಈ ಭಾವನೆಯಿಂದ ಬೆರಳು ಚೀಪುತ್ತಿದ್ದರೆ, ನೀವು ನಿಮ್ಮ ಮಗುವನ್ನ ಎತ್ತಾಡಿಸಿ, ಸ್ವಲ್ಪ ಮುದ್ದು ಮಾಡಿದರೆ ಸಾಕು. ಒಂದು ವೇಳೆ ಒತ್ತಡವು ನಿಮ್ಮ ಮಗುವು ಬೆರಳು ಚೀಪುವುದಕ್ಕೆ ಕಾರಣ ಆಗಿದ್ದರೆ, ಅದಕ್ಕೆ ಕಾರಣ ಏನೆಂದು ತಿಳಿದು ಆರಾಮ ನೀಡಿ.

೨. ಪರ್ಯಾಯಗಳು
ಒಂದು ವೇಳೆ ನಿಮ್ಮ ಮಗುವಿಗೆ ಬೆರಳು ಚೀಪುವುದರ ಕಡೆ ಅತಿಯಾದ ಒಲವು ಇದ್ದರೆ, ಪ್ರತಿ ಬಾರಿಯೂ ನಿಪ್ಪಲ್ ಕೊಟ್ಟು ಸಮಾಧಾನ ಮಾಡುವುದನ್ನು ಕಲಿಸಬೇಡಿ. ಮಸಾಜ್ ಮಾಡುವುದು, ತೂಗುವುದು ಅಥವಾ ಹಾಡುವುದು – ಇಂತಹ ಪರ್ಯಾಯ ವಿಧಾನಗಳನ್ನ ಕಂಡುಕೊಳ್ಳಿ. ಇಂತಹ ಪರ್ಯಾಯಗಳನ್ನ ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಪರಿಚಯಿಸಿ. ನಿಮ್ಮ ಮಗುವೇ ಕಾಲಕ್ರಮೇಣ ಬೆರಳು ಚೀಪುವುದಕ್ಕೆ ಪರ್ಯಾಯವನ್ನು ಕಂಡುಕೊಂಡು ಸಮಾಧಾನ ಮಾಡಿಕೊಳ್ಳುತ್ತವೆ.

೩. ಗಮನ ಬೇರೆಡೆ ಸೆಳೆಯಿರಿ
ಪುಟ್ಟ ಹೆಬ್ಬೆರಳುಗಳಿಗೆ ಬೋರ್ ಆದಾಗ, ಅವರು ಮೊದಲು ಮಾಡುವ ಕೆಲಸವೇ ಬೆರಳನ್ನು ಬಾಯಲ್ಲಿಡುವುದು. ನಿಮ್ಮ ಮಗುವು ತನ್ನ ಬೆರಳನ್ನು ತನ್ನ ಬಾಯಲ್ಲಿ ಇಡುತ್ತಿದೆ ಎನ್ನುವಷ್ಟರಲ್ಲಿ ನಿಮ್ಮ ಮಗುವಿನ ಗಮನವನ್ನ ಬೇರೆ ಕಡೆ ಸೆಳೆಯಿರಿ ಅಥವಾ ಯಾವುದಾದರು ಆಟಿಕೆ ಕೊಟ್ಟು ಕೈಗಳನ್ನ ಕಾರ್ಯನಿರತವಾಗಿಡಿ.

೪. ಅವಾಗವಾಗ ಮೃದುವಾಗಿ ನೆನಪಿಸುತ್ತಿರಿ
ನಿಮ್ಮ ಮಗುವು ಸ್ವಲ್ಪ ದೊಡ್ಡದಾಗುತ್ತಿದ್ದಂತೆ, ನಿಮ್ಮ ಮಗುವು ನೋಡಿದ ತಕ್ಷಣ ಬೆರಳು ಚೀಪುವುದನ್ನು ನಿಲ್ಲಿಸುವಂತಹ ಒಂದು ಸನ್ನೆಯನ್ನು ಮಗುವಿಗೆ ಪರಿಚಯಿಸಿ. ಹೊರಗಡೆ ಇದ್ದಾಗ, ನಿಮ್ಮ ಮಗುವಿಗೆ ನಾಚಿಕೆಯೂ ಆಗದಂತೆ ಬೆರಳು ಚೀಪಬೇಡ ಎಂದು ಹೇಳಬಹುದು. ನಡೆಯಲು ಕಲಿತಿರುವ ಮಕ್ಕಳು “ಬೇಡ” ಎಂಬ ಸೂಚನೆ ಹೊರಡಿಸುವ ಪದಗಳನ್ನ ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುತ್ತಾರೆ. ಇಂತಹ ಒಂದು ಪದ ಆಗಲಿ ಅಥವಾ ಒಂದು ಸನ್ನೆಯನ್ನ ನಿಮ್ಮ ಮಗುವಿಗೆ ಸೂಚನೆ ನೀಡಲು ಬಳಸಿ.

೫. ಪ್ರೇರಣೆ ನೀಡಿ
ಒಂದು ವೇಳೆ ನೀವೇನಾದರೂ ಬಲವಂತವಾಗಿ ನಿಮ್ಮ ಮಗುವಿನ ಬೆರಳನ್ನು ಬಾಯಿಂದ ಆಚೆಗೆ ತೆಗೆದಿರಿ ಎಂದರೆ, ನೀವು ಮಾಡಬಹುದಾದ ಅದಕ್ಕಿಂತ ಮೂರ್ಖತನದ ಕೆಲಸ ಮತ್ತೊಂದಿಲ್ಲ. ಹೀಗಾಗಿ, ನಿಮ್ಮ ಮಗು ತಾನಾಗಿಯೇ ಬೆರಳು ಚೀಪುವುದನ್ನು ಬಿಡುವಂತೆ ಅವರಿಗೆ ಪ್ರೇರಣೆ ನೀಡಿ. ಅವನು ದೊಡ್ಡವನಾಗುತ್ತಿದ್ದ ಹಾಗೆ ಏನೆಲ್ಲಾ ಕೆಲಸಗಳನ್ನ ಬಿಟ್ಟಿದ್ದಾನೆ ಎಂದು ಹೇಳಿ (ಉದಾಹರಣೆಗೆ ಎದೆಹಾಲು ಬಿಟ್ಟಿದ್ದು). ನೀವು ಹೀಗೆ ದೊಡ್ಡವನಾಗಿ ಬೆಳೆಯುತ್ತಿರುವುದಕ್ಕೆ ನಿಮಗೆ ಅವನ ಬಗ್ಗೆ ಎಷ್ಟು ಹೆಮ್ಮೆ ಇದೆ ಎಂದು ಹೇಳಿ. ಹೀಗೆ ಹೇಳುತ್ತಾ, ಹೇಳುತ್ತಾ ಬೆರಳು ಚೀಪುವುದನ್ನು ಏಕೆ ಬಿಡಬೇಕು ಎಂಬುದನ್ನ ಮಧ್ಯದಲ್ಲಿ ಹೇಳಿ. ಅಲ್ಲದೆ ನೀವು ನಿಮ್ಮ ಮಗುವಿನ ನೆಚ್ಚಿನ ಕಾರ್ಟೂನ್ ಪಾತ್ರದ ಬಗ್ಗೆ ಕೇಳುವ ನೆಪದಲ್ಲೂ ನಿಮ್ಮ ಮಗುವಿಗೆ ಈ ವಿಷಯವನ್ನ ಮನದಟ್ಟು ಮಾಡಬಹುದು. ಉದಾಹರಣೆಗೆ “ಡೋರೆಮಾನ್ ಇನ್ನೂ ಬೆರಳು ಚೀಪುತ್ತಾನಾ?”, “ಛೋಟಾ ಭೀಮ್ ಬೆರಳು ಚೀಪುತ್ತಾನಾ?” ಎಂದು ಕೇಳಬಹುದು.

Comments are closed.