ಕರಾವಳಿ

‘ವಿದ್ಯೆಯ ಮೂಲಕ ಸಮಾಜದ ಏಳಿಗೆ ಸಾಧ್ಯ’: ದೇವಾಡಿಗ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಡಾ. ಕೆ.ವಿ ದೇವಾಡಿಗ

Pinterest LinkedIn Tumblr

ಕುಂದಾಪುರ: ವಿದ್ಯಾದಾನ, ಅನ್ನದಾನ, ಆರೋಗ್ಯ, ವಸತಿ, ಸ್ವಚ್ಚತೆಗೆ ಕಾಳಜಿ ನೀಡುವ ಜೊತೆಗೆ ಬಡ ಜನರ ಪರವಾದ ಕಾಳಜಿ ಎಲ್ಲರಲ್ಲಿಯೂ ಇರಬೇಕು. ಹೀಗಾದಾಗ ಮಾತ್ರವೇ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಮಂಗಳೂರಿನ ನ್ಯೂರೊ ತಜ್ಞ ಡಾ. ಕೆ.ವಿ ದೇವಾಡಿಗ ಹೇಳಿದರು.

ಅವರು  ಬಾರಕೂರಿನಲ್ಲಿ ದೇವಾಡಿಗ ಸಮಾಜದವರಿಂದ ನಿರ್ಮಾಣಗೊಂಡ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಬ್ರಹ್ಮ ಕುಂಭಾಭಿಷೇಕದ ಬಳಿಕ ಜರುಗಿದ ದೇವಾಡಿಗ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನ ಸೇವೆಯೇ ದೇವರ ಸೇವೆ..
ಜನರಿಗೆ ಮಾಡುವ ಸೇವೆಯು ದೇವರ ಸೇವೆಯಷ್ಟೇ ಪವಿತ್ರವಾದುದು. ವಿದ್ಯೆಗೆ ಮತ್ತಷ್ಟು ಆದ್ಯತೆ ನೀಡುವ ಮೂಲಕ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯಾವಂತನಾಗುವ ಹಾಗಾಗಬೇಕು. ಇದರಿಂದ ದೇವಾಡಿಗ ಸಮಾಜದ ಏಳಿಗೆ ಸಾಧ್ಯವಿದೆ. ದೇವಸ್ಥಾನ ನಿರ್ಮಾಣ ಕಾರ್ಯದಂತೆಯೇ ದೇವಾಡಿಗ ಸಮಾಜ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.

ಬಾರ್ಕೂರು ಜನಾರ್ಧನ ದೇವಾಡಿಗ ಮಾತನಾಡಿ, ಧಾರ್ಮಿಕತೆಯ ವಿಚಾರ ಮಾತ್ರದಿಂದಲೇ ಇಂದು ಇಷ್ಟು ಮಂದಿ ಜನರನ್ನು ಒಗ್ಗೂಡಿಸಲಾಗಿದೆ. ಮುಂದೆಯೂ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಲಿದೆ ಎಂದರು. ಮುಂಬೈ ಸಂಘದ ರವಿ ಎಸ್. ದೇವಾಡಿಗ ಮಾತನಾಡಿ, ಸಂಘಟಿತ ಪ್ರಯತ್ನ ಹಾಗೂ ಉತ್ತಮ ಮನಸ್ಸುಳ್ಳ ಜನರ ಒಗ್ಗೂಡುವಿಕೆಯಿಂದ ಇಂತಹ ಮಹಾನ್ ಕಾರ್ಯವಾಗಿದೆ.

ರಘುರಾಮ ದೇವಾಡಿಗ ಆಲೂರು ಮಾತನಾಡಿ, ದೇವಾಡಿಗ ಸಮಾಜದ ಐತಿಹಾಸಿಕ ದಿನವೆಂದರೆ ತಪ್ಪಾಗಲಾರದು. ದೇವಾಡಿಗರು ಸಂಘಟಿತರಾಗಲು ಶ್ರೀ ಏಕನಾಥೇಶ್ವರೀ ದೇವಿ ಕಾರಣ. ಮುಂದೆಯೂ ಕೂಡ ಉತ್ತಮ ಕರ್ಯಗಳಮೂಲಕ ಸಮಾಜದಲ್ಲಿನ ಅಶಕ್ತರಿಗೆ ಸಹಾಯ, ಮಕ್ಕಳಿಗೆ ವಿದ್ಯಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕೆಂದರು.

ಕೆ. ದೇವರಾಜ್ ಅವರು ಮಾತನಾಡಿ, ಸಾತ್ವಿಕ ಜೀವನದ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಈ ದೇವಸ್ಥಾನದಲ್ಲಿ ಒಂದು ಕೌನ್ಸೆಲಿಂಗ್ ಸೆಂಟರ್, ವ್ಯಕ್ತಿತ್ವ ವಿಕಸನ ಕೇಂದ್ರದ ಜೊತೆಗೆ ಸಮಾಜ ಭವನ ನಿರ್ಮಾಣವಾದಲ್ಲಿ ಎಲ್ಲರಿಗೂ ಅನುಕೂಲಕರವಾಗಲಿದೆ ಎಂದರು.

ಸಮಾಜೋತ್ಸವದ ಹೈಲೆಟ್ಸ್:
ಸಮಾಜೋತ್ಸವದಲ್ಲಿ ಕೆಲವು ನಿರ್ಣಯ ಕೈಗೊಳ್ಳುವಂತೆ ಉಡುಪಿ ದೇವಾಡಿಗ ಸಂಘದ ಅಧ್ಯಕ್ಷರು ವಿನಂತಿಸಿದರು.

ಸಮಾಜೋತ್ಸವಕ್ಕೆ 15 ಸಾವಿರ ಜನರು ಭಾಗವಹಿದ್ದು ಧಾರ್ಮಿಕತೆ ಜನರನ್ನು ಒಗ್ಗೂಡಿಸಬಲ್ಲದು.

ಶಿಕ್ಷಣದ ಜೊತೆ ಸಂಸ್ಕಾರವನ್ನು ಮಕ್ಕಳಿಗೆ ನೀಡಿ.

ಮದುವೆ ಸಮಯದಲ್ಲಿ ದೇವಾಡಿಗ ಸಮಾಜದವರು ಮಾಂಸಹಾರ ಮತ್ತು ಮದ್ಯಪಾನ ನಿಷೇದ ಮಾಡುವುದು ಉತ್ತಮ

ಸಮಾಜದ ವಿದ್ಯಾ ಸಂಸ್ಥೆಗಳು ನಿರ್ಮಾಣವಾದಲ್ಲಿ ವಿದ್ಯೆಗೆ ಸಹಕಾರ

ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಿ.

ಶ್ರೀ ಏಕನಾಥೇಶ್ವರೀ ದೇವಸ್ಥಾನದ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥರಾದ ಹಿರಿಯಡ್ಕ ಮೋಹನ್ ದಾಸ್ ಕಾರ್ಯಕ್ರಮದಲ್ಲಿ ಸಹಕರಿಸಿದ ಮತ್ತು ದಾನಿಗಳ ಹೆಸರನ್ನು ವಾಚಿಸಿದರು. ವಿಸ್ವಸ್ಥರಾದ ಅಣ್ಣಯ್ಯ ಶೇರಿಗಾರ್ ಪ್ರಾಸ್ತಾವಿಕ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆ ಕೂಡ ಈ ಸಂದರ್ಭ ನಡೆಯಿತು. ಸಮಾಜೋತ್ಸವ ಕಾರ್ಯಕ್ರಮ ಸಂಯೋಜಕರಾದ ಎಚ್. ಮೋಹನದಾಸ್ ದಂಪತಿಗಳನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.

ರಂಜಿನಿ ಮೋಯಿಲಿ ಮುಂಬಯಿ ಪ್ರಾರ್ಥಿಸಿದರು. ಜನಾರ್ದನ ದೇವಾಡಿಗ ಪಡು ಪಣಂಬೂರು ಸ್ವಾಗತಿಸಿ, ರವಿ ತಲ್ಲೂರು ಕಾರ್ಯಕ್ರಮ ನಿರೂಪಿಸಿ, ನರಸಿಂಹ ದೇವಾಡಿಗ ವಂದಿಸಿದರು.

ಈ ಸಂದರ್ಭದಲ್ಲಿ ಪಿ. ರಾಮಣ್ಣ ಶೇರಿಗಾರ್ ಬೆಳಗಾವಿ, ವಾಮನ ಮರೋಳಿ ಮಂಗಳೂರು, ಗೋಪಾಲ ಎಮ್. ಮೊಲಿ ಮುಂಬೈ, ಸುರೇಶ್ ಡಿ. ಪಡುಕೋಣೆ ಮುಂಬೈ, ತುಂಗಾ ಕೃಷ್ಣ ದೇವಾಡಿಗ ಮುಂಬೈ, ಬಿ. ಅಣ್ಣಯ್ಯ ಶೇರಿಗಾರ್ ಪುಣೆ, ಬಿ. ಜನಾರ್ಧನ ದೇವಾಡಿಗ ಬಾರ್ಕೂರು, ನರಸಿಂಹ ಬಿ. ದೇವಾಡಿಗ ಉಡುಪಿ, ನಾರಾಯಣ್ ಎಮ್.ಡಿ. ದುಬೈ, ದಿನೇಶ್ ಸಿ. ದೇವಾಡಿಗ ನಾಗೂರು ದುಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ, ದಿನೇಶ್ ಕುಮಾರ್ ದುಬೈ, ಸುರೇಶ್ ದೇವಾಡಿಗ ದುಬೈ, ಜನಾರ್ಧನ ಎಸ್ ದೇವಾಡಿಗ ಉಪ್ಪುಂದ, ನಾಗರಾಜ್ ಪಡುಕೋಣೆ ಮುಂಬೈ, ಸುರೇಶ್ ಕೆ. ದೇವಾಡಿಗ ಕಂಚಿಕಾನ ದುಬೈ, ರಾಜೀವ ದೇವಾಡಿಗ ತ್ರಾಸಿ, ಶೀನ ದೇವಾಡಿಗ ತ್ರಾಸಿ ದುಬೈ, ಡಾ| ಕೆ. ದೇವರಾಜ್ ಮಂಗಳೂರು, ರವಿ ಎಸ್ ದೇವಾಡಿಗ ಮುಂಬೈ, ರಾಘವೇಂದ್ರ ದೇವಾಡಿಗ, ಸಾಂಗ್ಲಿ, ಶೇಖರ ದೇವಾಡಿಗ ಐರೋಳಿ ನವಿಮುಂಬಯಿ, ರಮೇಶ ದೇವಾಡಿಗ ವಂಡ್ಸೆ ಬೆಂಗಳೂರು, ವಾಸು ಎಸ್ ದೇವಾಡಿಗ ಮುಂಬೈ, ಮಂಜುನಾಥ ದೇವಾಡಿಗ ಪಡುಕೋಣೆ, ಕೆ ನಾರಾಯಣ ದೇವಾಡಿಗ ಕುಂದಾಪುರ, ಗಣೇಶ ದೇವಾಡಿಗ ಇಸ್ಲಾಂಪುರ, ಎಸ್. ಎಮ್. ಚಂದ್ರ ಬೆಂಗಳೂರು, ನರಸಿಂಹ ದೇವಾಡಿಗ ಪುಣೆ, ಮಹಾಬಲೇಶ್ವರ ದೇವಾಡಿಗ ಪುಣೆ, ಕೆ. ಮಂಜುನಾಥ ದೇವಾಡಿಗ ದಾವಣಗೆರೆ, ಮಹಾಬಲ ದೇವಾಡಿಗ ನವದೆಹಲಿ, ಗಣೇಶ ಆರ್ ದೇವಾಡಿಗ ಬೆಂಗಳೂರು, ಬಿ. ವಿ. ಪ್ರಶಾಂತ್ ಬಾರ್ಕೂರು, ರಾಜು ದೇವಾಡಿಗ ಕಾರ್ಕಡ ಬೆಂಗಳೂರು, ಕೆ. ಗೋವಿಂದ ದೇವಾಡಿಗ ದಾಸರಹಳ್ಳಿ ಬೆಂಗಳೂರು, ಅಣ್ಣು ದೇವಾಡಿಗ ಧರ್ಮಸ್ಥಳ. ನೆಲ್ಲಿಬೆಟ್ಟು ನರಸಿಂಹ ದೇವಾಡಿಗ ಕಾರ್ಕಡ, ಬಿ. ನರಸಿಂಹನ್ ಪೊವಾ ಮುಂಬೈ, ಚೆನ್ನಪ್ಪ ಮೊಲಿ ಉಡುಪಿ, ನಿತೇಶ್ ದೇವಾಡಿಗ ಬೆಂಗಳೂರು, ರಮೇಶ್ ಜಿ. ದೇವಾಡಿಗ ಮಾರ್ಪಳ್ಳಿ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.