ಕರಾವಳಿ

ಬುರುಡೆಯ ಮೇಲಿರುವ ಕೂದಲು ವಯ್ಯಸಿಗೆ ಮೊದಲೇ ಉದುರದಿರಲು ಈ ಟಿಪ್ಸ್

Pinterest LinkedIn Tumblr

ಹೆಣ್ಣಿಗೆ ಉದ್ದವಾದ ಕೂದಲಿದ್ದರೆ, ನೋಡಲು ಅಂದ. ಅವಳು ಎಷ್ಟೇ ಸುಂದರವಾಗಿದ್ದರೂ ದಪ್ಪನೆಯ ಉದ್ದನೆಯ ಕೂದಲಿಲ್ಲದಿದ್ದರೆ, ಅವಳ ಸೌಂದರ್ಯ ಅಪೂರ್ಣ. ಸ್ವಲ್ಪ ವರುಷಗಳ ಹಿಂದೆ ಚಿಕ್ಕ ಕೂದಲು ಒಂದು ರೀತಿಯ ಫ್ಯಾಷನ್ ಆಗಿತ್ತು. ಆದರೆ, ಈಗ ಮತ್ತೆ ಉದ್ದನೆಯ ಕೂದಲಿನ ಟ್ರೆಂಡ್ ಜಾಸ್ತಿಯಾಗಿದೆ. ಸಿನಿಮಾ ನಟಿಯರಿಂದ ಹಿಡಿದು, ಧಾರವಹಿಯಲ್ಲಿ ನಟಿಸುವ ಹುಡುಗಿಯರಲ್ಲಿ ಉದ್ದನೆ ಕೂದಲನ್ನು ನಾವು ಕಾಣಬಹುದು. ಆದರೆ ಬಹಳಷ್ಟು ಜನರಿಗೆ ಉದ್ದನೆಯ ಕೂದಲು ಬಿಡಿ, ಇರುವ ಕೂದಲು ಉಳಿದರೆ ಸಾಕು ಎನ್ನುವಷ್ಟು ನೋವನ್ನು ಅನುಭವಿಸುತ್ತಿರುತ್ತಾರೆ.

ಒತ್ತಡದ ಜೀವನ, ಪೋಷ್ಟಿಕವಲ್ಲದ ಆಹಾರಗಳು, ವ್ಯತ್ಯಾಸವಾದ ನಿದ್ರೆಯ ಸಮಯ, Sedentary ಜೀವನ ಶೈಲಿ ಇತ್ಯಾದಿ ಅಂಶಗಳು, ನಮ್ಮ ದೇಹದಲ್ಲಿ hormoneಗಳ ಏರು-ಪೇರನ್ನು ಉಂಟು ಮಾಡಿ, ಬುರುಡೆಯ ಮೇಲಿರುವ ಕೂದಲನ್ನು ವಯ್ಯಸಿಗೆ ಮೊದಲೇ ಉದುರುವಂತೆ ಮಾಡುತ್ತದೆ.

ಇತ್ತೀಚೆಗೆ ತೆರೆಕಂಡ ‘ಒಂದು ಮೊಟ್ಟೆಯ ಕತೆ’, ಸಿನಿಮಾದಲ್ಲಿ ಬೋಳು ತಲೆ ಅಥವಾ ಕೂದಲು ಉದುರುವಿಕೆಯಿಂದ, ಸಮಾಜದಲ್ಲಿ ಅನುಭವಿಸುವ ತಾತ್ಸಾರ, ಹೀಯಳಿಕೆಯನ್ನು ನಾವು ನೋಡಿದ್ದೇವೆ. ಇದು ಗಂಡಸರಲ್ಲಿ ಮಾತ್ರವಲ್ಲ, ಹೆಂಗಸರಲ್ಲಿ ಕೂಡ ಸಾಮಾನ್ಯವಾಗಿದೆ ಎಂದರೆ ತಪ್ಪಾಗುವುದಿಲ್ಲ. ಹಾಗಾದರೆ ಉದ್ದವಾದ ಕೂದಲನ್ನು ಪಡೆಯಲು ಹಾಗು ಕೂದಲುದುರುವಿಕೆ ಪರಿಹಾರವನ್ನು ನಾವು ನಿಮಗೆ ತಿಳಿಸುತ್ತೇವೆ.

೧. ಆಲಿವ್ ಎಣ್ಣೆ
– ಬೇಕಾಗುವ ಸಾಮಗ್ರಿಗಳು: ೨ ಚಮಚ ಆಲಿವ್ ಎಣ್ಣೆ.
– ಬೇಕಾಗುವ ಸಮಯ: ೪೫ ನಿಮಿಷಗಳು
– ವಿಧಾನ
೧. ಮೊದಲಿಗೆ ಆಲಿವ್ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿಕೊಳ್ಳಿ.
೨. ನೆತ್ತೆಯ ಮೇಲೆ, ಹಣೆಯ ಮೇಲಇರುವ ಕೂದಲಿಗೆ ೧೫ ನಿಮಿಷಗಳ ಕಾಲ ಮಸಾಜ್ ಮಾಡಿ.
೩. ನೆತ್ತಿಯ ನಂತರ, ಕೂದಲಿಗೆ ಎಣ್ಣೆಯನ್ನು ಸವರಿ.
೪. ೩೦ ನಿಮಿಷಗಳ ಕಾಲ ತಲೆಯಲ್ಲಿ ಎಣ್ಣೆಯನ್ನು ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಹರ್ಬಲ್ ಶಂಪೂವಿನಲ್ಲಿ ತಲೆಸ್ನಾನ ಮಾಡಿ.
೫. ವಾರಕ್ಕೆ ೨-೩ ಬಾರಿ ಹೀಗೆ ಮಾಡಿದರೆ, ಕೂದಲು ಉದುರುವಿಕೆ ಕಡಿಮೆಯಾಗಿ, ದಪ್ಪನೆಯ ಕೇಶ ನಿಮ್ಮದಾಗುತ್ತದೆ.

೨. ಬೇವಿನ ಸೊಪ್ಪು/ ಬೇವಿನ ಮರದ ಎಲೆಗಳು
– ಬೇಕಾಗುವ ಸಾಮಗ್ರಿಗಳು:ಒಂದು ಹಿಡಿಯಷ್ಟು ಬೇವಿನ ಎಲೆಗಳು.ಸ್ವಲ್ಪ ನೀರು.
– ಬೇಕಾಗುವ ಸಮಯ: ೧೫ ನಿಮಿಷಗಳು.
– ವಿಧಾನ
೧. ಮೇಲೆ ಹೇಳಿದ ಪ್ರಮಾಣದ ಎಲೆಗಳನ್ನು, ನೀರಿನೊಂದಿಗೆ ಬೆರೆಸಿ ಪೇಸ್ಟ್ ಹದಕ್ಕೆ ರುಬ್ಬಿಕೊಳ್ಳಿ.
೨. ಸ್ವಲ್ಪ ನೀರನ್ನು ಬೆರಿಸಿ ಒಂದು ಬಾಟಲಿಗೆ ತೆಗೆದುಕೊಳ್ಳಿ.
೩. ನೆತ್ತಿ ಹಾಗು ಬುರುಡೆಗೆ ಚೆನ್ನಾಗಿ ಹಚ್ಚಿ.
೪. ೧೫ ನಿಮಿಷಗಳ ನಂತರ ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡಿ.
೫. ವಾರಕ್ಕೆ ೪-೫ ಬಾರಿ ಮಾಡಿದರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.

೩. ಆಲುಗಡ್ಡೆನೀರು
– ಬೇಕಾಗುವ ಸಾಮಗ್ರಿಗಳು: ೨ ಆಲುಗಡ್ಡೆ,೨ ಬಟ್ಟಲು ನೀರು.
– ಬೇಕಾಗುವ ಸಮಯ:೪-೫ ನಿಮಿಷಗಳು.
– ವಿಧಾನ
೧. ಮೊದಲಿಗೆ ೨ ಆಲುಗಡ್ಡೆಯನ್ನು ನೀರಿನಲ್ಲಿ ಬೇಯಿಸಿ.
೨. ತಲೆಗೆ ಸ್ನಾನ ಮಾಡುವಾಗ ಹೇಗೆ ನೀವು ತಲೆಯನ್ನು ನೀರಿನಿಂದ ಒದ್ದೆ ಮಾಡುತ್ತೀರ ಹಾಗೆ ನೀರು ಹಾಗು ಶಾಂಪೂವನ್ನು ಹಾಕಿ.
೩. ತಲೆಯನ್ನು ಚೆನಾಗಿ ತಿಕ್ಕಿದ ನಂತರ, ತಣ್ಣಗಾದ ಆಲುಗಡ್ಡೆ ಕೊನೆಯಲ್ಲಿ ನೀರನ್ನು ತಲೆಗೆ ಹಾಕಿ ಉಜ್ಜಿ.
೪. ವಾರದಲ್ಲಿ ೨-೩ ಬಾರಿ, ಇದನ್ನು ಪ್ರಯೋಗಿಸಿ.

೪. ಈರುಳ್ಳಿ ರಸ
– ಬೇಕಾಗುವ ಸಾಮಗ್ರಿಗಳು: ೧ ಚಮಚ ಈರುಳ್ಳಿ ರಸ.
– ಬೇಕಾಗುವ ಸಮಯ: ೧೫ ನಿಮಿಷಗಳು.
– ವಿಧಾನ
೧. ಈರುಳ್ಳಿ ರಸವನ್ನು ಒಂದು ಸಣ್ಣ ಬಟ್ಟಲಿಗೆ ತೆಗೆದುಕೊಳ್ಳಿ.
೨. ಕೂದಲು ಕಡಿಮೆ ಇರುವ ಜಾಗಕ್ಕೆ ಚೆನ್ನಾಗಿ ಹಚ್ಚಿ.
೩. ೧೫ ನಿಮಿಷಗಳ ನಂತರ ಕೂದಲನ್ನು ಬಿಸಿ ನೀರಿನಲ್ಲಿ ತೊಳೆಯಿರಿ.
೪. ವಾರಕ್ಕೆ ೩-೪ ಬಾರಿ ಹೀಗೆ ಮಾಡಿ.

೫. ಲೋಳೆಸರ
– ಬೇಕಾಗುವ ಸಾಮಗ್ರಿಗಳು: ೧ ಚಮಚ ಲೋಳೆಸರದ ಲೋಳೆ.
– ಬೇಕಾಗುವ ಸಮಯ: ಸುಮಾರು ೧ ಗಂಟೆ
-ವಿಧಾನ
೧. ಮನೆಯಲ್ಲಿ ಬೆಳೆದ ಲೋಳೆಸರದ ಲೋಳೆಯನ್ನು ಒಂದು ಬಟ್ಟಲಿಗೆ ತೆಗೆದುಕೊಳ್ಳಿ.
೨. ನೆತ್ತಿ ಹಾಗು ಕೂದಲಿಗೆ ಹಚ್ಚಿ ೧ ಗಂಟೆಯ ಕಾಲ ಹಾಗೆಯೇ ಬಿಡಿ.
೩. ಉಗುರು ಬೆಚ್ಚಗಿನ ನೀರಿನಲ್ಲಿ ತಲೆಗೆ ಸ್ನಾನ ಮಾಡಿ. ಲೋಳೆಸರವೇ ಕೊನ್ದಿತಿಒನೆರ್ ತರ ಕೆಲಸ ಮಾಡುವುದರಿಂದ conditioner ಬಳಸುವ ಅಗತ್ಯವಿಲ್ಲ.
೪. ವಾರಕ್ಕೆ ೨-೩ ಬಾರಿ ಹೀಗೆ ಮಾಡಿ.

೬. ಜೀನುತುಪ್ಪ, ಆಲಿವ್ ಎಣ್ಣೆ ಹಾಗು ಚಕ್ಕೆ
– ಬೇಕಾಗುವ ಸಾಮಗ್ರಿಗಳು:೧ ಚಮಚ ಜೀನುತುಪ್ಪ.,೨ ಚಮಚ ಆಲಿವ್ ಎಣ್ಣೆ. ಚಮಚ
– ಬೇಕಾಗುವ ಸಮಯ: ಸುಮಾರು ೪೦ ನಿಮಿಷಗಳು
-ವಿಧಾನ
೧. ಮೊದಲಿಗೆ ಮೇಲೆ ಹೇಳಿದ ಸಾಮಗ್ರಿಗಳನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
೨. ನೆತ್ತಿ ಹಾಗು ಕೂದಲು ಕಡಿಮೆ ಇರುವ ಜಾಗಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.
೩. ೪೦ ನಿಮಷಗಳ ಕಾಲ ಹಾಗೆ ಬಿಡಿ.
೪. ಉಗುರು ಬೆಚ್ಚಗಿನ ನೀರು ಹಾಗು ಹರ್ಬಲ್ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
೫. ವಾರದಲ್ಲಿ ೨ ಬಾರಿ ಈ ವಿಧಾನವನ್ನು ಅನುಸರಿಸಿ

Comments are closed.