ಕರ್ನಾಟಕ

ನಿಮ್ಮಲ್ಲಿ (ರುಪೇ )ಎಟಿಎಂ ಅಥವಾ ಡೆಬಿಟ್ ಕಾರ್ಡ್ ಇದ್ದರೆ ಈ ಸೌಲಭ್ಯದ ಬಗ್ಗೆ ತಿಳಿಯಿರಿ..

Pinterest LinkedIn Tumblr

ನೀವು ರುಪೇ (RuPay) ಹೆಸರಿನ ಡೆಬಿಟ್ ಅಥವಾ ಎಟಿಎಂ ಕಾರ್ಡನ್ನು ಬಳಸುತ್ತಿದ್ದೀರಾ..? ಆದರೆ ನಿಮಗೂಂದು ಶುಭಸುದ್ದಿ. ಯಾಕೆಂದರೆ ಈ ಕಾರ್ಡುಗಳನ್ನು ಬಳಸುತ್ತಿರುವವರಿಗೆ ಕೇಂದ್ರ ಸರಕಾರ ಹೊಸ ವಿಮಾ ಯೋಜನೆಯೊಂದನ್ನು ನೀಡುತ್ತಿದೆ. ರುಪೇಗೆ ಸೇರಿದ ಕ್ಲಾಸಿಕ್, ಪ್ರೀಮಿಯಂ ಕಾರ್ಡುದಾರರಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರ ಪ್ರಕಾರ ರೂ. 1 ಲಕ್ಷದಿಂದ ರೂ.2 ಲಕ್ಷಗಳವರೆಗೂ ಈ ಕಾರ್ಡುದಾರರು ಇನ್ಸುರೆನ್ಸ್ ಪಡೆಯಬಹುದು. ಅಪಘಾತ ನಡೆದರೂ, ಪ್ರಾಣ ಕಳೆದುಕೊಂಡರೂ ನಾಮಿನಿಗೆ ಇನ್ಸುರೆನ್ಸ್ ಹಣ ಸಿಗುತ್ತದೆ.

ಬಹಳಷ್ಟು ಮಂದಿ ಬಳಸುವ ಡೆಬಿಟ್, ಕ್ರೆಟಿಟ್ ಅಥವಾ ಎಟಿಎಂ ಕಾರ್ಡು ಮೇಲೆ ವೀಸಾ, ಮಾಸ್ಟರ್ ಕಾರ್ಡ್, ಡೈನರ್ಸ್ ಕ್ಲಬ್ ಎಂಬ ವಿವಿಧ ಹೆಸರುಗಳಿರು ತ್ತವೆ ಅಲ್ಲವೆ. ಅವು ಏನೂಂತ ಗೊತ್ತಾ..? ಅವುಗಳನ್ನೇ ಮರ್ಚಂಟ್ ಪೇಮೆಂಟ್ ಗೇಟ್‍ವೇಸ್ ಅಂತಾರೆ. ಆಯಾ ಗೇಟ್ ವೇ ಕಂಪೆನಿಗಳು ಬ್ಯಾಂಕ್‌ ಗ ಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಬ್ಯಾಂಕ್‍ಗಳು ಆಯಾ ಗೇಟ್‌ವೇಗಳ ಕಾರ್ಡ್‌ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತವೆ. ಆದರೆ ಇವೆಲ್ಲಾ ವಿದೇಶಿ ಗೇಟ್‌ವೇಗಳು. ಹಾಗಾಗಿ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ರುಪೇ (RuPay) ಹೆಸರಿನ ಒಂದು ಹೊಸ ಪೇಮೆಂಟ್ ಗೇಟ್‌ವೇ ವಿಧಾನವನ್ನು ಜಾರಿಗೆ ತಂದಿದೆ. ಈಗ ಬಹಳಷ್ಟು ಬ್ಯಾಂಕ್‌ಗಳು ಈ ಗೇಟ್‌ವೇ ಇರುವ ಡೆಬಿಟ್, ಎಟಿಎಂ ಕಾರ್ಡುಗಳನ್ನು ತಮ್ಮ ಖಾತಾದಾರರಿಗೆ ನೀಡುತ್ತಿವೆ. ಆದರೆ ಈ ರುಪೇ ಡೆಬಿಟ್, ಎಟಿಎಂ ಕಾರ್ಡು ಇರುವವರಿಗೆ ಕೇಂದ್ರ ಸರಕಾರ ಒಂದು ಹೊಸ ಇನ್ಸುರೆನ್ಸ್ ಯೋಜನೆಯನ್ನೂ ನೀಡುತ್ತಿದೆ. ಅದರ ಪ್ರಕಾರ ರುಪೇ ಕಾರ್ಡುದಾರರಿಗೆ ರೂ.1 ಲಕ್ಷದಿಂದ ರೂ.2 ಲಕ್ಷದವರೆಗೂ ಇನ್ಸುರೆನ್ಸನ್ನು ಕೇಂದ್ರ ನೀಡಲಿದೆ.

ಎಲ್ಲಾ ಬ್ಯಾಂಕ್‌ಗಳ ರುಪೇ ಎಟಿಎಂ, ಡೆಬಿಟ್ ಕಾರ್ಡುಗಳಿಗೆ ಈ ಇನ್ಸುರೆನ್ಸ್ ಅನ್ವಯಿಸುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಅಪಘಾತದಲ್ಲಿ ಮರಣಿಸಿದರೆ, ಶಾಶ್ವತ ಅಂಗವೈಕಲ್ಯ ಉಂಟಾದರೆ ಅವರಿಗೂ ಇನ್ಸುರೆನ್ಸ್ ಅನ್ವಯಿಸುತ್ತದೆ. ರುಪೇ ಕ್ಲಾಸಿಕ್ ಕ್ಲಾಸಿಕ್ ಕಾರ್ಡುದಾರರಾದರೆ ರೂ.1 ಲಕ್ಷ, ರುಪೇ ಪ್ರೀಮಿಯಂ ಕಾರ್ಡುದಾರರಾದರೆ ರೂ.2 ಲಕ್ಷಗಳನ್ನು ಅವರ ಕುಟುಂಬ ಸದಸ್ಯರಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಇಂಡಿಯಾ ನೀಡಲಿದೆ. ಅಪಘಾತ ನಡೆದ 90 ದಿನಗಳಲ್ಲಿ ಇನ್ಸುರೆನ್ಸ್ ಕ್ಲೈಮ್ ಮಾಡಿಕೊಳ್ಳಬೇಕಾಗಿರುತ್ತದೆ. ನಾಮಿನಿ ಅಥವಾ ಅವರ ವಾರಸುದಾರರು ಈ ಇನ್ಸುರೆನ್ಸ್ ಪಡೆಯಬಹುದು. ಆದಕಾರಣ ನಿಮಗೂ ಸಹ ರುಪೇ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಇದ್ದರೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

Comments are closed.