ಕರಾವಳಿ

ವಿಮಾನದಲ್ಲಿ ಪ್ರಯಾಣಿಸುವಾಗ ಫೋನ್ ಗಳನ್ನು ‘ಏರ್ ಪ್ಲೇನ್ ಮೋಡ್’ನಲ್ಲಿ ಇಡುತ್ತಾರೆ ಯಾಕೆ ಗೊತ್ತೆ..?

Pinterest LinkedIn Tumblr

ವಿಮಾನ ಪ್ರಯಾಣವೆಂದರೆ ದುಬಾರಿಯಾದದ್ದು. ಬಹಳಷ್ಟು ಖರ್ಚಿನಿಂದ ಕೂಡಿರುತ್ತದೆ. ಆದರೂ ಇತರೆ ಸಾರಿಗೆಗಳಿಗಿಂತ ವಿಮಾನದಲ್ಲಿ ಪ್ರಯಾಣಿಸಿದರೆ, ಗಮ್ಯ ಸ್ಥಾನವನ್ನು ಬೇಗ ತಲುಪಬಹುದು. ಬಸ್ಸು,ರೈಲು ಮೊದಲಾದವುಗಳಲ್ಲಿ ಪ್ರಯಾಣಿಸುವಾಗ ಎಂದಿನಂತೆ ನಮ್ಮ ಮೊಬೈಲ್ ಫೋನ್ ಗಳನ್ನು ಉಪಯೋಗಿಸುತ್ತೇವೆ. ಆದರೆ, ವಿಮಾನದಲ್ಲಿ ಪ್ರಯಾಣಿಸುವಾಗ ಮಾತ್ರ ತಪ್ಪದೆ ಮೊಬೈಲ್ ಫೋನ್ ಗಳನ್ನು ‘ಏರ್ ಪ್ಲೇನ್ ಮೋಡ್’ ನಲ್ಲಿ ಇರಿಸಲೇ ಬೇಕು. ಏನು ಅಚ್ಚರಿಯಾಗುತ್ತಿದೆಯೇ? ಹೌದು ಇದು ಸತ್ಯ. ಯಾವಾಗಲೂ ವಿಮಾನದಲ್ಲಿ ಪ್ರಯಾಣಿಸುವವರಿಗೆ ಈ ವಿಷಯ ಗೊತ್ತಿರುತ್ತದೆ. ವಿಮಾನದಲ್ಲಿ ಪ್ರಯಾಣಿಸದಿರುವವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಅಸಲಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಮೊಬೈಲ್ ಫೊನ್ ಗಳನ್ನು ‘ಏರ್ ಪ್ಲೇನ್ ಮೋಡ್’ ನಲ್ಲಿ ಯಾಕೆ ಇರಿಸುತ್ತಾರೆಂದು ತಿಳಿಯೋಣ.

ಇದರ ಬಗ್ಗೆ ಹಲವರು ಹಲವು ರೀತಿ ಹೇಳುತ್ತಾರೆ. ವಿಮಾನದಲ್ಲಿರುವಾಗ ಸೆಲ್ ಫೋನ್ ಗಳನ್ನು ಉಪಯೋಗಿಸಿದರೆ, ಅವುಗಳಿಂದ ಬರುವ ರೇಡಿಯೋ ತರಂಗಗಳು, ವಿಮಾನದ ರೇಡಿಯೋ ತರಂಗಗಳೊಂದಿಗೆ ಘರ್ಷಣೆ ಹೊಂದಿ ವಿಮಾನ ಬೀಳುತ್ತದೆ ಎಂದು ಕೆಲವರು ಹೇಳಿದರೆ, ಬೇರೆ ಏನೋ ಕಾರಣವಿರಬೇಕೆಂದು ಕೆಲವರು ಭಾವಿಸುತ್ತಾರೆ. ಇದು ಮಾತ್ರ ಸತ್ಯವಲ್ಲ.

ನಾವು ಭೂಮಿಯ ಮೇಲಿರುವಾಗ ಪ್ರದೇಶ ಬದಲಾದಂತೆ ಫೋನ್ ಸಿಗ್ನಲ್ ಸಹ ಬದಲಾಗುತ್ತಿರುತ್ತದೆ. ಸಿಗ್ನಲ್ ಹೋಗುವಷ್ಟು ವೇಗದಲ್ಲಿ ನಾವು ಹೋಗಲಾಗುವುದಿಲ್ಲ. ಆದರೆ, ಗಾಳಿಯಲ್ಲಿ 10 ಸಾವಿರ ಅಡಿಗಳ ಎತ್ತರದಲ್ಲಿ ವಿಮಾನ ಚಲಿಸುವಾಗ, ವಿಮಾನ ಸೆಲ್ ಟವರ್ ಗಳನ್ನು ವೇಗವಾಗಿ ದಾಟಿಕೊಂಡು ಹೋಗುತ್ತಿರುತ್ತದೆ. ಆಗ ಸೆಲ್ಫೋನ್ ಗಳು ಸಹ ಅಷ್ಟೇ ವೇಗವಾಗಿ ಸಿಗ್ನಲ್ ಗಳನ್ನು ಗ್ರಹಿಸುತ್ತವೆ. ಇದರಿಂದಾಗಿ ನೆಟ್ ವರ್ಕ್ ಸಮಸ್ಯೆ ಉಂಟಾಗಿ , ಭೂಮಿಯ ಮೇಲಿರುವವರಿಗೆ ನೆಟ್ವರ್ಕ್ ಸಮಸ್ಯೆಗಳು ಉಂಟಾಗುತ್ತವೆ. ಆದ ಕಾರಣ ವಿಮಾನದಲ್ಲಿ ಪ್ರಯಾಣಿಸುವಾಗ ಪರಿಚಾರಕಿಯರು ನಮ್ಮ ಫೋನ್ ಗಳನ್ನು ‘ಏರ್ ಪ್ಲೇನ್ ಮೋಡ್’ಗೆ ಇರಿಸುವಂತೆ ಹೇಳುತ್ತಾರೆ. ಒಂದು ವೇಳೆ ನಾವು ಹಾಗೆ ಮಾಡದಿದ್ದರೆ ವಿಮಾನವೇನೂ ನೆಲಕ್ಕಪ್ಪಳಿಸುವುದಿಲ್ಲ. ನಮ್ಮ ಫೋನ್ ಗಳಿಂದ ಹೊರಹೊಮ್ಮುವ ತರಂಗಗಳು ವಿಮಾನದಿಂದ ಬರುವ ತರಂಗಳೊಂದಿಗೆ ಘರ್ಷಣೆಗೆ ಒಳಪಟ್ಟು ಪೈಲೆಟ್ ಗಳ ರೇಡಿಯೋಗಳಲ್ಲಿ ಕೀರಲು ಶಬ್ದ ಕೇಳಿಸುತ್ತದೆ. ಇದರಿಂದಾಗಿ ಗೊಂದಲಕ್ಕೊಳಗಾಗುತ್ತಾರೆ. ಆದುದರಿಂದ ಫೋನ್ ಗಳನ್ನು ಏರ್ ಪ್ಲೇನ್ ಮೋಡ್ ನಲ್ಲಿರಿಸಲು ಹೇಳುತ್ತಾರೆ, ಆದರೆ, ವಿಮಾನದಲ್ಲಿರುವ ವೈಫೈ ಯನ್ನು ಉಪಯೋಗಿಸಿ ಇತರೆ ಕೆಲಸಗಳನ್ನು ಮಾಡಿಕೊಳ್ಳಬಹುದು. ರೇಡಿಯೋ ತರಂಗಗಳು ಮಾತ್ರ ಕೆಲಸಮಾಡುವುದಿಲ್ಲ.

Comments are closed.