ಕರ್ನಾಟಕ

ಗಡಿಯಾರದ ಮುಳ್ಳನ್ನು ನೀವು ಎಂದಾದರೂ ಗಮನಿಸಿದ್ದೀರಾ….?

Pinterest LinkedIn Tumblr

ಪ್ರಸ್ತುತ ನಾವು ನಿತ್ಯ ಬಳಸುತ್ತಿರುವ ಪ್ರತಿಯೊಂದು ವಸ್ತುವಿಗೆ ಸಂಬಂಧಿಸಿದಂತೆ ಎಷ್ಟೋ ಚರಿತ್ರೆ ಅಡಗಿರುತ್ತದೆ. ಅದೇಗೆ ಬಂತು, ಅದನ್ನು ಯಾರು ಕಂಡುಹಿಡಿದರು, ಯಾವಾಗಿಂದ ಜನ ಅದನ್ನು ಬಳಸಲು ಆರಂಭಿಸಿದರು…ಹೀಗೆ ಸರಿಸುಮಾರು ಎಲ್ಲಾ ವಸ್ತುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳು ಇರುತ್ತವೆ. ಅಂತಹವುಗಳಲ್ಲಿ ಹೇಳಿಕೊಳ್ಳಬೇಕಾದ ಒಂದು ವಸ್ತು ಎಂದರೆ ಗೋಡೆ ಗಡಿಯಾರ. ಅದನ್ನು ಯಾರು ಕಂಡುಹಿಡಿದರು ಎಂದಲ್ಲವೇ ನೀವು ಹೇಳಲು ಹೊರಟಿರುವುದು? ಎಂದು ಕೇಳುತ್ತಿದ್ದೀರಾ? ಆದರೆ ವಿಷಯ ಅದಲ್ಲ ಬಿಡಿ. ಯಾಕೆಂದರೆ ಗೋಡೆ ಗಡಿಯಾರವನ್ನು ಯಾರು ಕಂಡುಹಿಡಿದರೂ ನಾವು ಹೇಳಲಿರುವ ಸಂಗತಿ ಮಾತ್ರ ಬೇರೆ. ಗಡಿಯಾರದ ಮುಳ್ಳನ್ನು ನೀವು ಎಂದಾದರೂ ಗಮನಿಸಿದ್ದೀರಾ? ಅವು ಎಡಗಡೆಯಿಂದ ಬಲಗಡೆಗೆ ಸುತ್ತುತ್ತಿರುತ್ತವೆ ಅಲ್ಲವೇ? ಇಷ್ಟಕ್ಕೂ ಅವು ಹಾಗೇಕೆ ಸುತ್ತಬೇಕು. ಬಲದಿಂದ ಎಡಕ್ಕೆ ಯಾಕೆ ಸುತ್ತಲ್ಲ? ಎಂದು ಎಂದಾದರೂ ಆಲೋಚಿಸಿದ್ದೀರಾ? ಇಲ್ಲವೇ? ಹಾಗಿದ್ದರೆ ಅವು ಹಾಗೇಕೆ ಸುತ್ತುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

ಭೂಮಿ ಉತ್ತರಾರ್ಧ ಗೋಳದಲ್ಲಿ ಬಲದಿಂದ ಎಡಕ್ಕೆ ತಿರುಗುತ್ತಾ ಇರುತ್ತದೆ. ಆದರೆ ಸೂರ್ಯನು ಇದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತಾ ಇರುತ್ತಾನೆ. ಅಂದರೆ ಎಡದಿಂದ ಬಲಕ್ಕೆ ಎಂದರ್ಥ. ಈ ಕ್ರಮದಲ್ಲಿ ಗಡಿಯಾರಗಳು ಸಿಗದೆ ಇದ್ದ ಕಾಲದಲ್ಲಿ ಸನ್ ಡಯಲ್‌ನಂತಹವುಗಳಿಂದ ಸಮಯವನ್ನು ತಿಳಿದುಕೊಳ್ಳುತ್ತಿದ್ದರು. ಸೂರ್ಯನು ಸುತ್ತುವ ದಿಕ್ಕು (ಎಡದಿಂದ ಬಲಕ್ಕೆ) ಅನುಸರಿಸಿ ಆ ಕಾಲದಲ್ಲಿ ಸಮಯ ಲೆಕ್ಕಾಚಾರ ಹಾಕುತ್ತಿದ್ದರು. ಈ ಕ್ರಮದಲ್ಲಿ ಆ ಬಳಿಕ ಬಂದ ಗಡಿಯಾರಗಳು ಅದೇ ದಿಕ್ಕಿನಲ್ಲಿ ಸುತ್ತುವಂತೆ ತಯಾರಿಸಲಾಯಿತು. ಹಾಗಾಗಿ ಒಂದು ಕಾಲದಿಂದ ಇಂದಿನವರೆಗೂ ಗಡಿಯಾರಗಳಲ್ಲಿನ ಮುಳ್ಳು ಸೂರ್ಯನ ದಿಕ್ಕಿನಲ್ಲೇ ಅಂದರೆ ಎಡದಿಂದ ಬಲಕ್ಕೆ ಸುತ್ತುತ್ತಿರುತ್ತದೆ. ಅಷ್ಟೇ ಹೊರತು, ಇದರಲ್ಲಿ ಬೇರೆ ಇನ್ಯಾವುದೇ ಕಾರಣ ಇಲ್ಲ. ಒಂದು ವೇಳೆ ಭೂಮಿ ದಕ್ಷಿಣಾರ್ಧ ಗೋಳದಲ್ಲಿ ಸುತ್ತುತ್ತಿದ್ದಾಗ ನೋಡಿದ್ದರೆ ಮೇಲೆ ತಿಳಿಸಿದ್ದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಎಲ್ಲವೂ ನಡೆಯುತ್ತಿತ್ತು. ಆಗ ಸೂರ್ಯನ ದಿಕ್ಕು ಬದಲಾಗುತ್ತದಾದ್ದರಿಂದ ಗಡಿಯಾರಗಳನ್ನೂ ಅದೇ ರೀತಿ ತಯಾರಿಸುತ್ತಿದ್ದರು. ಅಂದರೆ ಬಲದಿಂದ ಎಡಕ್ಕೆ ಮುಳ್ಳು ತಿರುಗುವಂತೆ ಇರುತ್ತಿತ್ತು. ಈ ಕ್ರಮದಲ್ಲಿ ಗಡಿಯಾರದ ಮುಳ್ಳು ತಿರುಗುವ ದಿಕ್ಕಿಗೆ ಕ್ಲಾಕ್ ವೈಸ್ ಡೈರೆಕ್ಷನ್ ಎಂಬ ಹೆಸರು ಸಹ ಬಂತು. ಇದರ ವಿರುದ್ಧ ದಿಕ್ಕನ್ನು ಆಂಟಿ ಕ್ಲಾಕ್ ವೈಸ್ ಡೈರೆಕ್ಷನ್ ಎಂದು ಕರೆಯುತ್ತಾರೆ.

ವಿಷಯ ಹೀಗಿದ್ದರೂ ಎಡಗಡೆಗೆ ಮುಳ್ಳು ತಿರುಗುವಂತೆ ಪಾಲೋ ಉಸೇ ಎಂಬ ವ್ಯಕ್ತಿ ಗೋಡೆ ಗಡಿಯಾರವನ್ನು ಒಂದು ಕಾಲದಲ್ಲಿ ತಯಾರಿಸಿದನಂತೆ. ಆ ದಿಕ್ಕಿನಲ್ಲಿ ತಿರುಗುವ ಗಡಿಯಾರ ಇದೊಂದೇ ಅಂತೆ. ಅದರಲ್ಲಿ ಆತನ ಚಿತ್ರವನ್ನೂ ನಾವು ಕಾಣಬಹುದು. ಈ ಗಡಿಯಾರ ಈಗಲೂ ಭದ್ರವಾಗಿದೆಯಂತೆ. ಆ ರೀತಿ ವಿರುದ್ಧ ದಿಕ್ಕಿನಲ್ಲಿ ಓಡುವ ಗಡಿಯಾರವನ್ನು ನೋಡಿದರೆ ವಿಚಿತ್ರ ಅನ್ನಿಸುತ್ತದೆ ಅಲ್ಲವೇ?

Comments are closed.