ಕರಾವಳಿ

ಮೆಡಿಸಿನ್ ಟಾನಿಕ್ ಬಾಟಲಿ, ಶೀಸೆಗಳು ಬ್ರೌನ್ ಅಥವಾ ಆರೆಂಜ್ ಬಣ್ಣದಲ್ಲಿ ಇರುತ್ತೆ ಯಾಕೆ..?

Pinterest LinkedIn Tumblr

ನಮಗೆ ಅನಾರೋಗ್ಯ ಉಂಟಾದಾಗ ಔಷಧಿಗಾಗಿ ಮಳಿಗೆಗೆ ಹೋಗುತ್ತೇವೆ. ಅಥವಾ ವೈದ್ಯರ ಬಳಿಗೆ ಹೋಗಿ ಅವರು ಬರೆದುಕೊಟ್ಟ ಔಷಧಿಗಳನ್ನು ಬಳಸುತ್ತೇವೆ. ಮೆಡಿಸಿನ್ ವಿಚಾರಕ್ಕೆ ಬಂದರೆ ಗಮನಿಸಬೇಕಾದ ಬಹಳಷ್ಟು ಸಂಗತಿಗಳಿವೆ. ಅವನ್ನು ಹಾಕಿರುವ ಔಷಧಿ ಬಾಟಲಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸಂಗತಿ ತಿಳಿಯುತ್ತದೆ. ಅದೇನೆಂದರೆ… ನೀವು ಎಂದಾದರೂ ಟಾನಿಕ್ ಬಾಟಲಿಗಳು ಅಥವಾ ಕೆಲವು ರೀತಿಯ ಟ್ಯಾಬ್ಲೆಟ್‌ಗಳನ್ನು ನೀಡುವ ಗಾಜಿನ ಶೀಸೆಗಳನ್ನು ನೋಡಿದ್ದೀರಾ..? ಅವು ಬ್ರೌನ್ ಅಥವಾ ಆರೆಂಜ್ ಬಣ್ಣದಲ್ಲಿರುತ್ತವೆ. ಗಮನಿಸಿಯೇ ಇರುತ್ತೀರ. ಆದರೆ ಅ ಬಾಟಲಿಗಳು ಆ ಬಣ್ಣದಲ್ಲಿ ಯಾಕೆ ಇರುತ್ತವೆ..? ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.

ಕೆಲವು ರೀತಿಯ ಟ್ಯಾಬ್ಲೆಟ್‌ಗಳ ಜತೆಗೆ ಟಾನಿಕ್‌ಗಳು ಬ್ರೌನ್ ಅಥವ ಆರೆಂಜ್ ಬಣ್ಣದ ಬಾಟಲಿಗಳು, ಶೀಸೆಗಳಲ್ಲಿ ತುಂಬುತ್ತಾರೆ ಅಲ್ಲವೇ. ಆ ರೀತಿ ಯಾಕೆ ಮಾಡುತ್ತಾರೆಂದರೆ… ಆಯಾ ಬಣ್ಣದಲ್ಲಿ ಇರುವ ಬಾಟಲಿಗಳಲ್ಲಿ ಹಾಕುವ ಟಾನಿಕ್ ಅಥವಾ ಟ್ಯಾಬ್ಲೆಟ್‌ಗೆ ಬಿಸಿಲು ಬಿದ್ದರೆ ಕೆಮಿಕಲ್ ರಿಯಾಕ್ಷನ್ ನಡೆದು ಅವುಗಳ ಕೆಮಿಕಲ್ ಫಾರ್ಮುಲಾ ಬದಲಾಗುತ್ತದೆ. ಆ ರೀತಿ ಬದಲಾದ ಔಷಧಿಗಳನ್ನು ಬಳಸುವುದು ಅಪಾಯಕಾರಿ. ಆದಕಾರಣ ಔಷಧಿ, ಟಾನಿಕ್‌ಗಳ ಫಾರ್ಮುಲಾ ಬದಲಾಗದಂತಿರಲು, ಬಿಸಿಲಿನ ಕಾರಣ ಕೆಮಿಕಲ್ ರಿಯಾಕ್ಷನ್ ನಡೆಯದಂತಿರಲು ಆಯಾ ಬಾಟಲಿ, ಶೀಸೆಗಳು ಬ್ರೌನ್ ಅಥವಾ ಆರೆಂಜ್ ಬಣ್ಣದಲ್ಲಿ ತಯಾರಿಸುತ್ತಾರೆ.

ಬಾಟಲಿ, ಶೀಸೆಗಳನ್ನು ಬ್ರೌನ್, ಆರೆಂಜ್ ಬಣ್ಣದಲ್ಲಿ ತಯಾರಿಸುವುದರಿಂದ ಅವುಗಳಲ್ಲಿ ಸೂರ್ಯನ ಕಿರಣಗಳು ಪ್ರಸಾರವಾಗಲ್ಲ. ಮುಖ್ಯವಾಗಿ ಅಲ್ಟ್ರಾ ವಯೋಲೆಟ್ ಕಿರಣಗಳು ಪ್ರವೇಶಿಸಲ್ಲ. ಬಾಟಲಿಯ ಮೇಲಿನ ಭಾಗ ಆ ರೀತಿಯ ಕಿರಣಗಳನ್ನು ತಡೆಯುತ್ತದೆ. ಇದರಿಂದಾಗಿ ಕೆಮಿಕಲ್ ರಿಯಾಕ್ಷನ್ ನಡೆಯಲ್ಲ. ಇವುಗಳಲ್ಲಿ ಹಾಕಿರುವ ಔಷಧಿ, ಟ್ಯಾಬ್ಲೆಟ್‌ಗಳನ್ನು ರೋಗಿಗಳು ಯಾವುದೇ ಅಭ್ಯಂತರ ಇಲ್ಲದೆ ಬಳಸಬಹುದು. ಕೇವಲ ಔಷಧಿಗಳಷ್ಟೇ ಅಲ್ಲ, ಬೀರ್ ಸಹ ಬ್ರೌನ್ ಕಲರ್ ಬಾಟಲಿಯಲ್ಲಿರುತ್ತದೆ. ಇದಕ್ಕೆ ಕಾರಣ ಸಹ ಈ ಮೊದಲಿನದ್ದೇ ಆಗಿದೆ. ಸಾಮಾನ್ಯ ಬಾಟಲಿಯಾದರೆ ಬಿಸಿಲಿನ ಕಾರಣ ಕೆಮಿಕಲ್ ರಿಯಾಕ್ಷನ್ ಆಗುತ್ತದೆ. ಇದರಿಂದ ಬೀರ್ ಹಾಳಾಗುತ್ತದೆ. ಕೆಲವು ಕಂಪೆನಿಗಳು ಹಸಿರು ಬಣ್ಣದ ಬಾಟಲಿಗಳನ್ನೂ ಕೊಡುತ್ತಿವೆ. ಇದಕ್ಕೂ ಕಾರಣ ಇದೇ. ಇಂತಹ ಗಾಢವಾದ ಬಣ್ಣದ ಬಾಟಲಿಗಳು ಸೂರ್ಯನ ಕಾಂತಿಯನ್ನು ಅಷ್ಟು ಸುಲಭವಾಗಿ ಒಳಗೆ ಬಿಡಲ್ಲ..! ಹಾಗಾಗಿ ಒಳಗಿನ ಪದಾರ್ಥ ಹಾಳಾಗದಂತೆ ಇರುತ್ತದೆ..!

Comments are closed.