ಕರ್ನಾಟಕ

ಕುಂಕುಮದಿಂದ ಮಕ್ಕಳ ಬುದ್ಧಿ ಕ್ಷಮತೆ ಕಡಿಮೆಯಾದಿತು.. ಜೊಕೆ?

Pinterest LinkedIn Tumblr

ಮಂಗಳೂರು: ಕುಂಕುಮ ಅಥವಾ ಸಿಂಧೂರವನ್ನು ಹಿಂದೂ ಸಹಿತ ಇತರ ಧರ್ಮೀಯ ಮಹಿಳೆಯರು ಧಾರ್ಮಿಕ ಹಾಗೂ ಸೌಂದರ್ಯವರ್ಧಕದ ರೂಪದಲ್ಲಿ ಹಣೆಯ ನಡುವಿನಲ್ಲಿ ಧರಿಸಿಕೊಳ್ಳುತ್ತಾರೆ. ವಿವಾಹಿತ ಮಹಿಳೆಯರಿಗೆ ಬೈತಲೆಯ ಗೆರೆಯಲ್ಲಿ ಕೊಂಚ ಉದ್ದಕ್ಕೆ ಕುಂಕುಮನ್ನು ಧರಿಸುವುದು ವಿವಾಹಿತೆಯಾಗಿರುವ ಸೂಚನೆಯೂ ಆಗಿದೆ. ಇದಲ್ಲದೇ ಪುರುಷರೂ ಮಕ್ಕಳೂ ಇತರ ಧಾರ್ಮಿಕ ವಿಧಿಗಳಿಗನುಸಾರವಾಗಿ ಕುಂಕುಮವನ್ನು ಧರಿಸುತ್ತಾರೆ

ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕುಂಕುಮದಲ್ಲಿ ಆರೋಗ್ಯಕ್ಕೆ ಮಾರಕವಾಗಬಹುದಾದಷ್ಟು ಹೆಚ್ಚಿನ ಪ್ರಮಾಣದ ಸೀಸಿವಿದೆ. ಈ ವಿಷಕರ ಸೀಸ ಚರ್ಮದಿಂದ ರಕ್ತಕ್ಕೆ ಇಳಿಯುವ ಕ್ಷಮತೆ ಹೊಂದಿದ್ದು ವಿಶೇಷವಾಗಿ ಮಕ್ಕಳ ಬುದ್ಧಿ ಕ್ಷಮತೆಯನ್ನು ಕಡಿಮೆಗೊಳಿಸುವುದು, ನಡವಳಿಕೆಯಲ್ಲಿ ಬದಲಾವಣೆ ಹಾಗೂ ಬೆಳವಣಿಗೆ ತಡವಾಗುವುದು ಮೊದಲಾದ ತೊಂದರೆಗಳನ್ನು ಹುಟ್ಟುಹಾಕುತ್ತಿರುವುದು ಇತ್ತೀಚಿನ ಸಂಶೋಧನೆಗಳಲ್ಲಿ ಕಂಡುಬಂದಿದೆ. ಈ ಸಂಶೋಧನೆಯಲ್ಲಿ ಭಾರತ ಹಾಗೂ ಅಮೇರಿಕಾದಲ್ಲಿ ಲಭಿಸುತ್ತಿರುವ ಕುಂಕುಮದ ಪುಡಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು ಸೀಸದ ಅಪಾರ ಅಂಶವಿರುವುದು ಬೆಳಕಿಗೆ ಬಂದಿದೆ.

ಪ್ರತಿ ಗ್ರಾಂನಲ್ಲಿ ಇಪ್ಪತ್ತು ಮೈಕ್ರೋಗ್ರಾಂನಷ್ಟು ಆಗಾಧ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ವಿಪರ್ಯಾಸವೆಂದರೆ ಅಮೇರಿಕಾದ ಆಹಾರ ಮತ್ತು ಔಷಧಿ ನಿರ್ದೇಶನಾಯಲ ನಿಗದಿಪಡಿಸಿರುವಂತೆ ಈ ಪ್ರಮಾಣ ಇಪ್ಪತ್ತು ಮೈಕ್ರೋಗ್ರಾಂ ಮೀರಬಾರದು. ಆ ಲೆಕ್ಕದಲ್ಲಿ ಈ ಕುಂಕುಮ ಸುರಕ್ಷಿತ. ಆದರೆ ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬ ಕನ್ನಡದ ಗಾದೆಮಾತಿನಂತೆ ಸೀಸ ಎಷ್ಟೇ ಕಡಿಮೆ ಇರಲಿ, ಇದು ಅಪಾಯಕಾರಿಯೇ ಎಂದು ನ್ಯೂ ಜೆರ್ಸಿಯ ರುಟ್ಗರ್ಸ್ ನಲ್ಲಿರುವ ದ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡೆರೆಕ್ ಶೆಂಡೆಲ್ ರವರು ತಿಳಿಸುತ್ತಾರೆ. ಇವರು ಈ ಸಂಶೋಧನೆಯ ವಿವರಗಳನ್ನು ಪ್ರಕಟಿಸಿದ ಲೇಖನದ ಸಹ ಲೇಖಕರೂ ಆಗಿದ್ದಾರೆ. “ಇದೇ ಕಾರಣಕ್ಕೆ ಯಾವ ಕುಂಕುಮದಲ್ಲಿ ಸೀಸ ಇರುತ್ತದೆಯೋ ಅದನ್ನು ಅಮೇರಿಕಾದಲ್ಲಿ ಮಾರಲಿಕ್ಕೆ ಅಥವಾ ತರಲಿಕ್ಕೆ ಅವಕಾಶ ನೀಡಕೂಡದು” ಎಂದು ಶೆಂಡೆಲ್ ರವರು ಅಭಿಪ್ರಾಯಪಡುತ್ತಾರೆ. ಸೀಸ ಸುಲಭವಾಗಿ ಚರ್ಮದಲ್ಲಿ ಹೀರಲ್ಪಡುವ ವಿಷವಾಗಿದ್ದು ಇದರ ಇರುವಿಕೆಯಿಂದ ವಿಶೇಷವಾಗಿ ಮಕ್ಕಳ ಬುದ್ಧಿಕ್ಷಮತೆಯಲ್ಲಿ ಇಳಿಕೆ, ಬೆಳವಣಿಗೆ ತಡವಾಗುವುದು, ನಡವಳಿಕೆಯಲ್ಲಿ ಬದಲಾವಣೆ ಮೊದಲಾದವು ಕಾಣಿಸಿಕೊಳ್ಳುತ್ತದೆ.

Comments are closed.