ಕರ್ನಾಟಕ

ಡಬ್ಬಲ್ ರೈಡ್ ಮಾಡಬೇಕಾದರೇ ಇನ್ಮುಂದೆ ಈ ಬೈಕ್ ಖರೀದಿ ಮಾಡಬೇಡಿ!

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಬೆಂಗಳೂರು: 100 ಸಿಸಿ.ಗೆ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 100 ಸಿಸಿ ಗಿಂತಲೂ ಕಡಿಮೆ ಸಾಮರ್ಥ್ಯವಿರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸೀಟುಗಳನ್ನು ಸೇರಿಸಬಾರದೆಂದು ರಾಜ್ಯ ಸರ್ಕಾರ ದ್ವಿಚಕ್ರ ವಾಹನ ತಯಾರಕರಲ್ಲಿ ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ನ ಇತ್ತೀಚಿನ ಆದೇಶದ ಅನುಸಾರ , 100 ಸಿಸಿ.ಗೆ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ, ಹಿಂಬದಿ ಸವಾರರ ಸೀಟು ಹೊಂದಿರುವ ದಿಚಕ್ರ ವಾಹನಗಳ ನೋಂದಣಿ ಮಾಡದಂತೆ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ. ಅದಾಗ್ಯೂ ಸೀಟು ಅಳವಡಿಸಿದಲ್ಲಿ ವಾಹನ ಜಪ್ತಿ ಮಾಡಲು ಆದೇಶಿಸಲಾಗಿದೆ. ಈಗಾಗಲೇ ರಸ್ತೆಯಲ್ಲಿ ಓಡಾಡುತ್ತಿರುವ ಬೈಕ್​ಗಳಿಗೆ ಇದು ಅನ್ವಯವಾಗುವುದಿಲ್ಲ. ಹೊಸದಾಗಿ ಖರೀದಿಸುವ ವಾಹನಗಳಿಗಷ್ಟೇ ನಿಯಮ ಅನ್ವಯವಾಗಲಿದೆ ಎಂದು ಸಾರಿಗೆ ಇಲಾಕೆ ಅಧಿಕಾರಿಯೊಬ್ಬರು ತಿಳಿಸಿದರು.

ಇತ್ತೀಚೆಗೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಕರ್ನಾಟಕ ಮೋಟಾರು ವಾಹನ ಕಾಯ್ದೆ–1989 ಅನ್ನು ಜಾರಿಗೆ ತರುವಂತೆ ಆದೇಶಿಸಿತ್ತು. ಇದೀಗ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ಮುಂದಾಗಿದ್ದು ಈ ಕುರಿತಂತೆ ಇದೇ 16 ರಂದು ಸಾರಿಗೆ ಇಲಾಖೆ ನೋಟಿಸ್ ನೀಡಿದೆ. ರಾಜ್ಯದ ಎಲ್ಲಾ ನೋಂದಣಾಧಿಕಾರಿಗಳು, ಪ್ರವರ್ತನಾಧಿಕಾರಿಗಳಿಗೆ ಈ ನೋಟಿಸ್ ನೀಡಿ ಆದೇಶ ಪಾಲಿಸುವಂತೆ ಸೂಚನೆ ನೀಡಲಾಗಿದೆ.

 

Comments are closed.