ಕರಾವಳಿ

ಟಿಪ್ಪು ಜಯಂತಿ : ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದಂತೆ ನಳಿನ್ ಕುಮಾರ್ ಸೂಚನೆ

Pinterest LinkedIn Tumblr

ಮಂಗಳೂರು : ರಾಜ್ಯ ಸರ್ಕಾರ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ನಮೂದಿಸ ಬಾರದೆಂದು ಜಿಲ್ಲಾಡಳಿತಕ್ಕೆ ಲಿಖಿತ ಸೂಚನೆ ನೀಡಿರುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಹಿಂದೂಗಳ ಮಾರಣ ಹೋಮ ನಡೆಸಿದ ಟಿಪ್ಪುವಿನ ಹೆಸರಲ್ಲಿ ಜಯಂತಿ ಆಚರಿಸುವುದು ಈ ನಾಡಿಗೆ ಅಪಮಾನವಾಗಿದೆ. ಕಳೆದ ವರ್ಷ ವ್ಯಾಪಕ ಹಿಂಸಾಚಾರ, ಪ್ರಾಣಹಾನಿ ಸಂಭವಿಸಿದೆ.

ರಾಜ್ಯದ ಪ್ರಜ್ಞಾವಂತ ನಾಗರಿಕರ ಪ್ರಬಲ ವಿರೋಧಿ ಇದ್ದರೂ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮತ್ತೆ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ಖಂಡನೀಯ. ರಾಜ್ಯ ಸರ್ಕಾರದ ಇಂತಹ ಜನವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ ಎಂದು ಸಂಸದರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.