ಕರ್ನಾಟಕ

ಸಾರ್ವಜನಿಕ ವೈ-ಫೈ ಬಳಕೆ ಮಾಡಿದಲ್ಲಿ ಸೈಬರ್ ದಾಳಿ ಸಾಧ್ಯತೆ

Pinterest LinkedIn Tumblr

ಚೆನ್ನೈ, ಅ.20: ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ವೈರ್ಲೆಸ್ ಕಂಪ್ಯೂಟರ್ ನೆಟ್ವರ್ಕ್ ಬಳಸಿಕೊಂಡು ಇಂಟರ್ನೆಟ್ ಬಳಕೆ ಮಾಡುವುದರಿಂದ ಸೈಬರ್ ದಾಳಿ ಸಾಧ್ಯತೆ ಅಧಿಕ ಎಂದು ಸರ್ಕಾರಿ ಏಜೆನ್ಸಿಯಾದ ಭಾರತದ ಕಂಪ್ಯೂಟರ್ ತುರ್ತು ಸ್ಪಂದನೆ ತಂಡ (ಸಿಇಆರ್ಟಿ-ಇನ್) ಎಚ್ಚರಿಕೆ ನೀಡಿದೆ.

ಸಾರ್ವಜನಿಕ ವೈ-ಫೈ ಬಳಕೆ ಮಾಡಿದಲ್ಲಿ ಸೈಬರ್ ದಾಳಿ ಸಾಧ್ಯತೆ ಅಧಿಕ ಎಂದು ಸಿಇಆರ್ಟಿ ಹೇಳಿದೆ. “ಈ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸಿಕೊಂಡು, ಸೂಕ್ಷ್ಮ ಮಾಹಿತಿಗಳಾದ ಕ್ರೆಡಿಟ್ ಕಾಡ್ ಸಂಖ್ಯೆ, ಪಾಸ್ವರ್ಡ್, ಚಾಟ್ ಮೆಸೇಜ್, ಇ-ಮೇಲ್ಗಳನ್ನು ಕದಿಯಬಹುದಾಗಿದೆ” ಎಂದು ಕಾರ್ಟ್ ಇನ್ ಹೇಳಿದೆ. ಸಾರ್ವಜನಿಕ ವೈ-ಫೈ ಬಳಸುವ ಬದಲು ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಹಾಗೂ ವೈರ್ ನೆಟ್ವರ್ಕ್ ಬಳಸುವಂತೆ ಸಲಹೆ ಮಾಡಿದೆ.

ಸಾರ್ವಜನಿಕ ವೈರ್ಲೆಸ್ ನೆಟ್ವರ್ಕ್ಗೆ ಸಾಮಾನ್ಯವಾಗಿ ಬಳಕೆಯಾಗುವ ಡಬ್ಲ್ಯುಪಿಎ ಅಥವಾ ಡಬ್ಲ್ಯುಪಿಎ2 ಎನ್ಸ್ಕ್ರಿಪಕ್ಷನ್ ಬಳಕೆಯ ಅಪಾಯದ ಬಗೆಗೆ ನಡೆದ ಅಂತಾರಾಷ್ಟ್ರೀಯ ಸಂಶೋಧನೆಯೊಂದನ್ನು ಆಧರಿಸಿ ಈ ಎಚ್ಚರಿಕೆ ನೀಡಲಾಗಿದೆ. ಎನ್ಡ್ರಾಯ್ಡಾ, ಐಓಎಸ್, ಲೈನೆಕ್ಸ್, ಮ್ಯಾಕ್ ಓಎಸ್ ಹಾಗೂ ವಿಂಡೋಸ್ ಆಧರಿತ ಸಾಧನಗಳಲ್ಲಿ ಇಂಥ ಅಪಾಯ ಸಾಧ್ಯತೆ ಅಧಿಕ ಎಂದು ಮಥಾಯ್ ವೆನೋಫ್ ನೇತೃತ್ವದ ಸಂಶೋಧಕರ ತಂಡ ಸ್ಪಷ್ಟಪಡಿಸಿದೆ.

ವೈ-ಫೈ ಗುಣಮಟ್ಟದ ಡಬ್ಲ್ಯುಪಿಎ2 ಪ್ರೊಟೊಕಾಲ್ನ ವಿನ್ಯಾಸ ಅಥವಾ ಅನುಷ್ಠಾನ ಹರಿವನ್ನು ದುರ್ಬಳಕೆ ಮಾಡಿಕೊಂಡು ಇಂಥ ದಾಳಿಗಳು ನಡೆಯುತ್ತವೆ ಎಂದು ವಿಶ್ಲೇಷಿಸಿದೆ.

 

 

 

 

 

 

Comments are closed.