ಕರ್ನಾಟಕ

ಕ್ರೆಡಿಟ್ ಕಾರ್ಡ್’ ಬಳಕೆದಾರರು ಗಮನಿಸಬೇಕಾದ ಕೆಲವು ವಿಚಾರಗಳು

Pinterest LinkedIn Tumblr

ನೀವು ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್’ಗಳನ್ನು ಬಳಸುತ್ತಿದ್ದರೆ, ಕ್ರೆಡಿಟ್ ಕಾರ್ಡ್’ಗಳ ಮೂಲಕ ನೀವು ವಾಸ್ತವವಾಗಿ ಏನನ್ನು ಪಡೆದುಕೊಳ್ಳುತ್ತಿದ್ದೀರಿ ಎಂಬ ಕೆಲವು ವಿಚಾರಗಳು

1) ಸುರಕ್ಷತೆ ಮೊದಲು : ಡಿಬಿಟ್ ಕಾರ್ಡ್’ಗಳಿಗಿಂತ ಕ್ರೆಡಿಟ್ ಕಾರ್ಡ್’ಗಳು ಹೆಚ್ಚು ಸುರಕ್ಷಿತ ಎಂದು ನೀವು ಮನನ ಮಾಡಿಕೊಳ್ಳಬೇಕು. ವಂಚನೆಯ ಸಂದರ್ಭದಲ್ಲೂ ನೀವು ಕೆಲಸದೊಂದಿಗೆ ಹಣವನ್ನು ಹೊಂದಿರುತ್ತೀರಿ. ಎಲ್ಲ ಪಾವತಿ ಗೇಟ್’ವೇಗಳು ಅತೀ ಸುರಕ್ಷಿತ ಪಾಸ್’ವರ್ಡ್ ಹೊಂದಿದ್ದು, ನೀವು ಜಾಗರೂಕವಾಗಿ ಹಣಕಾಸು ವಹಿವಾಟನ್ನು ನಡೆಸಬಹುದು.

2) ಇಎಂಐ ಸೌಲಭ್ಯ : ನೀವು ಫ್ರಿಜ್, ಟಿವಿ, ವಾಷಿಂಗ್ ಮಷಿನ್, ಇತರೆ ರೀತಿಯ ಖರೀದಿಗಳನ್ನು ಮಾಡಬೇಕೆಂದಿದ್ದರೆ ಕ್ರೆಡಿಟ್ ಕಾರ್ಡ್ ತಿಂಗಳ ಕಂತುಗಳಲ್ಲಿ ಪಾವತಿಸಲು ಹೆಚ್ಚು ಅನುಕೂಲವಾಗುತ್ತದೆ. ಸಂದರ್ಭಗಳಲ್ಲಿ ಬ್ಯಾಂಕ್’ಗಳು ಇಎಂಐ’ಗಳಿಗೆ ಅವಶ್ಯಕತೆಯಿದ್ದಾಗ ಮಾತ್ರ ಬಡ್ಡಿ ವಿಧಿಸುತ್ತವೆ. ವೈಯಕ್ತಿಕ ಸಾಲಗಳಿಗೆ ಪ್ರತ್ಯೇಕವಾಗಿ ಬಡ್ಡಿಯನ್ನು ಪಾವತಿಸಬೇಕಾದ ಅಗತ್ಯವಿರುವುದಿಲ್ಲ.

3) ನಗದು ವಾಪಸಾತಿ: ಕೆಲವು ಬ್ಯಾಂಕುಗಳು ದಿನಸಿ ಅಥವಾ ಯುಟಿಲಿಟಿ ಬಿಲ್’ಗಳ ಪಾವತಿಗೆ ಕ್ರೆಡಿಟ್ ಕಾರ್ಡ್’ಗಳಿಗೆ ನಗದು ವಾಪಸಾತಿ ಸೌಲಭ್ಯ ಕಲ್ಪಿಸಿರುತ್ತವೆ. ಆನ್’ಲೈನ್ ಶಾಪಿಂಗ್ ಮಾಡುವಾಗ ಈ ಸೌಲಭ್ಯಗಳಿರುತ್ತದೆ. ಆ ಕಾರಣದಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ.

4) ಗ್ರೇಸ್ ( ರಿಯಾಯಿತಿ ) ಅವಧಿ: ಬಹುತೇಕ ಬ್ಯಾಂಕ್’ಗಳು ನಿಮ್ಮ ಹಿಂಬಾಕಿ ಹಣವನ್ನು ಹಿಂತಿರುಗಿಸಲು 50 ದಿನಗಳ ಗ್ರೇಸ್ ಅವಧಿಯನ್ನು ನೀಡಿರುತ್ತವೆ. ಖರೀದಿ ಅವಧಿಯಲ್ಲಿ ನೀವು ಕ್ರೆಡಿಟ್ ಕಾರ್ಡ್’ನಿಂದ ಹಣವನ್ನು ವೆಚ್ಚ ಮಾಡಿದ್ದರೆ ವಾಪಸಾತಿಗೆ ಸಮಯ ದೊರಕುತ್ತದೆ. ಹೆಚ್ಚು ದಿನಗಳ ಅವಧಿ ಇರುವುದರಿಂದ ನೀವು ಹಣ ವಾಪಸ್ ಮಾಡಲು ಸಾಧ್ಯವಾಗುತ್ತದೆ.

5) ರಿವಾರ್ಡ್ ಅಂಕಗಳು: ಹೆಚ್’ಡಿಎಫ್’ಸಿ ರೀತಿಯ ಬ್ಯಾಂಕುಗಳು ಪ್ರತಿ 150 ರೂ. ವೆಚ್ಚಕ್ಕೆ ಕ್ರೆಡಿಟ್ ಕಾರ್ಡ್’ಗಳಿಗೆ ರಿವಾರ್ಡ್ ಅಂಕಗಳನ್ನು ನೀಡುತ್ತವೆ. ನಿಮಗೆ ಇಷ್ಟು ಅಂಕಗಳು ಸಾಕಾಗದಿದ್ದರೆ ನೀವು ರಿವಾರ್ಡ್’ಗಳ ಟ್ಯಾಬ್’ಗಳ ಅಡಿಯಲ್ಲಿ ಖರೀದಿ ಗಿಫ್ಟ್’ಗಳನ್ನು ಖರೀದಿಸಿ ಅಂಕಗಳನ್ನು ಗಳಿಸಿಕೊಳ್ಳಬಹುದು.

6) ವಿಮೆ: ಬಹುತೇಕ ಕ್ರೆಡಿಟ್ ಕಾರ್ಡ್’ಗಳು ಸಂಚಾರಿ ವಿಮೆ ರೀತಿಯ ಗ್ರಾಹಕ ಸುರಕ್ಷತಾ ಅನುಕೂಲಗಳನ್ನು ಕಲ್ಪಿಸಿರುತ್ತವೆ. ಬಾಡಿಗೆ ಕಾರು ವಿಮೆ, ಉತ್ಪನ್ನದ ವಾರಂಟಿಗಳು ಕೆಲವೊಮ್ಮೆ ತಯಾರಕರಿಂದ ಒದಗಿಸಲ್ಪಟ್ಟ ಅವಧಿಯನ್ನು ಮೀರಿರುತ್ತವೆ. ಆ ಕಾರಣದಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಬಗೆಗಿನ ಎಲ್ಲ ಅನುಕೂಲಗಳ ಬಗ್ಗೆ ತಿಳಿದುಕೊಳ್ಳಿ.

7) ಸಾರ್ವತ್ರಿಕವಾಗಿ ಸ್ವೀಕರಿಸಲಾಗುತ್ತದೆ : ಕ್ರೆಡಿಟ್ ಕಾರ್ಡ್’ಗಳನ್ನು ಡೆಬಿಡ್ ಕಾರ್ಡ್’ಗಳಂತೆ ಎಲ್ಲ ಕಡೆ ಅಂದರೆ ಕಾರ್ ಬಾಡಿಗೆ ಅಥವಾ ಕೊಠಡಿ ಬುಕ್ಕಿಂಗ್ ರೀತಿಯ ಕಡೆಗಳಲ್ಲೂ ಸ್ವೀಕರಿಸಲಾಗುತ್ತದೆ. ಕಾರ್ ಅಥವಾ ಕೊಠಡಿಯ ಯಾವುದೇ ಹಾನಿಗಳಿಗೆ ಗ್ರಾಹಕರನ್ನು ಹೊಣೆ ಮಾಡಲು ಸುಲಭ ವಿಧಾನವಾಗಿದ್ದು, ಈ ಕಾರಣಕ್ಕಾಗಿ ಮಾಲೀಕರು ಯೋಚನೆ ಮಾಡುತ್ತಾರೆ. ನೀವು ವಿದೇಶಿ ಪ್ರವಾಸ ಕೈಗೊಂಡಾಗಲು ಡೆಬಿಡ್ ಕಾರ್ಡ್’ಗಳಿಗಿಂತ ಕ್ರೆಡಿಟ್ ಕಾರ್ಡ್’ಗಳನ್ನು ಸ್ವೀಕರಿಸಲಾಗುತ್ತದೆ.

8) ಆಗಾಗ ವಿಮಾನ ಹಾರಾಟ : ನೀವು ಆಗಾಗ ವಿಮಾನಗಳಲ್ಲಿ ಪ್ರಯಾಣಿಸುವಿದಿದ್ದರೆ, ಪ್ರತಿ ಬಾರಿ ಟಿಕೆಟ್ ಖರೀದಿಗೆ ಕ್ರೆಡಿಟ್ ಕಾರ್ಡ್ ಸಹಾಯ ಮಾಡುತ್ತದೆ. ಇದು ಕೂಡ ನಿಮ್ಮ ಅಂಕ ಗಳಿಕೆಗೆ ಅನುಕೂಲ ಕಲ್ಪಿಸುತ್ತದೆ.

ಹಲವು ವಿಧಾನಗಳ ಬಳಕೆಗೆ ಕ್ರೆಡಿಟ್ ಕಾರ್ಡುಗಳು ಡೆಬಿಟ್ ಕಾರ್ಡುಗಳಿಗಿಂತಲೂ ಹೆಚ್ಚು ಅನುಕೂಲಕರ ಹಾಗೂ ಸುಲಭ. ಇದನ್ನು ಡೆಬಿಡ್ ಕಾರ್ಡ್’ಗಳಂತೆ ದುರಪಯೋಗಪಡಿಸಿಕೊಳ್ಳುವ ಅವಕಾಶ ಕಡಿಮೆ. ಒಮ್ಮೆ ಕ್ರೆಡಿಟ್ ಕಾರ್ಡ್’ಗಳ ಬಗ್ಗೆ ಮನನ ಮಾಡಿಕೊಂಡರೆ ಸುಲಭವಾಗಿ ನಿಭಾಯಿಸಬಹುದು. ಮೇಲಿನ ಎಲ್ಲ ಸುರಕ್ಷಿತ, ಅನುಕೂಲಕರ ವಿಚಾರಗಳನ್ನು ತಿಳಿದುಕೊಂಡರೆ ಕ್ರೆಡಿಟ್ ಕಾರ್ಡ್ ನಿಮ್ಮ ಜೇಬಿನಲ್ಲಿರುವುದಕ್ಕೆ ಯಾವುದೇ ತೊಂದರೆಗಳಲ್ಲಿಲ್ಲ.

Comments are closed.