ಕರ್ನಾಟಕ

ವಿಕ್ಸ್ ಇನ್‌ಹೇಲರ್ ಯಾವತ್ತಾದರೂ ಸೂಕ್ಷ್ಮವಾಗಿ ಗಮನಿಸಿದ್ದೀರಾ?

Pinterest LinkedIn Tumblr

ನಿತ್ಯ ನಮ್ಮ ಸುತ್ತಲೂ ನಡೆಯುವ ಘಟನೆಗಳು ಆಗಿರಬಹುದು, ಅಥವಾ ಅನೇಕ ವಸ್ತುಗಳು ಆಗಿರಬಹುದು. ಅವನ್ನು ಗಮನಿಸುತ್ತಾ ಇರುತ್ತೇವೆ. ಆದರೆ ಕೇವಲ ಕೆಲವು ವಸ್ತುಗಳ ಮೇಲೆ ಮಾತ್ರ ನಾವು ದೃಷ್ಟಿ ಹರಿಸುತ್ತೇವೆ. ಕೆಲವನ್ನು ಹಿಡಿಸಿಕೊಳ್ಳಲ್ಲ. ಈ ಹಿನ್ನೆಲೆಯಲ್ಲಿ ನಾವು ದೃಷ್ಟಿ ಹರಿಸುವ ಸಂಗತಿಗಳೂ ಸಹ ನಾವು ಒಮ್ಮೆಲೆ ಮರೆಯುತ್ತೇವೆ. ಅಂತಹವುಗಳಲ್ಲಿ ಒಂದು ವಿಕ್ಸ್ ಇನ್‌ಹೇಲರ್. ಇದನ್ನು ಸೂಕ್ಷ್ಮವಾಗಿ ನೋಡುವಂತಹದ್ದೇನಿದೆ?…ಎಂದರೆ ಒಮ್ಮೆ ನೋಡಿ.

ನೀವು ಕೊಂಡ ವಿಕ್ಸ್ ಇನ್‌ಹೇಲರ್ ಯಾವತ್ತಾದರೂ ಸೂಕ್ಷ್ಮವಾಗಿ ಗಮನಿಸಿದ್ದೀರಾ..? ಇಷ್ಟಕ್ಕೂ ಅದರಲ್ಲಿ ವಿಶೇಷ ಏನಾದರೂ ಕಾಣಿಸಿತೇ..! ಏನು ಹೇಳಲು ಸಾಧ್ಯವಾಗುತ್ತಿಲ್ಲವೇ..! ಒಮ್ಮೊಮ್ಮೆ ಕೀ ಚೈನ್ಸ್ ನಿಂದ ಕೂಡಿರುತ್ತವೆ. ಆದರೆ ಕೆಲವೊಮ್ಮೆ ಮಾತ್ರ ಕೀ ಚೈನ್ ಇರಲ್ಲ. ಹೌದು ಯಾಕೆ?

ಸಾಮಾನ್ಯವಾಗಿ ಬಹಳಷ್ಟು ಮಂದಿಗೆ ಈ ಸೀಸನ್‌ನಲ್ಲಿ ನೆಗಡಿಯಾಗುತ್ತಿರುತ್ತದೆ. ಹಾಗಾಗಿ ಈ ಸೀಸನ್‌ನಲ್ಲಿ ವಿಕ್ಸ್ ಇನ್‌ಹೇಲರ್ ಮಾರಾಟ ಹೆಚ್ಚಾಗಿರುತ್ತದೆ. ಅಂತಹ ಕೀ ಚೈನ್‌ನಿಂದ ಅದನ್ನು ಕೊಟ್ಟರೆ ಕಂಪೆನಿಗೆ ಅಷ್ಟೋ ಇಷ್ಟೋ ಲಾಸ್ ಆಗುತ್ತದೆ. ಹೇಗೂ ಸೇಲ್ಸ್ ಚೆನ್ನಾಗಿರುತ್ತದೆ. ಇದರ ಜತೆಗೆ ಕೀ ಚೈನ್ ಕೊಡದಿದ್ದರೆ ಅಧಿಕ ಲಾಭ ಪಡೆಯಬಹುದು ಎಂಬುದು ಇದರಲ್ಲಿ ಅಡಗಿರುವ ರಹಸ್ಯ.

ಇನ್ನು ಇದರಲ್ಲಿ ಅಡಗಿರುವ ಎರಡನೇ ಅಂಶ ಎಂದರೆ.. ಕೀ ಚೈನ್ ಇದ್ದರೆ ವಿಕ್ಸ್ ಇನ್‌ಹೇಲರನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುತ್ತಾರೆ. ಅದು ಎಲ್ಲೇ ಇದ್ದರೂ ಸುಲಭವಾಗಿ ಸಿಗುತ್ತದೆ. ಆದರೆ ಕೀ ಚೈನ್ ಇಲ್ಲದ ವಿಕ್ಸ್ ಇನ್‌ಹೇಲರ್ ಸುಲಭವಾಗಿ ಕಳೆದು ಹೋಗುತ್ತದೆ. ಹಾಗಾಗಿ ಕೆಲವಕ್ಕೆ ಕೀ ಚೈನ್ ಇರುತ್ತದೆ, ಇನ್ನೂ ಕೆಲವಕ್ಕೆ ಕೀ ಚೈನ್ ಇರಲ್ಲ. ಇದು ಇದರ ಹಿಂದೆ ಇರುವ ಉದ್ದೇಶ.

Comments are closed.