ಕುಂದಾಪುರ: ದನ-ಕರುಗಳಿಗೆ ನಾಲ್ಕು ಕಾಲುಗಳಿರುವುದು ಸಾಮಾನ್ಯ. ಆದರೇ ಪ್ರಕೃತಿಯ ಸೋಜಿಗವೋ, ಸೃಷ್ಟಿಯ ವೈಚಿತ್ರ್ಯವೋ ಎಂಬಂತೆ ಐದು ಕಾಲಿರುವ ದನ-ಕರುಗಳು ಇತ್ತೀಚೆಗೆ ಕುಂದಾಪುರದಲ್ಲಿ ಕಾಣಸಿಕ್ಕವು. ಪಂಡರಾಪುರದಿಂದ ಲೋಕಸಂಚಾರ ಹೊರಟ ತಂಡವೊಂದು ಐದು ಕಾಲಿನ ಒಂದು ದನ ಹಾಗೂ ಎರಡು ಕರುಗಳನ್ನು ಹಿಡಿದು ಜನರ ಬಳಿ ಭಿಕ್ಷಾಟನೆ ಮಾಡುತ್ತಿದ್ದರು.

ಅವರು ಹೇಳುವ ಪ್ರಕಾರ ದೈವಿಸಂಭೂತವಾಗಿರುವ ಈ ಗೋವುಗಳು ಅಪಾರ ಶಕ್ತಿ ಹೊಂದಿದೆ ಎನ್ನುತ್ತಾರೆ. ಇನ್ನು ಐದು ಕಾಲುಗಳಿರುವ ದನ ಹಾಗೂ ಕರುವಿನ ಹೊಟ್ಟೆ ಮೇಲ್ಭಾಗ (ಭುಜದ ಭಾಗದಲ್ಲಿ)ದಲ್ಲಿ ಹೆಚ್ಚುವರಿ ಕಾಲುಗಳಿದ್ದು ಇದು ಎಲ್ಲರನ್ನೂ ಅಚ್ಚರಿಗೊಳಿಸುತ್ತಿರುವುದು ಮಾತ್ರ ಸುಳ್ಳಲ್ಲ. ಇತ್ತೀಚೆಗಷ್ಟೇ ಮೂರು ಕಣ್ಣಿನ ಗೂಳಿಯೊಂದನ್ನು ಪಂಡರಾಪುರದ ಕೆಲವರು ಕುಂದಾಪುರ ಭಾಗಕ್ಕೆ ತಂದಿರುವುದು ಇಲ್ಲಿ ಗಮನಾರ್ಹ.
Comments are closed.