ಕರ್ನಾಟಕ

ಆರೋಗ್ಯ ವೃದ್ಧಿಗಾಗಿ ಉತ್ತಮ ಧಾನ್ಯದ ನೀರನ್ನು ಕುಡಿಯುವುದು ದೇಹಕ್ಕೆ ಒಳ್ಳೆದ್ದು.

Pinterest LinkedIn Tumblr

ಮಂಗಳೂರು: ನೋಡಲಿಕ್ಕೆ ಗೋಧಿಕಾಳಿನಂತೆಯೇ ಇದ್ದರೂ ಸೀಮೆ ಅಕ್ಕಿಯಂತಹ ಬಣ್ಣ ಹೊಂದಿರುವ ಬಾರ್ಲಿ ನಮ್ಮಲ್ಲಲ್ಲದಿದ್ದರೂ ವಿಶ್ವದ ಹಲವೆಡೆ ಪ್ರಮುಖ ಆಹಾರವಾಗಿದೆ. Gramineae ಎಂಬ ಸಸ್ಯವರ್ಗಕ್ಕೆ ಸೇರಿದ ಬಾರ್ಲಿಯ ವಿಶೇಷತೆ ಏನೆಂದರೆ ಇದನ್ನು ಯಾವುದೇ ಕಾಲದಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಸಬಹುದು.

ಸುಮಾರು ಹದಿನಾರರ ಶತಮಾನದಲ್ಲಿ ಗೋಧಿಗಿಂತಲೂ ಬಾರ್ಲಿಯೇ ಪ್ರಮುಖ ಆಹಾರವಾಗಿತ್ತು. ಅಂದಿನವರ ಆರೋಗ್ಯವನ್ನು ಇಂದಿನವರಿಗೆ ಹೋಲಿಸಿದರೆ ಅವರ ಆರೋಗ್ಯ ಎಷ್ಟೋ ಉತ್ತಮವಾಗಿತ್ತು. ಚೀನಾ, ಈಜಿಪ್ಟ್, ಗ್ರೀಸ್ ಮತ್ತು ರೋಮನ್ನರು ಅಂದಿನ ತಮ್ಮ ಆಹಾರದಲ್ಲಿ ಬಾರ್ಲಿಯ ಸೇವನೆಯನ್ನು ಇತಿಹಾಸದಲ್ಲಿ ದಾಖಲಿಸಿದ್ದಾರೆ. ಬನ್ನಿ, ಈ ಉತ್ತಮ ಧಾನ್ಯದ ನೀರನ್ನು ಕುಡಿಯುವುದರ ಮೂಲಕ ಪಡೆಯಬಹುದಾದ ಅದ್ಭುತ ಪ್ರಯೋಜನಗಳನ್ನು ನೋಡೋಣ….

ಈಜಿಪ್ಟ್ ಇತಿಹಾಸದ ಪ್ರಕಾರ
ಈಜಿಪ್ಟ್‌ನ ಇತಿಹಾಸದಲ್ಲಿ ತಿಳಿಸಿರುವ ಪ್ರಕಾರ ನಿತ್ಯವೂ ಬಾರ್ಲಿಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಲವು ಐತಿಹಾಸಿಕ ಮತ್ತು ಪುರಾತನ ಗ್ರಂಥಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ.

ಹೊಟ್ಟೆಯುಬ್ಬರಕ್ಕೆ ಉತ್ತಮ
ಅಜೀರ್ಣ ಅಥವಾ ಇತರ ಕಾರಣಗಳಿಂದ ಹೊಟ್ಟೆ ಮತ್ತು ಜಠರಗಳಲ್ಲಿ ಸಂಗ್ರಹವಾಗಿದ್ದ ವಿಷಕಾರಿ ಘನ ಮತ್ತು ವಾಯುಗಳನ್ನು ಹೊರಹಾಕಲು ಬಾರ್ಲಿ ನೀರು ಅತ್ಯಂತ ಸಮರ್ಥವಾಗಿದೆ. ಹೊಟ್ಟೆಯುಬ್ಬರ ಕಂಡುಬಂದ ತಕ್ಷಣ ಒಂದು ಲೋಟ ಬಾರ್ಲಿ ನೀರಿಗೆ ಕೊಂಚ ಲಿಂಬೆರಸ ಸೇರಿಸಿ ಕುಡಿಯುವುದು ಇನ್ನೂ
ಉತ್ತಮವಾದ ಪರಿಹಾರ ನೀಡುತ್ತದೆ.

ಅತಿಸಾರ ನಿಲ್ಲುತ್ತದೆ
ಅತಿಸಾರದಿಂದ ಬಳಲುತ್ತಿರುವವರಿಗೆ ತಕ್ಷಣವೇ ಒಂದು ಲೋಟ ಬಾರ್ಲಿ ನೀರನ್ನು ಕುಡಿಸುವ ಮೂಲಕ ಅತಿಸಾರವನ್ನು ನಿಲ್ಲಿಸಬಹುದು ಹಾಗೂ ಅತಿಸಾರದ ಮೂಲಕ ದೇಹ ಕಳೆದುಕೊಂಡಿದ್ದ ನೀರನ್ನು ಪುನಃ ದೇಹಕ್ಕೆ ಒದಗಿಸುವ ಕಾರಣ ನಿತ್ರಾಣವಾಗುವುದಿಲ್ಲ. ಅಲ್ಲದೇ ಇದು ಜೀರ್ಣಕ್ರಿಯೆಯನ್ನು
ಉತ್ತಮಗೊಳಿಸುತ್ತದೆ ಹಾಗೂ ದೇಹವನ್ನು ತಂಪಾಗಿರಿಸುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ
ಬಾರ್ಲಿಯ ನೀರನ್ನು ಸೋಸಿ ಮುಖವನ್ನು ತೊಳೆಯಲು ಬಳಸುವ ಮೂಲಕ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಸೆಳೆತ ಹೆಚ್ಚಿಸಿ ವೃದ್ದಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ.

ಗಂಟಲ ಬೇನೆ ಕಡಿಮೆಗೊಳಿಸುತ್ತದೆ
ಕೊಂಚ ಬಿಸಿಯಾಗಿರುವ ಮತ್ತು ಸೋಸಿದ ಬಾರ್ಲಿ ನೀರನ್ನು ಕುಡಿಯುವ ಮೂಲಕ ಗಂಟಲ ಬೇನೆ, ಟಾನ್ಸಿಲ್, pharyngitis ನಂತಹ ಗಂಟಲ ಸೋಂಕು ಮೊದಲಾದ ತೊಂದರೆಗಳನ್ನು ಶೀಘ್ರವೇ ಗುಣಪಡಿಸಬಹುದು.

ತೂಕ ಇಳಿಸಲು ಉತ್ತಮ
ನಿತ್ಯವೂ ಹಾಲಿನೊಂದಿಗೆ ಕುದಿಸಿದ ಬಾರ್ಲಿಯನ್ನು ಸೇರಿಸಿ ಕುಡಿಯುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತದೆ. ಬಾರ್ಲಿಯಲ್ಲಿ ಯಾವುದೇ ರುಚಿ ಇಲ್ಲದಿರುವ ಕಾರಣ ಹಾಲಿನೊಂದಿಗೆ ಸೇವಿಸಲು ಉತ್ತಮವಾಗಿದೆ. ಇದರಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಯಾವುದೇ ವಯಸ್ಸಿನವರು ಸೇವಿಸಬಹುದಾದ ಧಾನ್ಯವಾಗಿದೆ.

ಬಾರ್ಲಿ ನೀರು ತಯಾರಿಸುವ ವಿಧಾನ
ಮೊದಲು ಬಾರ್ಲಿಯನ್ನು ಚೆನ್ನಾಗಿ ತೊಳೆದು ಮುಳುಗುವಷ್ಟು ನೀರಿನಲ್ಲಿ ಹಾಕಿ ನೀರನ್ನು ಬಿಸಿಮಾಡಬೇಕು. ಕುದಿ ಬರುತ್ತಿದ್ದಂತೆ ಉರಿ ಆರಿಸಿ ಹಾಗೇ ತಣಿಯಲು ಬಿಡಬೇಕು. ತಣಿದ ಬಳಿಕ ಸೋಸಿ ತೆಗೆದ ನೀರೇ ಬಾರ್ಲಿ ನೀರು. ಇಡಿಯ ರಾತ್ರಿ ನೆನೆಸಿಟ್ಟ ನೀರು ಅತ್ಯುತ್ತಮವಾಗಿದೆ.

Comments are closed.