ರಾಷ್ಟ್ರೀಯ

ಕಳೆದ ವರ್ಷ ಗಡಿ ದಾಟಿದ್ದ ಭಾರತೀಯ ಯೋಧ ಚಂದು ಚವ್ಹಾಣ್ ಬಿಡುಗಡೆ: ಪಾಕಿಸ್ತಾನ

Pinterest LinkedIn Tumblr

ಇಸ್ಲಾಮಾಬಾದ್: ಕಳೆದ ವರ್ಷ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿ ಅಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಯೋಧ ಚಂದು ಚವ್ಹಾಣ್ ಅವರನ್ನು ಬಿಡುಗಡೆ ಮಾಡುವುದಾಗಿ ಶನಿವಾರ ಪಾಕಿಸ್ತಾನ ಪ್ರಕಟಣೆಯಲ್ಲಿ ತಿಳಿಸಿದೆ.

22 ವರ್ಷದ ಯೋಧ ಚಂದು ಚವ್ಹಾಣ್ ಅವರನ್ನು ಮಾನವೀಯತೆ ಆಧಾರದ ಮೇಲೆ ವಾಗಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸುವುದಾಗಿ ಪಾಕ್ ಸೇವೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಗಡಿಯೊಳಕ್ಕೆ ನುಸುಳಿ ಅಲ್ಲಿ ಸೆರೆ ಸಿಕ್ಕಿರುವ ಯೋಧ ಚಂದು ಚವ್ಹಾಣ್ ಬಗ್ಗೆ ಮಾಹಿತಿ ಕಲೆಹಾಕಿದ್ದ ಭಾರತದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರೊಂದಿಗೆ ಯೋಧನ ಬಿಡುಗಡೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು.

ಮಹಾರಾಷ್ಟ್ರದ ಭಮ್ರೆ ಜಿಲ್ಲೆಯ ಧುಲೆ ಎಂಬ ಊರಿನ ಚಂದು ಚವ್ಹಾಣ್ ಅವರು 2016ರ ಸೆಪ್ಟಂಬರ್ 30ರಂದು ತಮಗರಿವಿಲ್ಲದಂತೆಯೇ ಪಾಕಿಸ್ತಾನದ ಗಡಿ ದಾಟಿ ಹೋಗಿದ್ದರು.

Comments are closed.