ಕರಾವಳಿ

ಸಚಿವ ದೇಶಪಾಂಡೆಯವರಿಂದ ಕದ್ರಿ ಶ್ರೀ ಮಂಜುನಾಥ ದೇವರಿಗೆ ಮುಖ ಮಂಟಪದ ರಜತದ್ವಾರ ಸಮರ್ಪಣೆ

Pinterest LinkedIn Tumblr

ಮ೦ಗಳೂರು ಜನವರಿ, 21: ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಶನಿವಾರ ಮುಖಮಂಟಪದ ರಜತದ್ವಾರ ಸಮರ್ಪಣೆ ನಡೆಯಿತು.

ಕರ್ನಾಟಕ ಸರಕಾರದ ಬೃಹತ್ ಕೈಗಾರಿಕಾ ಸಚಿವರಾದ ಆರ್. ವಿ. ದೇಶಪಾಂಡೆಯವರು ಕದ್ರಿ ದೇವಳಕ್ಕೆ 16 ಕೆ.ಜಿ.ಯ 24 ಲಕ್ಷ ರೂ. ವೌಲ್ಯದ ಬೆಳ್ಳಿಯ ಮುಖ ಮಂಟಪವನ್ನು ಅರ್ಪಿಸಿದರು.

ಇಂದು ಮುಂಜಾನೆ 9.15 ಕ್ಕೆ ಸರಿಯಾಗಿ ತಂತ್ರಿಗಳು, ಅರ್ಚಕರು, ಜನಪ್ರತಿನಿಧಿಗಳು, ಗಣ್ಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ದೇಶಪಾಂಡೆಯವರು ಮುಖಮಂಟಪದ ರಜತದ್ವಾರವನ್ನು ಸಮರ್ಪಿಸಿದ್ದಾರೆ.

ಕದ್ರಿ ಶ್ರೀ ಮಂಜುನಾಥ ದೇವರ ಜಾತ್ರಾ ರಥೋತ್ಸವದ ಶುಭಾವಸರದಲ್ಲಿ ಈ ರಜತದ್ವಾರ ಸಮರ್ಪಣೆಯಾಗಿರುವುದರಿಂದ ಕದ್ರಿ ಶ್ರೀ ಕ್ಷೇತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಈ ವೇಳೆ ಸಚಿವರೊಂದಿಗೆ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉದ್ಯಮಿ ಎ.ಜೆ.ಶೆಟ್ಟಿ, ಕೊಂಕಣಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಮತ್ತಿತರರು ಉಪಸ್ಥಿತರಿದ್ದರು.

ರಜತ ಮುಖಮಂಟಪ ದ್ವಾರ ಸುಮಾರು 16ಕೆ.ಜಿ. ಬೆಳ್ಳಿಯ ತಗಡಿನಲ್ಲಿ ಅತ್ಯಾಕರ್ಷಕ ಸಾಂಪ್ರದಾಯಿಕವಾದ ಕುಸುರಿಯೊಂದಿಗೆ ಸ್ವರ್ಣ ಜ್ಯುವೆಲ್ಲರ್‍ಸ್‌ನ ರಾಮದಾಸ್ ನಾಕ್ ಮಾರ್ಗದರ್ಶನದಲ್ಲಿ ಸುಮಾರು 24 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿದೆ ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Comments are closed.