ಕರ್ನಾಟಕ

ಚಿಕ್ಕಮಗಳೂರಿನ ನರಸಿಂಹರಾಜಪುರ ಪೊಲೀಸ್ ಠಾಣೆಯಿಂದ 3 ಆರೋಪಿಗಳು ಎಸ್ಕೇಪ್ !

Pinterest LinkedIn Tumblr

ಚಿಕ್ಕಮಗಳೂರು: ಹನಿಟ್ರ್ಯಾಪ್ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಮೂವರು ಆರೋಪಿಗಳು ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಜನವರಿ 18ರಂದು ಹನಿಟ್ರ್ಯಾಪ್ ಪ್ರಕರಣದ ಸಂಬಂಧ ಮೂವರನ್ನ ಪೊಲೀಸರು ಬಂಧಿಸಿದ್ದರು. ಪೊಲೀಸರು ಎಫ್ ಐಆರ್ ದಾಖಲಿಸುವ ಮುನ್ನವೇ ಆರೋಪಿಗಳಾದ ಕೈರುನ್ನಿಸಾ, ರುಕ್ಸಾನ ಮತ್ತು ಅರುಣ್ ಎಂಬುವರು ಪರಾರಿಯಾಗಿದ್ದಾರೆ.

ಪ್ರಕರಣ ನಡೆದು ಮೂರು ದಿನಗಳು ಕಳೆದಿದೆ. ಆದರೆ ಪ್ರಕರಣವನ್ನು ಪೊಲೀಸರು ಮುಚ್ಚಿಟ್ಟು, ಆರೋಪಿಗಳನ್ನ ಹುಡುಕಾಡುತ್ತಿದ್ದಾರೆ. ಪರಾರಿಯಾದವರನ್ನ ಹುಡುಕಿ ತರುವಂತೆ ಎನ್.ಆರ್.ಪುರ ಪಿಎಸ್‍ಐ ಹಾಗೂ ಇನ್ಸ್ ಪೆಕ್ಟರ್‍ಗೆ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೂಚಿಸಿದ್ದಾರೆ.

Comments are closed.