ಕರಾವಳಿ

‘ಕಂಬಳ’ದ ಪರವಾಗಿ ದನಿ ಎತ್ತಿದ ನಟ ಜಗ್ಗೇಶ್ ! ಏನು ಹೇಳಿದ್ದಾರೆ ನೋಡಿ…

Pinterest LinkedIn Tumblr

ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಪ್ರಾದಾಯಿಕ ಕ್ರೀಡೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡದ ಸತಾತನ ಗ್ರಾಮೀಣ ಕ್ರೀಡೆ ‘ಕಂಬಳ’ದ ಪರವಾಗಿ ದನಿ ಆರಂಭವಾಗತೊಡಗಿದೆ.

ನವರಸ ನಾಯಕ ಜಗ್ಗೇಶ್ ಅವರು ಕಂಬಳ ಪರವಾಗಿ ಮಾತನಾಡಿದ್ದು, ರಾಜ್ಯದ ಗ್ರಾಮೀಣ ಕ್ರೀಡೆಯಾಗಿರುವ ಕಂಬಳದ ಪರ ಒಗ್ಗೂಡಿ ದನಿ ಎತ್ತರ ಕನ್ನಡಿಗರ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕಂಬಳ ಗ್ರಾಮೀಣ ಕ್ರೀಡೆ ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಜಗ್ಗೇಶ್ ಅವರು, ಯಾಕೆ? ತಿಲಾಂಜಲಿ! ಜಲ್ಲಿಕಟ್ಟುವಿನಂತೆ ಕಂಬಳ ಕೂಡ ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆಯಾಗಿದ್ದು, ತಮಿಳರಂತೆ ಕನ್ನಡಿಗರೂ ಒಗ್ಗಟ್ಟಿನ ಮಂತ್ರಿ ಜಪಿಸಬೇಕಿದೆ. ಇದಕ್ಕೆ ಕನ್ನಡಿಗರು ಕೈಜೋಡಿಸಬೇಕು. ಇಡೀ ವಿಶ್ವದ ಕನ್ನಡಿಗರೂ ಒಂದಾಗಬೇಕಿದೆ ಎಂದು ಹೇಳಿದ್ದಾರೆ.

Follow
ನವರಸನಾಯಕ ಜಗ್ಗೇಶ್ ✔ @Jaggesh2
ಯಾಕೆ?ತಿಲಾಂಜಲಿ!ಜಲ್ಲಿಕಟ್ಟುವಿನಂತೆ ಕಂಬಳವು ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆ.ತಮಿಳರಂತೆ ಒಗ್ಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಇಡಿವಿಶ್ವದ ಕನ್ನಡಿಗರು ಒಂದಾಗಿ? https://twitter.com/Veeresh4827/status/822459009160642561 …
7:35 PM – 20 Jan 2017
80 80 Retweets 309 309 likes

ಕಂಬಳ ಕುರಿತಂತೆ ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆಯಿದ್ದು, ಈಗಲಾದರೂ ಕನ್ನಡಿಗರು ಒಂದಾಗಬೇಕು. ಕನ್ನಡಿಗರು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ತೋರಿಸಬೇಕು. ಶುರುವಾಗಲಿ ಒಗ್ಗಟ್ಟಿನ ಮಂತ್ರ, ಒಂದಾಗ ಹೋರಾಡೋಣ ನ್ಯಾಯಕ್ಕಾಗಿ. ಉತ್ತರ, ದಕ್ಷಿಣ, ಹಳೇ ಮೈಸೂರು ಅನ್ನದೆಯೇ ಕನ್ನಿಡಿಗರು ಅಖಂಡ ಕರ್ನಾಟಕ ಎಂದು ಒಗ್ಗಟ್ಟಿನಿಂದ ಒಂದಾಗಿ ದನಿಯೆತ್ತಬೇಕು. ಆಗ ಇಡೀ ವಿಶ್ವಕ್ಕೇ ಕನ್ನಡಿಗರ ಕೂಗು ಕೇಳುತ್ತದೆ. ಇದಕ್ಕೆ ಸ್ವಾಭಿಮಾನ ಬೇಕಷ್ಟೇ.

ಯಾರು ಒಪ್ಪುತ್ರತಾರೋ, ಬಿಡುತ್ತಾರೋ ನಾನು ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ ನಮ್ಮ ಕಂಬಳವನ್ನು ಬೇಕು ಎಂದು ಕೂಗುತ್ತೇನೆ. ನಮ್ಮ ಹಕ್ಕು, ನಮ್ಮ ಪದ್ಧತಿ, ನಿಲ್ಲಿಸಲು ಯಾರಿಗೂ ಹಕ್ಕು ಇಲ್ಲ ಎಂದು ತಿಳಿಸಿದ್ದಾರೆ.

Comments are closed.