ಅಂತರಾಷ್ಟ್ರೀಯ

ಜಿಮೇಲ್ ಹೊಸ ಆನ್’ಲೈನ್ ಸ್ಕ್ಯಾಮ್’ಗೆ ಬಲಿಯಾಗದಿರಿ

Pinterest LinkedIn Tumblr

ನವದೆಹಲಿ(ಜ. 20): ಆನ್’ಲೈನ್’ನಲ್ಲಿ ಹ್ಯಾಕರ್’ಗಳು, ವಂಚಕರು ಪ್ರತೀ ದಿನ ಮೋಸಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಸುಳ್ಳು ಹೆಸರಲ್ಲಿ ಲಿಂಕ್ ಕಳುಹಿಸುವುದು, ಬಹುಮಾನ ಸಿಕ್ಕಿದೆ ಎಂದು ಮೋಸ ಮಾಡುವುದು ಇತ್ಯಾದಿ ತಂತ್ರಗಳನ್ನು ವಂಚಕರು ಈಗಲೂ ಮಾಡುತ್ತಿದ್ದಾರೆ. ಇದೀಗ ಸರ್ವೇಸಾಮಾನ್ಯವಾಗಿ ಬಳಕೆಯಾಗುವ ಜಿ-ಮೇಲ್’ನಲ್ಲಿ ಹೊಸ ವಂಚನೆಯ ಟ್ರಿಕ್’ವೊಂದು ಜಾರಿಯಲ್ಲಿದೆ. ವರ್ಡ್’ಫೆನ್ಸ್ ಎಂಬ ಆನ್’ಲೈನ್ ಸೆಕ್ಯೂರಿಟಿ ಸಂಸ್ಥೆಯು ಜಿಮೇಲ್’ಗೆ ಆವರಿಸಿರುವ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ತಾಂತ್ರಿಕವಾಗಿ ಪಕ್ವವಾದ ಪರಿಣಿತರೂ ಕೂಡ ಬಲೆ ಬೀಳುವಷ್ಟು ಬುದ್ಧಿವಂತಿಕೆಯಿಂದ ವಂಚಕ ಜಾಲವನ್ನು ಸೃಷ್ಟಿಸಲಾಗಿದೆ.
ಏನಿದು ಜಿಮೇಲ್ ವಂಚನೆ?
* ನಿಮಗೆ ಗೊತ್ತಿರುವ ವ್ಯಕ್ತಿಯೊಬ್ಬರಿಂದ ನಿಮ್ಮ ಜಿಮೇಲ್’ಗೆ ಮೇಲ್ ಬರಬಹುದು.
* ನಿಮಗೆ ಗೊತ್ತಿರುವ ಇಮೇಜ್ ಅಥವಾ ಅಟ್ಯಾಚ್’ಮೆಂಟ್ ಆ ವ್ಯಕ್ತಿ ಕಳುಹಿಸಿರುವ ಮೇಲ್’ನಲ್ಲಿರಬಹುದು. ನೀವು ಈ ಮೊದಲು ಆ ವ್ಯಕ್ತಿಗೆ ಕಳುಹಿಸಿದ್ದ ಇಮೇಜ್ ಅದಾಗಿದ್ದರೂ ಇರಬಹುದು. ಒಟ್ಟಿನಲ್ಲಿ ನಿಮಗೆ ಅನುಮಾನ ಬರಬಾರದ ರೀತಿಯಲ್ಲಿ ಇಮೇಜ್ ಅಥವಾ ಅಟ್ಯಾಚ್ಮೆಂಟ್ ಇರುತ್ತದೆ.
* ನೀವು ಆ ಇಮೇಜ್ ಅಥವಾ ಅಟ್ಯಾಚ್ಮೆಂಟ್ ಕ್ಲಿಕ್ ಮಾಡಿದರೆ ಅದು ಹೊಸ ಟ್ಯಾಬ್’ನಲ್ಲಿ ಓಪನ್ ಆಗುತ್ತದೆ.
* ಆ ಹೊಸ ಟ್ಯಾಬ್’ನಲ್ಲಿ ನೀವು ಜಿಮೇಲ್’ಗೆ ಮತ್ತೊಮ್ಮೆ ಸೈನ್-ಇನ್ ಆಗಬೇಕಾಗುತ್ತದೆ.
* ನೀವು ಸೈನ್-ಇನ್ ಮಾಡಿದ್ದೇ ಆದಲ್ಲಿ ಹ್ಯಾಕರ್ ಬಲೆಗೆ ಬಿದ್ದಂತೆಯೇ.
* ನೀವು ಬಲೆಗೆ ಬಿದ್ದು ಅಕೌಂಟ್ ಹ್ಯಾಕ್ ಆದರೆ, ನಿಮ್ಮ ಜಿಮೇಲ್ ಕಾಂಟ್ಯಾಕ್ಸ್’ಗಳೆಲ್ಲರಿಗೂ ನಿಮಗಾದ ರೀತಿಯಲ್ಲೇ ವಂಚನೆಯಾಗಬಹುದು.
ರಕ್ಷಣೆಗೆ ಏನು ಮಾಡಬೇಕು?
* ಬ್ರೌಸರ್’ನಲ್ಲಿ ಯಾವಾಗಲೂ ಲೊಕೇಶನ್ ಬಾರ್ ಚೆಕ್ ಮಾಡಿರಿ.
* ಪ್ರೋಟೋಕಾಲನ್ನು ಯಾವಾಗಲೂ ವೆರಿಫೈ ಮಾಡಿ
* ಜಿಮೇಲ್’ನಿಂದ ಅಟ್ಯಾಚ್ಮೆಂಟ್ ಕ್ಲಿಕ್ ಮಾಡಿ ಓಪನ್ ಆದ ಟ್ಯಾಬ್’ನಲ್ಲಿ “https://accounts.google.com” ಕಾಣುತ್ತಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
* “https://”ಗೆ ಮುಂಚೆ ಏನೂ ಬರಬಾರದು.
* ಜಿಮೇಲ್’ನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿ. ಎರಡು ಸುತ್ತಿನ ಅಥೆಂಟಿಕೇಶನ್ ಪಾಸ್ವರ್ಡ್ ಆ್ಯಕ್ಟಿವೇಟ್ ಮಾಡಿರಿ.

Comments are closed.