ಕರ್ನಾಟಕ

ಪ್ರೀತಿ ಪ್ರೇಮದ ನಿಜ,ಸುಳ್ಳುಗಳ ಕಣ್ಣಾಮುಚ್ಚಾಲೆ ಆಟ ಕಂಡು ಹಿಡಿಯುವ ಸೂತ್ರ.

Pinterest LinkedIn Tumblr

ಮಂಗಳೂರು: ಆ ಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಪ್ರಾಣ ಕೊಂಡುವವರು ಇದ್ದರು ಅದರೆ ಈ ಕಾಲದಲ್ಲಿ ಎಲ್ಲವೂ ನಾಟಕೀಯವಾಗಿದ್ದು ಯಾವುದನ್ನು ನಂಬುವುದು ಯಾವುದನ್ನು ಬೀಡುವುದು ಒಂದು ತಿಳಿಯಿದಾಗ ಕೊನೆಗೆ ಸಾವಿಗೆ ಶರಣಾಗುತ್ತಾರೆ ಅಥವಾ ಪ್ರೇಮಿಯನ್ನು ಕೊಲೆ ಮಾಡಿ ತಾನು ಅತ್ಮಹತ್ಯೆ ಮಾಡುತ್ತಾರೆ. ಇದರ ಬದಲು ಎಲ್ಲರೂ ಒಮ್ಮೆ ಆಲೋಚಿಸಿದರೆ ಎಲ್ಲವೂ ಸುಗಮವಾಗಿ ಬಾಳು ಬಂಗಾರವಾಗುತ್ತದೆ.ಅದಕ್ಕಾಗಿ ಈ ಲೇಖನವನ್ನು ಒಮ್ಮೆ ಓದಿ.

1. ಇಂದು ನಿಮ್ಮನ್ನು ಭೇಟಿ ಮಾಡಿ, ನಾಳೆ ನಿಮ್ಮ ಬಳಿ ಬಂದು ಪ್ರಪೋಸ್ ಮಾಡುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಮೊದಲ ನೋಟಕ್ಕೆ ಪ್ರೀತಿಸಿದೆ ಎಂಬ ಮಾತು ಕೇಳಲು ಚೆಂದ. ಆದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೆ, ನಿಮ್ಮ ಅಥವಾ ಆತನ ಗುಣ, ನಡತೆ, ಬೇಕು , ಬೇಡಗಳನ್ನು ಅರ್ಥ ಮಾಡಿಕೊಳ್ಳದೆ ಪ್ರೀತಿ ಮಾಡಿದರೆ ಅದು ಪ್ರೀತಿ ಎನಿಸಿಕೊಳ್ಳುವುದಿಲ್ಲ. ಅಂತಹ ಪ್ರೀತಿ ಧೀರ್ಘಕಾಲ ಉಳಿಯುವುದಿಲ್ಲ.

2. ಹಳೆ ಪ್ರೇಮಿಯನ್ನು ಆಗಾಗ್ಗೆ ನೆನೆಸಿಕೊಳ್ಳುವಾತ ನಿಮಗೆ ಬೇಡ. ಯಾವುದೋ ಕಾರಣಕ್ಕೆ ಆತನಿಗೆ ಬ್ರೇಕ್ ಅಪ್ ಆಗಿರಬಹುದು. ನಿಮ್ಮ ಪರಿಚಯ ಆದ ಬಳಿಕವೂ ಆತ ಆಗಾಗ್ಗೆ ನಿಮ್ಮ ಮುಂದೆ ಎಕ್ಸ್‌‌ ಗರ್ಲ್‌‌‌‌‌ಫ್ರೆಂಡ್ ಅನ್ನು ನೆನಪಿಸಿಕೊಳ್ಳುವುದು, ನಿಮ್ಮನ್ನು ಆಕೆಗೆ ಹೋಲಿಸುವುದು ಮಾಡಿದರೆ ನೀವು ಸಹಿಸಿಕೊಳ್ಳಲು ಸಿದ್ಧರಿರುತ್ತೀರಾ ಯೋಚಿಸಿ.

3. ‘ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ‘ ನೀವು ಕೇಳಿದ ಪ್ರತಿಯೊಂದಕ್ಕೂ ‘ ಯೆಸ್‌ ‘ ಎನ್ನುವಾತ, ನಿಮ್ಮನ್ನು ಅತಿಯಾಗಿ ಕೇರ್‌ ಮಾಡುವವರ ಜೊತೆ ಹೋಗಬೇಡಿ.

4. ಹಣಕ್ಕೆ ಹೆಚ್ಚು ಮಹತ್ವ ನೀಡುವ ಪುರುಷ ಹಣವನ್ನು ಪ್ರೀತಿಸುತ್ತಾನೆ ಹೊರತು ನಿಮ್ಮನ್ನಲ್ಲ. ಪ್ರೀತಿ ಯಶಸ್ವಿಯಾಗಿ, ಅದು ವಿವಾಹಕ್ಕೆ ತಿರುಗಿ ನೀವು ಉತ್ತಮ ಜೀವನ ಮಾಡಲು ಹಣ ಬೇಕೇ ಬೇಕು. ನಿಮಗೆ ಒಂದು ಸೀರೆಯನ್ನೋ ಅಥವಾ ಯಾವುದೇ ವಸ್ತುವನ್ನು ಕೊಂಡುಕೊಳ್ಳಬೇಕು ಎಂದಾದಲ್ಲಿ, ಒಂದು ವೇಳೆ ನಿಮ್ಮ ಬಳಿ ಹಣವಿಲ್ಲದಿದ್ದಲ್ಲಿ ನೀವು ನಿಮ್ಮ ಪ್ರೇಮಿ ಅಥವಾ ನೀವು ಮದುವೆಯಾಗಿದ್ದಲ್ಲಿ ನಿಮ್ಮ ಪತಿ ಬಳಿ ಹಣ ಕೇಳಲೇಬೇಕು. ಆದರೆ ಆತ ಹಣ ಖರ್ಚು ಮಾಡಲು ರೆಡಿ ಇರದಿದ್ದರೆ ನಿಮಗೆ ಹೇಗೆ ಅನಿಸಬೇಡ.

5. ಸಾಮಾನ್ಯವಾಗಿ ಎಷ್ಟೋ ಕುಟುಂಬಗಳಲ್ಲಿ ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇರುವುದಿಲ್ಲ. ಒಂದು ವೇಳೆ ಅತ್ತೆಯೊಂದಿಗೆ ನಿಮಗೆ ಮನಸ್ಥಾಪವಾದಲ್ಲಿ ನಿಮ್ಮ ಪತಿ ಎನಿಸಿಕೊಂಡಾತ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಬೇಕು. ಆದರೆ ನೀವು ತಪ್ಪು ಮಾಡದಿದ್ದರೂ ಪ್ರತಿ ವಿಷಯಕ್ಕೂ ನಿಮ್ಮನ್ನು ಬೈಯ್ಯುವ ವ್ಯಕ್ತಿ, ಪ್ರತಿ ಕೆಲಸಕ್ಕೂ ಅಮ್ಮನನ್ನೇ ಅವಲಂಬಿತವಾಗಿರುವ ವ್ಯಕ್ತಿ ನಿಮ್ಮನ್ನು ಸುಖವಾಗಿ ನೋಡಿಕೊಳ್ಳಲು ಹೇಗೆ ಸಾಧ್ಯ..?

6. ನೀವು ಭೇಟಿಯಾದಾಗಲೆಲ್ಲಾ ಅಥವಾ ಮದುವೆಗೂ ಮುನ್ನವೇ ನಿಮ್ಮ ಬಗ್ಗೆ ಕೇರ್‌ ಮಾಡದೆ ಕೇವಲ ಸೆಕ್ಸ್‌‌‌‌ ಬಯಸುವ ಪುರುಷನಿಂದ ದೂರವಿರಿ. ಆತನಿಗೆ ಬೇಕಿರುವುದು ನಿಮ್ಮ ಬಾಹ್ಯ ಸೌಂದರ್ಯವೇ ಹೊರತು ನಿಮ್ಮ ಗುಣವನ್ನಲ್ಲ.

7. ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತೇ ಇದೆ. ಉದ್ಯೋಗದಲ್ಲಿ ಸಕ್ಸಸ್‌ ಆಗಿರುವ ಪುರುಷ ಹಣಕಾಸಿನ ವಿಷಯದಲ್ಲೂ ಮುಂದೆ ಇರುತ್ತಾನೆ. ಆದರೆ ಉದ್ಯೋಗ ಮಾಡಿದರೂ, ಮಾಡದಿದ್ದರೂ 10 ರೂಪಾಯಿಗೂ ತನ್ನ ತಂದೆಯ ಮುಂದೆ ಕೈ ಚಾಚಿ ನಿಲ್ಲುವ ವ್ಯಕ್ತಿಯ ಹಿಂದೆ ಹೋಗಲೇಬೇಡಿ. ಹಣಕ್ಕೆ ತಂದೆ ಅಥವಾ ನಿಮ್ಮ ಮೇಲೆ ಅವಲಂಬಿತವಾಗಿರುವ ವ್ಯಕ್ತಿ ನಿಮ್ಮ ಬೇಕು ಬೇಡಗಳನ್ನು ಹೇಗೆ ತಾನೆ ಪೂರೈಸುತ್ತಾನೆ ಯೋಚಿಸಿ.

Comments are closed.