ಕರಾವಳಿ

ಎಂಡೋಸಲ್ಫಾನ್ ಬಾಧೆಗೆ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

Pinterest LinkedIn Tumblr

ಬೆಳ್ತಂಗಡಿ, ಜನವರಿ.5: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪ ಆಲಡ್ಕ ಎಂಬಲ್ಲಿ ಎಂಡೋಸಲ್ಫಾನ್ ಸಮಸ್ಯೆಗೆ ನೊಂದು ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆಯೊಂದು ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಗಳನ್ನು ಕೊಕ್ಕ ಗ್ರಾಮದ ನಿವಾಸಿಗಳಾದ ಬಾಬು ಗೌಡ (62), ಪತ್ನಿ ಗಂಗಮ್ಮ (55), ಮಗ ಸದಾನಂದ (32) ಹಾಗೂ ಮತ್ತೊಬ್ಬ ಮಗ ನಿತ್ಯಾನಂದ (30) ಎಂದು ಗುರುತಿಸಲಾಗಿದೆ.

ಕುಟುಂಬದ ಐವರಲ್ಲಿ ಸದಾನಂದ ಹಾಗೂ ಇನ್ನೋರ್ವರು ಎಂಡೋಸಲ್ಫಾನ್ ಪೀಡಿತರಾಗಿದ್ದು, ಇಬ್ಬರು ಮಾರಕ ಎಂಡೋ ಸಲ್ಫಾನ್‌ ಅಡ್ಡಪರಿಣಾಮದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಎಂಡೋಸಲ್ಫಾನ್ ನಿಂದ ತೀವ್ರ ನೊಂದಿರುವ ಇವರೆಲ್ಲಾ ಜೀವನದಲ್ಲಿ ಜಿಗುಪ್ಸೆಗೊಂಡ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಲ್ವರ ಮೃತದೇಹ ಪತ್ತೆಯಾಗಿದೆ.

ಇದೇ ಸಂದರ್ಭದಲ್ಲಿ ದಯಾನಂದ ಎಂಬುವರು ನಾಪತ್ತೆಯಾಗಿದ್ದು, ಸ್ಥಳೀಯರು ಹುಡುಕಾಟದಲ್ಲಿ ತೊಡಗಿದ್ದಾರೆ.

Comments are closed.