ಕ್ರೀಡೆ

ಧೋನಿ ರಾಜೀನಾಮೆಗೆ ಕಾರಣ ಇಲ್ಲಿದೆ…ಅವರೇ ಸ್ವತಃ ಏನು ಹೇಳಿದ್ದಾರೆ…?

Pinterest LinkedIn Tumblr

ಭಾರತೀಯ ಕ್ರಿಕೆಟ್ ಲೋಕ ಕಂಡಂತಹ ಅಪ್ರತಿಮ ನಾಯಕ ಮಹೇಂದ್ರ ಸಿಂಗ್ ಧೋನಿ. ಕಳೆದ 10 ವರ್ಷಗಳಿಂದ ಟೀಂ ಇಂಡಿಯಾವನ್ನು ಈ ಕೂಲ್ ಕ್ಯಾಪ್ಟನ್ ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ ನಿನ್ನೆ ರಾತ್ರಿ ನೆಚ್ಚಿನ ಕೂಲ್ ಕ್ಯಾಪ್ಟನ್ ಮಹಿ ದಿಢೀರ್ ಆಗಿ ಟೀಂ ಇಂಡಿಯಾದ ಏಕದಿನ ಹಾಗೂ ಟಿ-20 ತಂಡದ ನಾಯಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. ಇವರ ಈ ದಿಢೀರ್ ನಿರ್ಧಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಅವರು ಈ ನಿರ್ಧಾರ ಕೈಗೊಂಡಿದ್ದೇಕೆ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದೀಗ ಖುದ್ದು ಧೋನಿ ತನ್ಯಾಕೆ ರಾಜಿನಾಮೆ ನೀಡಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದು, ಅಭಿಮಾನಿಗಳ ಅನುಮಾನಕ್ಕೆ ತೆರೆ ಎಳೆದಿದ್ದಾರೆ.

ನಿನ್ನೆ(ಬುಧವಾರ) BCCI ಧೋನಿ ತನ್ನ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಘೋಷಣೆ ಮಾಡಿದ್ದು, ಧೋನಿ ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಸದ್ಯ ಮಹಿ ನಾಗ್ಪುರದಲ್ಲಿ ಝಾರ್ಕಂಡ್ ರಣಜಿ ತಂಡದೊಂದಿಗಿದ್ದಾರೆ. ಬುಧವಾರದಂದು ಗುಜರಾತ್ ವಿರುದ್ಧದ ರಣಜಿಯ ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ ಧೋನಿ ತನ್ನ ರೂಂನಲ್ಲಿ ಗೆಟ್ ಟು ಗೆದರ್ ಪಾರ್ಟಿಯೊಂದನ್ನು ಆಯೋಜಿಸಿದ್ದರು.

ಧೋನಿ ಹೇಳಿದ್ದೇನು?
ರಾತ್ರಿ ಸುಮಾರು 08.30ಕ್ಕೆ ಎಲ್ಲಾ ಆಟಗಾರರು ಅವರ ರೂಂ ತಲುಪಿದ್ದರು. ಈ ವೇಳೆ ತಂಡದ ನಾಯಕ ಸೌರಬ್ ತಿವಾರಿ ‘ನೀವು ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ?’ ಎಂದು ಕೇಳಿದ್ದರು. ತಿವಾರಿಯ ಪ್ರಶ್ನೆಗೆ ಉತ್ತರ ನೀಡಿದ ಧೋನಿ ‘ನಾನು ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲೇ ಕ್ರಿಕೆಟ್’ನ ಮೂರು ವಿಭಾಗಕ್ಕೂ ಒಬ್ಬನೇ ನಾಯಕನಾಗಿರಬೇಕು ಎಂದು ತಿಳಿಸಿದ್ದೆ. ಮುಂದಿನ ಟಿ- 20 ಹಾಗೂ ಏಕದಿನ ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಒಬ್ಬನೇ ನಾಯಕನಿರಬೇಕು ಎಂಬ ಆಶಯ ನನ್ನದಾಗಿತ್ತು. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದೆ ಇದರಿಂದ ಕ್ರಿಕೆಟ್ ಮಂಡಳಿಯೂ ಅತಿ ಶೀಘ್ರವಾಗಿ ಟೀಂ ಇಂಡಿಯಾಗೆ ಹೊಸ ನಾಯಕನನ್ನು ಹುಡುಕಲಿ. ನಾನು ರಾಜಿನಾಮೆ ನೀಡದಿದ್ದರೆ ಸಮಸ್ಯೆ ಹಾಗೇ ಉಳಿಯುತ್ತಿತ್ತು’ ಎಂದಿದ್ದಾರೆ.

ಬಳಿಕ ಮತ್ತೊಬ್ಬ ಆಟಗಾರ ದಿಢೀರ್ ಆಗಿ ರಾಜಿನಾಮೆ ನೀಡಿದ್ದೇಕೆ? ಎಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರ ನೀಡಿದ ಮಹಿ ‘ಜೀವನದಲ್ಲಿ ಬಹಳಷ್ಟು ತಿರುವುಗಳು ಎದುರಾಗುತ್ತವೆ. ಈ ವೇಳೆ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನಾನು ಈಗ ಕೈಗೊಂಡ ನಿರ್ಧಾರವೂ ಶೇಕಡಾ ನೂರರಷ್ಟು ಸರಿಯಾಗಿದೆ. ಇನ್ನು ನೀವೆಲ್ಲಾ ಮುಂದೆ ಹೋಗಬೇಕು’ ಎಂದಿದ್ದಾರೆ.

ಬಳಿಕ ಮಾತನಾಡಿದ ಝಾರ್ಖಂಡ್ ತಂಡದ ಮ್ಯಾನೆಜರ್ ಪಿಎನ್ ಸಿಂಗ್ ‘ಧೋನಿ ಬಹಳ ಸಮಯ ನಮ್ಮೊಂದಿಗಿದ್ದರು. ಈ ವೇಳೆ ಯಾವತ್ತಾದರೂ ಒಂದು ದಿನ ನಾನು ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಲೇಬೇಕಿತ್ತು. ಮೂರೂ ಫಾರ್ಮೆಟ್’ಗಳಲ್ಲಿ ಒಬ್ಬನೇ ನಾಯಕನಾಗಿದ್ದರೆ ಇಡೀ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾನೆ ಎಂಬುವುದನ್ನು ಉಲ್ಲೇಖಿಸಿದ್ದರು’ ಎಂದಿದ್ದಾರೆ.

ಇನ್ನು ‘ಯಾವತ್ತೂ ಕೂಲ್ ಆಗಿಯೇ ಇರುವ ಧೋನಿ ಇಷ್ಟು ದೊಡ್ಡ ನಿರ್ಧಾರದ ಬಳಿಕವೂ ನಸುನಗುತ್ತಿದ್ದರು, ಅವರ ಮುಖದಲ್ಲಿ ಯಾವುದೇ ಬೇಜಾರು ಕಾಣುತ್ತಿರಲಿಲ್ಲ. ಪಾರ್ಟಿಯಲ್ಲಿ ಬಹಳ ಎಂಜಾಯ್ ಮಾಡಿದ್ದಲ್ಲದೆ, ಆಟಗಾರರೊಂದಿಗೆ ಹಾಡು ಹಾಡುತ್ತಾ ಸೆಲ್ಫೀಯನ್ನೂ ತೆಗೆಸಿಕೊಂಡಿದ್ದಾರೆ ಎಂದು ಝಾರ್ಖಂಡ್ ತಂಡದ ಕೋಚ್ ಹಾಗೂ ಧೋನಿಯೊಂದಿಗೆ ರಣಜಿ ಪಂದ್ಯ ಆಡಿದ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಧೋನಿ ತನ್ನ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಆದರೆ ಟೀಂ ಇಂಡಿಯಾದ ಆಟಗಾರನಾಗಿ ತಮ್ಮ ಕ್ರಿಕೆಟ್ ಜಗತ್ತಿನ ಪಯಣ ಮುಂದುವರೆಸಲಿದ್ದಾರೆ.

Comments are closed.