ಅಂತರಾಷ್ಟ್ರೀಯ

ಡ್ಯಾನ್ಸ್, ಡ್ಯಾನ್ಸ್ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ವೈದರ ಡ್ಯಾನ್ಸ್ : ಜಾಲತಾಣಗಳಲ್ಲಿ ವೈರಲ್‌ಲಾದ ವೀಡಿಯೋ

Pinterest LinkedIn Tumblr

https://www.youtube.com/watch?v=N7Q21-qnKrk

ನಮ್ಮೆಲ್ಲರಿಗೂ ನಮ್ಮ ಕೆಲಸ ಇಷ್ಟದ ಸಂಗತಿಯಾಗಿದ್ದು ಈ ನಡುವೆ ಕೊಂಚ ಸಂಗೀತ ನರ್ತನ ಸಹ್ಯವಾಗಿದೆ. ಆದರೆ ಶಸ್ತ್ರಚಿಕಿತ್ಸೆಯಂತಹ ಅತ್ಯಂತ ಗಹನ ಮತ್ತು ಸೂಕ್ಷ್ಮ ವಿಷಯದ ಸಮಯದಲ್ಲಿ ಸಂಗೀತ ನರ್ತನ ಸರ್ವಥಾ ಸಲ್ಲದು. ಆದರೆ ನುರಿತ ಈ ತಜ್ಞರಿಗೆ ಈ ರೀತಿಯ ವರ್ತನೆ ಸರಿಯಾಗಿತ್ತೇ? ಹೆಚ್ಚಿನವರು ಇದನ್ನು ತಪ್ಪು ಎಂದೇ ಹೇಳುತ್ತಾರೆ. ಅದಕ್ಕೆ ಸಾಕ್ಷಿಯಾಗಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಏಕಾಗ್ರತೆಯ ಅಗತ್ಯವಿದೆ. ಏಕೆಂದರೆ ಇಲ್ಲಿ ತಪ್ಪಿಗೆ ಅವಕಾಶವೇ ಇಲ್ಲ. ವೈದ್ಯರ ತಪ್ಪಿನಿಂದ ರೋಗಿ ಪರಂಧಾಮಕ್ಕೆ ಧಾವಿಸಬಹುದು. ಈ ಸಮಯದಲ್ಲಿ ವೈದ್ಯರಿಗೆ ಮನಸ್ಸನ್ನು ಬೇರೆಡೆ ಆಕರ್ಷಿಸುವ ಯಾವುದೇ ವಿಷಯ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಇರಲೇಬಾರದು. ಇದೇ ಕಾರಣಕ್ಕೆ ಶಸ್ತ್ರಚಿಕಿತ್ಸಾ ಕೊಠಡಿಯ ಹೊರಗೆ ಮಾತನಾಡುವುದು, ಸಂಗೀತ, ಮೊಬೈಲ್ ಇತ್ಯಾದಿ ಎಲ್ಲಕ್ಕೂ ನಿಷೇಧವಿದೆ. ಆದರೆ ಇಂತಹ ಒಂದು ಕೊಠಡಿಯಲ್ಲಿ ದಾದಿಯೊಬ್ಬರೊಂದಿಗೆ ಶಸ್ತ್ರಚಿಕಿತ್ಸಕ ವೈದ್ಯರು ಶಸ್ತ್ರಚಿಕಿತ್ಸೆಯ ಸಮಯದಲ್ಲಿಯೇ ನರ್ತಿಸಿದ್ದು ಮಾತ್ರ ಅಚ್ಚರಿಯ ವಿಷಯವಾಗಿದೆ…!
ಹೌದು, ನಂಬಲೇ ಸಾಧ್ಯವಿಲ್ಲದ ಈ ಸಂಗತಿ ನಿಜವಾಗಿದೆ. ಇದಕ್ಕೆ ಪುರಾವೆಯಾಗಿ ವಿಡಿಯೋ ಮುದ್ರಣವನ್ನೂ ನೀವು ನೋಡಬಹುದು.

ಇಂದು ಸಾಮಾಜಿಕ ತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಕಡ್ಲೆಕಾಯಿ ಹಂಚಿಕೊಳ್ಳುವುದಕ್ಕಿಂತ ಸುಲಭವಾದ ಬಳಿಕ ತಮ್ಮನ್ನು ಹೆಚ್ಚಿನ ಜನರ ನಡುವೆ ಗುರುತಿಸಿಕೊಳ್ಳಲು ಚಿತ್ರ ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವು ವಿಧಾನಗಳು ಅಪಾಯಕಾರಿಯೂ ಆಗಿವೆ. ಉದಾಹರಣೆಗೆ ಅಪಾಯಕರ ಅಂಚಿನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು.ಈ ವೈದ್ಯರೂ ತಮ್ಮ ಕೆಲಸದ ನಡುವೆ ನರ್ತಿಸಿ ಇದರ ವೀಡಿಯೋ ಮೂಲಕ ಜನಪ್ರಿಯತೆ ಗಳಿಸಿಕೊಳ್ಳಲು ಯತ್ನಿಸಿರಬಾರದೇಕೆ? ನಿಮ್ಮ ಅನುಮಾನವೂ ಇದೇ ಆಗಿದ್ದರೆ ಕೆಳಗಿನ ಮಾಹಿತಿ ನಿಮ್ಮ ಕುತೂಹಲ ತಣಿಸಲಿದೆ

ಈ ವೈದ್ಯರು ‘ಮಹಿಳೆಯರನ್ನು ಘಾಸಿಗೊಳಿಸುತ್ತಿದ್ದಾರೆ’ ಎಂಬ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ಗುಟ್ಟಾಗಿ ಈ ವಿಡಿಯೋಗಳನ್ನು ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ನಿಧಾನವಾಗಿ ಹರಿಬಿಟ್ಟಿದ್ದ. ಇದೊಂದೇ ಅಲ್ಲ, ಇದೇ ವೈದ್ಯರ ಇನ್ನೂ ಹಲವಾರು ವಿಡಿಯೋಗಳನ್ನು ತೆಗೆದಿದ್ದಾನೆ.

ಕೊಲಂಬಿಯಾ ದೇಶದ ವಾಯುವ್ಯ ಪ್ರಾಂತದಲ್ಲಿರುವ ಮೆಡೆಲ್ಲಿನ್ ನಗರದ ಕೌನ್ಸಿಲರ್ ಆಗಿರುವ ಬರ್ನಾರ್ಡೋ ಅಲೆಜಾಂದ್ರೋ ಗುವೇರಾ ರವರು ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಎಲ್ಲರ ಗಮನ ಸೆಳೆಯುವಂತೆ ಹರಿಬಿಟ್ಟಿದ್ದು ಈ ವೈದ್ಯರ ವಿರುದ್ಧ ಹಾಗೂ ಈ ರೀತಿಯ ಕೃತ್ಯ ಮತ್ತು ಅಜಾಗರೂಕತೆ ಎಸಗುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದ್ದಾರೆ.

ಈ ವೈದ್ಯರ ಬಳಿ ಚಿಕಿತ್ಸೆ ಪಡೆದ ಮಹಿಳೆಯೊಬ್ಬರು ಈ ವಿಡಿಯೋವನ್ನು ಕಂಡು ಈ ವೈದ್ಯರನ್ನು ಕಂಡು ಗುರುತು ಹಿಡಿದಿದ್ದಾರೆ. ಈಕೆ ತಮ್ಮ ದೊಡ್ಡ ಹೊಟ್ಟೆ ಮತ್ತು ಸ್ತನಗಳ ಚಿಕಿತ್ಸೆ ನಡೆಸಲು ಈ ವೈದ್ಯರ ಬಳಿ ಬಂದಿದ್ದು ಶಸ್ತ್ರಚಿಕಿತ್ಸೆಯ ಬಳಿಕ ಮೂರೇ ದಿನದಲ್ಲಿ ಇವರ ಆರೋಗ್ಯ ಬಿಗಡಾಯಿಸಿತ್ತು.ವಿಶ್ವದಾದ್ಯಂತ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಪ್ರತಿಜ್ಞೆಯನ್ನು ಪಾಲಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ ಅಗತ್ಯವಿರುವ ಎಲ್ಲಾ ರೀತಿಯ ನ್ಯಾಯ ಒದಗಿಸುವುದೂ ಈ ಪ್ರತಿಜ್ಞೆಯಲ್ಲಿ ಒಂದು.

ಈ ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ನರ್ತಿಸುವುದು ವೈದ್ಯವೃತ್ತಿಗೇ ಅವಮಾನಕರವಾಗಿದೆ ಎಂದು ಹೆಚ್ಚಿನ ವೈದ್ಯರು ಅಭಿಪ್ರಾಯ ಪಡುತ್ತಾರೆ.ಯಾವಾಗ ಈ ವೀಡಿಯೋ ಜಾಲತಾಣದಲ್ಲಿ ಲಭ್ಯವಾಯಿತೋ, ಜನರು ಮನಸೋ ಇಚ್ಛೆ ಇದನ್ನು ರವಾನಿಸಿ ವೈದ್ಯರ ಕೃತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ. ಕರ್ತವ್ಯದ ಸಮಯದಲ್ಲಿ ನರ್ತಿಸಿ ಕರ್ತವ್ಯಲೋಪ ಮಾಡಿದ ವೈದ್ಯರ ಮತ್ತು ಅವರೊಂದಿಗೆ ನರ್ತಿಸಿ ಸಹಯೋಗ ನೀಡಿದ ದಾದಿಯರ ವರ್ತನೆಯನ್ನು ಜಗತ್ತೇ ಖಂಡಿಸಿದೆ.

ಇವರ ವಿರುದ್ಧ ತಕ್ಷಣ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

Comments are closed.