ನವದೆಹಲಿ: ಪೆಟ್ರೋಲ್ ಬಂಕ್ ನಂತರ ಬಿಗ್ ಬಜಾರಲ್ಲೂ ಹಣ ಡ್ರಾ ಮಾಡಬಹುದಾಗಿದೆ. ಹಣದ ಅಗತ್ಯವಿದ್ದರೆ ಬಿಗ್ ಬಜಾರ್ ಮಳಿಗೆಗೆ ತೆರಳಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿದ್ರೆ 2000 ರೂ. ಹಣವನ್ನು ಪಡೆಯಬಹುದಾಗಿದೆ.
ಎಟಿಎಂ ಗಳಲ್ಲಿ ಹೆಚ್ಚುತ್ತಿರುವ ಕ್ಯೂ, ಹಣ ಬೇಗ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಬಜಾರ್ ಜೊತೆ ಟೈ ಅಪ್ ಮಾಡಿಕೊಂಡಿದ್ದು, ದೇಶದ 258 ಬಿಗ್ ಬಜಾರ್ ಮಳಿಗೆಗಳಲ್ಲಿ ಜನರಿಗೆ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಒದಗಿಸಿದೆ.
ಗುರುವಾರದಿಂದ ಬಿಗ್ ಬಜಾರ್ ಮಳಿಗೆಯಲ್ಲಿ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಸ್ವೈಪ್ ಮಾಡಿ ಹಣ ಪಡೆಯಬಹುದು. ಬಿಗ್ ಬಜಾರ್ ಮಳಿಗೆಯ ಕ್ಯಾಷ್ ಕೌಂಟರ್‍ಗೆ ತೆರಳಿ ನೀವು ಈ ಸೌಲಭ್ಯ ಪಡೆಯಬಹುದು ಎಂದು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಈ ಬಗ್ಗೆ ಟ್ವೀಟ್ ಮಾಡಿದ್ದು ಹೇಳಿದ್ದಾರೆ.
ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರು ಬಿಗ್ ಬಜಾರ್‍ನಲ್ಲಿ 2 ಸಾವಿರ ರೂ. ನಗದು ಹಣ ಪಡೆಯಲು ಏನು ಮಾಡಬೇಕು ಎಂದೂ ಇದರಲ್ಲಿ ವಿವರಿಸಿದ್ದಾರೆ.