ಕರ್ನಾಟಕ

ಸುಟ್ಟ ಗಾಯ ಹಾಗೂ ಅದರ ಕಲೆ ನಿವಾರಣೆಗೆ ನೈಸರ್ಗಿಕ ಮಾರ್ಗೋಪಾಯ

Pinterest LinkedIn Tumblr

burn_hand_solution

ಮಂಗಳೂರು: ಅಡುಗೆ ಮಾಡುವಾಗ ಕೈಕಾಲು ಮತ್ತು ದೇಹದ ಕೆಲವೆಡೆ ಸಣ್ಣಪುಟ್ಟ ಕಡೆಗಳಲ್ಲಿ ಸುಟ್ಟ ಗಾಯಗಳಾಗುತ್ತವೆ. ಅವುಗಳಿಗೆ ಮನೆಮದ್ದು ಹೀಗಿವೆ. ಸುಟ್ಟ ಗಾಯಗಳನ್ನು ಮತ್ತು ಅದರಿಂದಾಗುವ ಕಲೆಗಳ ನಿವಾರಣೆ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಸುಟ್ಟ ಗಾಯ ಮತ್ತು ಅದರ ಕಲೆ ನಿವಾರಣೆಗೆ ಅನೇಕ ಮನೆ ಮದ್ದುಗಳಿವೆ. ನೈಸರ್ಗಿಕ ಮಾರ್ಗೋಪಾಯಗಳೂ ಇವೆ. ಅವುಗಳನ್ನು ನಾವಿಂದು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ.

honey

1. ಜೇನು ತುಪ್ಪ: ಸುಟ್ಟ ತಕ್ಷಣವೇ ಆ ಜಾಗಕ್ಕೆ ಜೇನು ತುಪ್ಪ ಸವರಿಕೊಳ್ಳಿ. ಹೀಗೆ ಅರ್ಧ ಘಂಟೆ ಸುಟ್ಟ ಗಾಯದ ಮೇಲೆ ಜೇನುತುಪ್ಪ ಲೇಪಿಸಿಕೊಂಡರೆ, ಗಾಯದ ನೋವು ವಾಸಿಯಾಗುತ್ತದೆ. ಜೇನು ತುಪ್ಪಕ್ಕೆ ಸೂಕ್ಷ್ಮಾಣು ಪ್ರತಿಬಂಧಕ ಗುಣ ಇರೋದ್ರಿಂದ ಗಾಯ ವಾಸಿಯಾಗೋ ಹಾಗೆ ಮಾಡುತ್ತೆ.

vinegar

2. ಲ್ಯಾವೆಂಡರ್ ಎಣ್ಣೆ ಮತ್ತು ವಿನಿಗರ್: ಲ್ಯಾವೆಂಡರ್ ಎಣ್ಣೆಗೆ ಸೋಂಕು ಪ್ರತಿರೋಧಕ ಗುಣ ಇರೋದ್ರಿಂದ ಸುಟ್ಟ ಗಾಯ ಅಥವಾ ಇನ್ನಾವುದೇ ಗಾಯಕ್ಕೆ ಮನೆ ಔಷಧಿಯಾಗಿದೆ.  ಲ್ಯಾವೆಂಡರ್ ಎಣ್ಣೆಯನ್ನು ನೇರವಾಗಿ ಗಾಯದ ಮೇಲೆ ಲೇಪಿಸಿಕೊಳ್ಳಬಹುದು ಅಥವಾ ಶುಭ್ರವಾದ ಚಿಕ್ಕ ಹತ್ತಿ ಉಂಡೆಯನ್ನು ಎಣ್ಣೆಯಲ್ಲಿ ಅದ್ದಿ ಗಾಯಕ್ಕೆ ಹಾಕಿಕೊಳ್ಳಿ. ಲ್ಯಾವೆಂಡರ್ ಎಣ್ಣೆ ಹಾಗೆಯೇ ವಿನಿಗರ್ ಕೂಡ ಗಾಯಕ್ಕೆ ಮದ್ದಾಗಿ ಬಳಸಬಹುದು. ವಿನಿಗರ್ ಕೂಡ ಎಲ್ಲ ರೀತಿಯ ಗಾಯಕ್ಕೆ ಮದ್ದಾಗಿದೆ.

onion-500x500

3. ಈರುಳ್ಳಿ: ಈರುಳ್ಳಿಯನ್ನೂ ಸಹ ಸುಟ್ಟ ಗಾಯಕ್ಕೆ ಮನೆ ಮದ್ದಾಗಿ ಬಳಸಬಹುದು. ಸುಟ್ಟ ಗಾಯವನ್ನು ಶಮನ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಗಂಧಕದ ಸಂಯುಕ್ತಗಳು ಈರುಳ್ಳಿಯಲ್ಲಿರುವದರಿಂದ ಗಾಯ ನಿವಾರಣೆ ಗುಣ ಇದರಲ್ಲಿದೆ.

Aloe_Vera_pic

4. ಲೋಳೆಸರ: ಲೋಳೆಸರಕ್ಕೆ ದೇಹದಲ್ಲಾದ ಗಾಯವನ್ನು ಗುಣಪಡಿಸುವ ಸಾಮಾಥ್ರ್ಯವಿದೆ. ಸುಟ್ಟ ಗಾಯದಿಂದಾದ ನೋವನ್ನು ನಿವಾರಿಸಲು ಲೋಳೆಸರವನ್ನು ಬಳಸಬಹುದು. ಸುಟ್ಟ ಗಾಯಕ್ಕೆ ತಣ್ಣೀರಿನಿಂದ ಸ್ವಚ್ಛಗೊಳಿಸಿ ನಂತರ ಲೋಳರಸದ ತುಂಡನ್ನು ಅಥವಾ ಅದರ ಜೆಲ್‍ಅನ್ನು ಗಾಯದ ಮೇಲೆ ಇರಿಸಿ. ನೋವು ಗುಣಮುಖವಾಗುತ್ತದೆ. ಸುಟ್ಟ ಕಲೆ ಸಹ ಇರೋದಿಲ್ಲ. ಕಲೆ ಕ್ರಮೇಣ ಕಡಿಮೆಯಾಗುತ್ತದೆ.

milk+glass_big

5. ಹಾಲು: ಸುಟ್ಟ ತಕ್ಷಣ ಕೂಡಲೇ ಹೋಗೋದು ತಣ್ಣೀರಿನ ನಲ್ಲಿ ಹತ್ತಿರ. ಇದ್ರ ಜೊತೆಗೆ ಸ್ವಲ್ಪ ತಣ್ಣನೆಯ ಹಾಲು ಗಾಯದ ಮೇಲೆ ಹಾಕಿದರೂ ಗಾಯದ ನೋವು ಕಡಿಮೆ ಆಗುತ್ತದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಸೂಕ್ಷ್ಮವಾಗಿ, ಜಾಗರೂಕತೆಯಿಂದಾಗಿ ಅಡುಗೆ ಮಾಡಿ. ಯಾವುದೇ ಗಡಿಬಿಡಿ ಬೇಡ. ಆದರೂ ಸುಟ್ಟು ಗಾಯವಾದರೆ ಮೇಲಿನ ಮನೆ ಮದ್ದು ಮಾಡಿ ನೋಡಿ. ಅಷ್ಟಕ್ಕೂ ವಾಸಿಯಾಗದೇ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಯಾಕೆಂದರೆ ಗಾಯದ ಸ್ಥಿತಿ ಗಂಭೀರವಾದಾಗ ವೈದ್ಯರ ಚಿಕಿತ್ಸೆ ಬೇಕಾಗುತ್ತದೆ.

Comments are closed.