ಕರಾವಳಿ

ಉಡುಪಿಯ ಸರಕಾರಿ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಖಾಸಗೀಕರಣ; ಉದ್ಯಮಿ ಬಿ.ಆರ್.ಶೆಟ್ಟಿ ಒಡೆತನಕ್ಕೆ ಒಪ್ಪಿಸಿದ ಸರಕಾರ

Pinterest LinkedIn Tumblr

ಉಡುಪಿ: ಸಾರ್ವಜನಿಕರ, ಹಿರಿಯ ವೈದ್ಯರ, ಸಂಘಟನೆಗಳ ಭಾರೀ ವಿರೋಧದ ನಡುವೆಯೂ ಉಡುಪಿಯ ಸರಕಾರಿ ಮಕ್ಕಳ ಮತ್ತು ಹೆಂಗಸರ ಹೆರಿಗೆ ಆಸ್ಪತ್ರೆಯನ್ನು ಬಿ.ಆರ್. ಶೆಟ್ಟಿ ಒಡೆತನಕ್ಕೆ ಒಪ್ಪಿಸಿದ್ದು ಒಂದು ವರ್ಷದ ಅವಧಿಯಲ್ಲಿ ಚಾರಿಟಿ ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವ ಬಗ್ಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

udupi_governament_hospital-2 udupi_governament_hospital-1

ಹಾಜಿ ಅಬ್ಧುಲ್ಲಾ ಸಾಹೇಬರು ದಾನವಾಗಿ ನೀಡಿರುವ 3.88 ಎಕ್ರೆ ಜಾಗದಲ್ಲಿ ಬಿ.ಆರ್. ಶೆಟ್ಟಿ ಒಡೆತನದ ಮೂಲಕ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ಧುಲ್ಲಾ ಎಂಬ ಹೆಸರಿನಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಬಿ.ಆರ್ ಶೆಟ್ಟಿ ಅವರಿಗೆ ಜಾಗ ನೀಡುವ ಬಗ್ಗೆ ಈ ಹಿಂದೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಆದ್ರೆ ಖಾಸಗೀಕರಣವನ್ನು ಮಾಡಬಾರದು ಎಂದು ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಆದ್ರೆ ಇದೀಗ ಆರೋಗ್ಯ ಇಲಾಖೆಯಿಂದ ಎಂ.ಒ.ಯು ( ಮೆಮರಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್) ಆಗಿದ್ದು ಸರಕಾರ ಬಿ.ಆರ್. ಶೆಟ್ಟಿಗೆ 30 ವರ್ಷಗಳ ಅವಧಿಗೆ ಜಾಗವನ್ನು ಲೀಸ್ ಆಧಾರದಲ್ಲಿ ನೀಡಿದೆ. ಮಾತ್ರ ಅಲ್ಲ ಅವಶ್ಯಕತೆ ಬಂದರೆ ಮತ್ತೆ 30 ವರ್ಷ ಲೀಸ್ ನಿಡುವುದಾಗಿ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ.

ಮೊದಲು 200 ಬೆಡ್ ಗಳ ಚಾರಿಟಿ ಆಸ್ಪತ್ರೆಯನ್ನು ನಿರ್ಮಿಸಿ ಬಡವರಿಗೆ ಉಚಿತವಾದ ಚಿಕಿಸ್ತೆಯನ್ನು ನೀಡಬೇಕು. ಇದರ ಬಳಿಕ ಇದೀಗ ಇರುವ ಸರಕಾರಿ ಆಸ್ಪತ್ರೆಯನ್ನು ನೆಲಸಮ ಮಾಡಿ ಆ ಜಾಗದಲ್ಲಿ 400 ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಮಾರು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆ ಸರಕಾರ ಜೊತೆಗೆ ಒಡಂಬಡಿಕೆ ಆಗಿದೆ. 1 ವರ್ಷಗಳ ಅವಧಿಯಲ್ಲಿ ಆಸ್ಪತ್ರೆ ನಿರ್ಮಿಸಬೇಕು ಎಂಬ ಶರತ್ತು ಇದೆ ಮಾತ್ರ ಅಲ್ಲ ಚಿಕಿಸ್ತೆ ವೆಚ್ಚ, ಇತರ ಖರ್ಚುಗಳನ್ನು ಡಿಸಿ ನೇತೃತ್ವದ ಕಮಿಟಿ ನಿರ್ಧಾರ ಮಾಡಲಿದೆ. ಈ ವಿಚಾರದಲ್ಲಿ ಯಾರು ವಿರೋಧ ಮಾಡಬಾರದು. ವಿರೋಧ ಮಾಡುವವರಿಗೆ ಸರಿಯಾದ ಮಾಹಿತಿ ನೀಡಲು ಸರಕಾರ ಬದ್ದ ಇದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದರು.

Comments are closed.