ಕರಾವಳಿ

ಹಾಸ್ಟೇಲ್‌ನಿಂದ ಹೇಳದೇ ಕೇಳದೇ ಹೋದ ನರ್ಸಿಂಗ್ ವಿದ್ಯಾರ್ಥಿನಿ

Pinterest LinkedIn Tumblr

ಉಡುಪಿ: ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಯೋರ್ವಳು ಹಾಸ್ಟೇಲಿನಿಂದ ತೆರಳಿ ಕಾಣೆಯಾದ ಘಟನೆ ನಡೆದಿದೆ. ಉಡುಪಿಯ ನರ್ಸಿಂಗ್ ಕಾಲೇಜೊಂದರ ಹಾಸ್ಟೆಲಿನಲ್ಲಿ ಈ ಘಟನೆ ನಡೆದಿದೆ. ಉಡುಪಿಯ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ವಿದ್ಯಾರ್ಥಿನಿ ಬಿಂಟು ಮೋಳ್ ಜಾಕಬ್ (18) ಕಾಣೆಯಾದ ವಿದ್ಯಾರ್ಥಿನಿ.

udupi_narsing-student_jakab-missing

ಬಿಂಟು ಮೋಳ್ ಜಾಕಬ್ ಅವರು ಕಾಲೇಜಿನಲ್ಲಿರುವ ಹಾಸ್ಟೇಲ್‌ನಿಂದ ಹಾಸ್ಟೆಲ್ ವಾರ್ಡನ್‌ಗೆ ಮತ್ತು ಅವರೊಂದಿಗೆ ಇದ್ದ ಇತರ ವಿದ್ಯಾರ್ಥಿನಿಯರಿಗೆ ಹೇಳದೆ ಪತ್ರ ಬರೆದಿಟ್ಟು ಹೋಗಿದ್ದು ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

Comments are closed.