ಕರಾವಳಿ

ಉಡುಪಿಯಲ್ಲಿ ದೀಪಾವಳಿಗೆ ರಾತ್ರಿ 10 ಗಂಟೆ ಮೇಲೆ ಪಟಾಕಿ ಹೊಡೆಯುವಂತಿಲ್ಲ..!

Pinterest LinkedIn Tumblr

DIWALI_firecrackers

ಉಡುಪಿ: ದೀಪಾವಳಿ ಹಬ್ಬ ಬಂದಿದೆ. ದೀಪಾವಳಿಗೆ ಪಟಾಕಿ ಹೊಡೆಯುವುದು ಎಲ್ಲೆಡೆ ಮಾಮೂಲಿ. ಆದರೇ ಈ ಬಾರಿ ರಾತ್ರಿ ಪಟಾಕಿ ಹೊಡೆಯುವಾಗ ಕೊಂಚ ಜಾಗ್ರತೆ. ಯಾಕೇ ಅಂತೀರಾ ಈ ಸಣ್ಣ ವರದಿ ನೋಡಿ.

ದೀಪಾವಳಿ ಹಬ್ಬವನ್ನು ಅಕ್ಟೋಬರ್ 29 ರಿಂದ 31 ರ ವರೆಗೆ ಆಚರಿಸುವ ಸಂದರ್ಭ ಪಟಾಕಿಗಳ ಮಾರಾಟ ಮತ್ತು ಬಳಕೆಯಿಂದ ಶಬ್ಧ ಮಾಲಿನ್ಯ ಮತ್ತು ವಾಯುಮಾಲಿನ್ಯ ಉಂಟಾಗುವುದರಿಂದ ಶಬ್ಧ ಮಾಲಿನ್ಯವನ್ನು ನಿಯಂತ್ರಿಸಲು ಪರಿಸರ ಸಂರಕ್ಷಣಾ ಕಾಯ್ದೆಯಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಆದೇಶ ಹೊರಡಿಸಿರುತ್ತಾರೆ.

ಅದ್ದರಿಂದ ಪಟಾಕಿ ಹೊಡೆಯುವ ಮಂದಿ ೧೦ ಗಂತೆಯೊಳಗೆ ಪಟಾಕಿ ಹೊಡೆಯುವುದು ಸೂಕ್ತ.

(ಸಾಂದರ್ಭಿಕ ಚಿತ್ರ)

Comments are closed.