ಕರ್ನಾಟಕ

ತಂಬಾಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಮಹತ್ತರ ಶಾಕ್‌

Pinterest LinkedIn Tumblr

gutka

ಪಾನ್‌ ಮಸಾಲ ಮತ್ತು ಸುಂಗಂಧಿತ ತಂಬಾಕು ಪ್ರತ್ಯೇಕವಾಗಿ ಮಾರಾಟ ಮಾಡುವುದನ್ನು ರಾಜ್ಯದಲ್ಲೀಗ ನಿಷೇಧಿಸಲಾಗಿದ್ದು, ಪ್ರತ್ಯೇಕವಾಗಿ ಮಾರಾಟ ಮಾಡುವ ಮಾರ್ಗ ಕಂಡುಕೊಂಡಿದ್ದ ವ್ಯಾಪಾರಿಗಳು ಹಾಗೂ ಆ ವಲಯದ ಉದ್ದಿಮೆಗಳಿಗೆ ರಾಜ್ಯ ಸರ್ಕಾರ ಮಹತ್ತರ ಶಾಕ್‌ ನೀಡಿದೆ.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಭದ್ರತೆ ಮಂಡಳಿ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಪಾನ್‌ ಮಸಾಲ ಮತ್ತು ಸುಗಂಧಿತ ತಂಬಾಕು ಪ್ರತ್ಯೇಕವಾಗಿ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಪಾನ್‌ಮಸಾಲ ಮತ್ತು ಸುಗಂಧಿತ ತಂಬಾಕು ಪ್ರತ್ಯೇಕವಾಗಿ ಮಾರಾಟ ಮಾಡುವುದು, ತಯಾರಿಕೆ, ದಾಸ್ತಾನು ನಿಯಂತ್ರಣವು ಜಿಲ್ಲಾಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳ ಹೊಣೆಗಾರಿಕೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಗುಟ್ಕಾ (ಜಗಿಯುವ ತಂಬಾಕು)ನಿಷೇಧಿಸಲಾಗಿತ್ತು. ಆದರೆ, ಬೇರೆ ಮಾರ್ಗ ಕಂಡುಕೊಂಡಿದ್ದ ಉದ್ದಿಮೆಗಳು ಮತ್ತು ವ್ಯಾಪಾರಿಗಳು ಪಾನ್‌ಮಸಾಲ ಮತ್ತು ಸುಗಂಧಿತ ತಂಬಾಕು ಪ್ರತ್ಯೇಕ ಪಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು. ಸುಪ್ರೀಂಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ಇದನ್ನೂ ನಿಷೇಧಿಸುವ ಬಗ್ಗೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

Comments are closed.