ಕರ್ನಾಟಕ

ವಾಸ್ತವವಾಗಿ ಯಾವುದೇ ಕೊಂಡರೂ ಇದರ ಮೂಲ ವಸ್ತುಗಳು ಮಾತ್ರ ಒಂದೇ. ನಿಜನೇ…?

Pinterest LinkedIn Tumblr

colours_mind_1

ಮಂಗಳೂರು: ವಾಸ್ತವವಾಗಿ ಯಾವುದೇ ಪೌಡರ್ ಕೊಂಡರೂ ಇದರ ಮೂಲ ವಸ್ತುಗಳು ಮಾತ್ರ ಒಂದೇ. ಇದರೊಂದಿಗೆ ಬೆರೆಸಿದ ಅಗ್ಗದ ನೀಲಿ, ನೀಲಿ ಬಣ್ಣ ಬರುವ ಕಡ್ಡಿಗಳು ಮೊದಲಾದವುಗಳನ್ನೇ ವೈಭವೀಕರಿಸಿ ಹೆಚ್ಚಿನ ಸ್ವಚ್ಛತೆಯ ಭ್ರಮೆ ಮೂಡಿಸಲಾಗುತ್ತದೆ. ಇವೆಲ್ಲವೂ ಗ್ರಾಹಕರನ್ನು ಸೆಳೆಯುವ ತಂತ್ರವಾಗಿವೆಯೇ ಹೊರತು ನೀಲಿ ಬಣ್ಣ ಇದ್ದ ಮಾತ್ರಕ್ಕೇ ಇದು ಉತ್ತಮ ಎಂದರ್ಥವಲ್ಲ. ಆದರೆ ಮೂಲವಸ್ತುಗಳಿಗೇ ಖೋತಾ ಮಾಡುವ ಪುಡಿಗಳು ಮಾತ್ರ ನಿಷ್ಪ್ರಯೋಜಕ.

ವಾಸ್ತವವಾಗಿ ಬಟ್ಟೆ ಒಗೆಯಲು ಪುಡಿ ಯಾವುದೇ ಬಣ್ಣದ್ದಾಗಿರಲಿ, ಬಟ್ಟೆ ಸ್ವಚ್ಛಗೊಳಿಸಿದರೆ ಸರಿ ಎಂದು ಜನ ಅನ್ನಕೊಳ್ಳತ್ತಾರೆ. ಜನರ ಮನದಾಳದಲ್ಲಿ ಕೆಲವು ಬಣ್ಣಗಳು ಸ್ವಚ್ಛತೆಗೂ ಮಲಿನಕ್ಕೂ ನೇರ ನಂಟು ಹಾಕಿರುತ್ತವೆ.

ಈ ಪ್ರಕಾರ ಹಳದಿ ಎಂದರೆ ಮಲಿನ ಮತ್ತು ನೀಲಿ ಎಂದರೆ ಸಾಗರ, ಸ್ವಚ್ಛ. ಹಾಗಾಗಿ ಸ್ವಚ್ಛತೆಯ ಪರಿಕರವನ್ನು ಮಲಿನದ ಬಣ್ಣದಲ್ಲಿ ನೀಡಿದರೆ ಹೇಗೆ? ಇದೇ ಕಾರಣಕ್ಕೆ ಪುಡಿಗೆ ಬಲವಂತವಾಗಿ ನೀಲಿ ಬಣ್ಣವನ್ನು ಸೇರಿಸಲಾಗುತ್ತದೆ ಅಥವಾ ಕೇವಲ ನೀಲಿ ಬಣ್ಣ ನೀಡುವ ಪುಟ್ಟ ಕಡ್ಡಿಗಳನ್ನು ಸೇರಿಸಲಾಗುತ್ತದೆ.

ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಜನರು ಇದನ್ನು ಆಯ್ಕೆ ಮಾಡುವಂತೆ ಹತ್ತು ಹಲವು ವಿಧಾನಗಳನ್ನು ಅನುಸರಿಸಲೇಬೇಕು. ಇದಕ್ಕೆ ಪ್ರಥಮ ಆದ್ಯತೆ ಪ್ಯಾಕಿಂಗ್ ಅಥವಾ ಹೊರಕವಚಕ್ಕೆ. ಒಳಗಿನ ಹುಳುಕು ಹೇಗೇ ಇರಲಿ, ಹೊರಗಿನ ಥಳಕು ಚೆನ್ನಾಗಿದ್ದರೆ ಮಾತ್ರ ನಮ್ಮ ಜನರು ಇದನ್ನು ಕೊಳ್ಳುತ್ತಾರೆ.

ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆಚ್ಚಾಗಿ ಸ್ವಚ್ಛತಾ ಉಪಕರಣಗಳಲ್ಲಿ ನೀಲಿ ಬಣ್ಣವನ್ನೂ, ಆಹಾರವಸ್ತುಗಳಲ್ಲಿ ಹಸಿರು ಬಣ್ಣವನ್ನೂ, ಗೃಹೋಪಯೋಗಿ ವಸ್ತುಗಳಲ್ಲಿ ಬಿಳಿ ಬಣ್ಣವನ್ನೂ ಆಯ್ಕೆ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿ ಅಂಕಿ ಅಂಶಗಳ ಮೂಲಕ ಕಲೆಹಾಕಿ ಕುತೂಹಲಕರ ವಿವರಗಳನ್ನು ಪಡೆಯಲಾಗಿದೆ. ಇದರ ಪರಿಣಾಮವಾಗಿ ಡಿಟರ್ಜೆಂಟು ಪೌಡರುಗಳ ಪ್ಯಾಕಿಂಗ್ ಹಾಗೂ ಪುಡಿಗಳೂ ನೀಲಿ ಬಣ್ಣದಲ್ಲಿಯೇ ಇರುತ್ತವೆ.

ನಮ್ಮ ಕೈಗಳು ಮುಟ್ಟುವ ಯಾವುದೇ ವಸ್ತುಗಳು ಸ್ವಚ್ಛವಾಗಿರಬೇಕೆಂದು ನಾವು ಬಯಸುತ್ತೇವೆ. ಇದೇ ಕಾರಣಕ್ಕೆ ಮಲಿನಗೊಂಡ ವಸ್ತುಗಳನ್ನು ಮುಟ್ಟಲೇಬೇಕಾದರೆ ಅತಿ ಕಡಿಮೆ ಭಾಗ ತಾಕುವಂತೆ ಬೆರಳುಗಳನ್ನು ತಾಗಿಸುತ್ತೇವೆ. (ಬೇಕಾದರೆ ಈಗಲೇ ಪರೀಕ್ಷೆ ಮಾಡಿ ನೋಡಿ). ಹಾಗಿದ್ದಾಗ ಕೈಯಲ್ಲಿ ತೆಗೆದುಕೊಳ್ಳುವ ಪೌಡರುಗಳೂ ಸ್ವಚ್ಛವಾಗಿಲ್ಲದಿದ್ದರೆ ಹೇಗೆ? ಹೆಚ್ಚಿನವರು ನೀಲಿ ಅಥವಾ ಹಸಿರು ಬಣ್ಣದ ಸೋಪುಗಳನ್ನೇ ಆಯ್ಕೆ ಮಾಡಿದ ಕಾರಣ ಇವು ನೀಲಿ ಅಥವಾ ಹಸಿರು ಬಣ್ಣದ್ದೇ ಆಗಿರುತ್ತವೆ.

ಬಿಳಿಬಟ್ಟೆಗೆ ನೀಲಿ ಹಾಕುವ ಕ್ರಮ ಬಹುಕಾಲದಿಂದ ನಡೆದು ಬರುತ್ತಿದೆ. ಬಟ್ಟೆಗಳನ್ನು ಒಗೆದ ಬಳಿಕ ನೀರಿಗೆ ಕೊಂಚ ನೀಲಿ ಹಾಕಿ ಈ ನೀರಿನಲ್ಲಿ ಬಿಳಿ ಬಟ್ಟೆಗಳನ್ನು ಮುಳುಗಿಸಿ ಹಿಂಡಿ ಒಣಗಿಸಿದ ಬಳಿಕ ಬಟ್ಟೆಗಳು ಇನ್ನಷ್ಟು ಬಿಳುಪಾಗಿ ಹೊಳೆಯುತ್ತವೆ. ವಾಸ್ತವವಾಗಿ ಇದು ನಮ್ಮ ಕಣ್ಣಿನ ಮೋಸವಾಗಿದೆ. ಅಂದರೆ ಕೊಂಚವೇ ನೀಲಿ ಬಣ್ಣದ ಥಳುಕಿದ್ದರೆ ಬೆಳಕು ಹೆಚ್ಚು ವಕ್ರೀಭವಗೊಂಡು ಬಿಳಿಯ ಬಣ್ಣ ಪ್ರಖರವಾಗಿರುವ ಭ್ರಮೆ ಮೂಡಿಸುತ್ತದೆ. ಇದೇ ಪರಿಯನ್ನು ಡಿಟರ್ಜೆಂಟು ಪೌಡರುಗಳಲ್ಲಿಯೂ ಬಳಸಲಾಗಿದೆ. ಹೆಚ್ಚಿನವು ಸಾಮಾನ್ಯ ನೀಲಿಯನ್ನೇ ತಮ್ಮ ಪೌಡರುಗಳ ಜೊತೆ ಬೆರೆಸಿ ನೀಲಿ ಬಣ್ಣದ ಮೆರುಗು ಮೂಡಿಸುವ ಮೂಲಕ ಇತರರಿಗಿಂತಲೂ ಹೆಚ್ಚು ಬಿಳುಪಾಗಿಸುತ್ತೇವೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತವೆ.

 

Comments are closed.