ಕರ್ನಾಟಕ

ಒಳ್ಳೆಯದು-ಕೆಟ್ಟದು ಎಲ್ಲಾ ಆರೋಪ ಹೊತ್ತ ಉಪ್ಪಿನಿಂದ ಅಗುವ ಪ್ರಯೋಜನಗಳು

Pinterest LinkedIn Tumblr

SALT

ಮಂಗಳೂರು: ಹಿಂದಿನ ಕಾಲದಿಂದಲೂ ಹಿರಿಯರು ಪ್ರತಿಯೊಂದು ಮಾತಿಗೂ ಗಾದೆ ಮಾತನ್ನುಸೇರಿಸಿಮಾತನಾಡುತ್ತಿದ್ದರೂ, ಅದೇ ರೀತಿ ಈ ಗಾದೆ ಮಾತಿಗೂ ಅದರದೇ ಆದ ಮಹತ್ವ ವಿತ್ತು. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು, ಉಪ್ಪಿಗಿಂತ ರುಚಿಯಿಲ್ಲ, ಋಣಕ್ಕೆ ಉಪ್ಪಿನ ಋಣ ಎಂಬ ಗಾದೆಯನ್ನು ಪ್ರಾಯಶ್ಚಿತಕ್ಕೆ ಸಂವಾದಿಯಾಗಿ ಬಳಸುತ್ತೇವೆ. ಗಾದೆ ಮಾತುಗಳು ಇನ್ನೂ ಒಂದು ಒಳ್ಳೆಯ ವಿಚಾರವನ್ನು ತಿಳಿಸಿಕೊಡುತ್ತೇವೆ.

ನಮ್ಮ ದಿನ ನಿತ್ಯದಲ್ಲಿ ಬಳಸುವ ಈ ಉಪ್ಪು ದಿನ ನಿತ್ಯದ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹ ಬಳಸಲ್ಪಡುತ್ತದೆ.ಹಾಗೂ ಇದರಲ್ಲಿ ಉಪಶಮಕಾರಿ ಗುಣಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಸ್ವಾಭಾವಿಕ ಉಪ್ಪು ನಮಗೆ ಒಳ್ಳೆಯದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಉಪ್ಪಿನಲ್ಲಿ ಸುಮಾರು 80 ಬಗೆಯ ಖನಿಜಾಂಶಗಳು ಇವೆಯೆಂಬುದು ತಜ್ಞರ ಅಭಿಪ್ರಾಯ.

ಆದ್ದರಿಂದ ಇದು ಜೀರ್ಣಕ್ರಿಯೆಗೆ, ಮೂಳೆಗಳಿಗೆ, ರೋಗ ನಿರೋಧಕ ಶಕ್ತಿಗೆ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದನ್ನು ಪ್ರಯತ್ನಿಸಲು ಒಂದು ಸಣ್ಣ ಜಗ್ ತೆಗೆದುಕೊಂಡು ಅದಕ್ಕೆ 3 ಚಮಚ ಸಂಸ್ಕರಿಸದ ಉಪ್ಪನ್ನು ಬೆರೆಸಿಕೊಳ್ಳಿ. ಆನಂತರ ಆ ಜಗ್ ಅನ್ನು ಪೂರ್ಣವಾಗಿ ನೀರಿನಿಂದ ತುಂಬಿಸಿ ಮುಚ್ಚಿಟ್ಟುಕೊಳ್ಳಿ, ಅಲ್ಲದೆ ಇಡೀ ದಿನ ಹಾಗೆಯೇ ಬಿಡಿ.

ನಂತರ ಮರುದಿನ ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಈ ಉಪ್ಪು ನೀರಿನ ಮಿಶ್ರಣವನ್ನು ಬೆರೆಸಿಕೊಳ್ಳಿ. ಇದರಿಂದ ಯಾವುದೇ ಹಾನಿಯಾಗುವುದಿಲ್ಲ, ಆದರೂ ಈ ಉಪ್ಪು ನೀರಿನ ಮಿಶ್ರಣವನ್ನು ದಿನ ಬೆಳಗ್ಗೆ ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಬನ್ನಿ ಇದರಿಂದ ಯಾವ ಯಾವ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ತಿಳಿದುಕೊಳ್ಳೋಣ…

digestion_prblm_1

ಜೀರ್ಣಕ್ರಿಯೆಯನ್ನು ಉದ್ದೀಪಿಸುತ್ತದೆ :
ನೀವು ಉಪ್ಪು ನೀರಿನ ಮಿಶ್ರಣವನ್ನು ಸೇವಿಸಿದ ಮೇಲೆ ನಿಮ್ಮ ಲಾಲಾರಸದ ಗ್ರಂಥಿಗಳು ಉದ್ದೀಪನಗೊಳ್ಳುತ್ತವೆ ಮತ್ತು ನಿಮ್ಮ ಹೊಟ್ಟೆಯಲ್ಲಿರುವ ಆಮ್ಲಗಳು ಸಹ ಇದರಿಂದ ಬಿಡುಗಡೆಗೊಳ್ಳುತ್ತವೆ. ಇವು ಜೀರ್ಣಕ್ರಿಯೆಗೆ ಒಳ್ಳೆಯದು.

Beautiful Girl Touching Her Face. Isolated on a White Background. Perfect Skin. Beauty Face. Professional Makeup

ತ್ವಚೆಗೆ ಒಳ್ಳೆಯದು:
ಸ್ವಾಭಾವಿಕ ಉಪ್ಪಿನಲ್ಲಿರುವ ಖನಿಜಾಂಶಗಳು ತ್ವಚೆಗೆ ಸಹ ಒಳ್ಳೆಯದು. ಇದರಲ್ಲಿ ಗಂಧಕ, ಸತು, ಐಯೋಡಿನ್ ಮತ್ತು ಕ್ರೋಮಿಯಂ ಇರುತ್ತದೆ. ಇವು ಕೆಲವೊಂದು ತ್ವಚೆಯ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ.

backpain

ಉರಿಯೂತವನ್ನು ನಿವಾರಿಸುತ್ತದೆ:
ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಸೋಡಿಯಂ ಅನ್ನು ಈ ಉಪ್ಪು ನೀರಿನ ಮಿಶ್ರಣ ನೀಡುತ್ತದೆ. ಇದರಿಂದ ಉರಿಯೂತವನ್ನು ಉಂಟು ಮಾಡುವ ರೆನಿನ್ (ಕಿಣ್ವ) ಮತ್ತು ಅಲ್ಡೊಸ್ಟಿರೋನ್ (ಹಾರ್ಮೋನ್) ಹೆಚ್ಚಾಗುವುದನ್ನು ತಡೆಯುತ್ತದೆ. ಆದ್ದರಿಂದ ಬೆಳಗ್ಗೆ ಉಪ್ಪು ನೀರನ್ನು ಸೇವಿಸಿ ಉರಿಯೂತವನ್ನು ಹತೋಟಿಯಲ್ಲಿಟ್ಟುಕೊಳ್ಳಿ.

back_bone_disc

ಮೂಳೆಗಳು:
ಉಪ್ಪು ನೀರು ನಿಮ್ಮ ಮೂಳೆಗಳಿಗೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಯಾವಾಗ ನಿಮ್ಮ ರಕ್ತವು ಅಸಿಡಿಕ್ ಆಗಿ ಪರಿವರ್ತನೆಯಾಗುತ್ತದೆಯೋ, ಆಗ ನಿಮ್ಮ ದೇಹವು ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಬಳಸಲು ಆರಂಭಿಸುತ್ತದೆ. ನಿಮ್ಮ ದೇಹದಲ್ಲಿರುವ ಆಲ್ಕಾಲೈಸ್ ಅನ್ನು ಉಪ್ಪು ನೀರು ತಟಸ್ಥಗೊಳಿಸುತ್ತದೆ ಮತ್ತು ನಿಮ್ಮ ಮೂಳೆಗಳನ್ನು ಸುರಕ್ಷಿತವಾಗಿ ಇರಿಸುತ್ತದೆ.

sleep

ನಿದ್ದೆ:
ಉಪ್ಪಿನಲ್ಲಿರುವ ಕೆಲವೊಂದು ಖನಿಜಾಂಶಗಳು ನಿಮ್ಮ ನರವ್ಯೂಹಕ್ಕೆ ವಿಶ್ರಾಂತಿಯನ್ನು ನೀಡುತದೆ ಮತ್ತು ಒತ್ತಡಕಾರಿ ಹಾರ್ಮೋನ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮಗೆ ನೆಮ್ಮದಿಯಾಗಿ ನಿದ್ದೆ ಬರುತ್ತದೆ.

ನೀರನ್ನು ಪೂರೈಸುತ್ತದೆ:
ನಿಮ್ಮ ದೇಹವು ನೀರಿನ ಅಂಶವನ್ನು ಸಮರ್ಥವಾಗಿ ಹೀರಿಕೊಳ್ಳುವ ಗುಣಗಳನ್ನು ಹೊಂದಿರುತ್ತದೆ. ನೀರನ್ನು ಸಮರ್ಪಕವಾಗಿ ಬಳಸಿದಾಗ ಇದರ ಪ್ರಯೋಜನ ನಿಮಗೆ ದೊರೆಯುತ್ತದೆ. ಕೆಲವರಿಗೆ ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಂಡು ಬರುತ್ತದೆ. ಬೆಳಗ್ಗೆ ಉಪ್ಪು ನೀರನ್ನು ಸೇವಿಸುವುದರಿಂದ ದೇಹಕ್ಕೆ ನೀರಿನ ಅಂಶ ದೊರೆಯುತ್ತದೆ ಮತ್ತು ಮೂತ್ರ ವಿಸರ್ಜನೆ ಸರಾಗವಾಗಿ ನಡೆಯುತ್ತದೆ.

ಡಿಟಾಕ್ಸಿಫೈ ಮಾಡುತ್ತದೆ:
ಹಲವಾರು ಖನಿಜಾಂಶಗಳು ಉಪ್ಪು ನೀರಿನಲ್ಲಿ ಇರುತ್ತವೆ. ಇವು ನಿಮ್ಮ ದೇಹವನ್ನು ಡಿಟಾಕ್ಸಿಫೈ ಅಂದರೆ ನಂಜು ನಿವಾರಕಗೊಳಿಸುತ್ತದೆ. ಇದು ಒಂದು ಉತ್ತಮ ಆಂಟಿ ಬ್ಯಾಕ್ಟೀರಿಯಾ ಏಜೆಂಟ್ ಆಗಿರುವ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ಇತರೆ ಪ್ರಯೋಜನಗಳು:
ಉಪ್ಪು ನೀರು ನಿಮ್ಮ ದೇಹದ ಶಕ್ತಿಯ ಮಟ್ಟವನ್ನು ವರ್ಧಿಸುತ್ತದೆ, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸುತ್ತದೆ, ಸ್ನಾಯು ಸೆಳೆತವನ್ನು ನಿವಾರಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಹ ಸ್ಥಿರಗೊಳಿಸುತ್ತದೆ ಹಾಗು ನಿಮ್ಮ ದೇಹದ ತೂಕವನ್ನು ಇಳಿಸಲು ಸಹ ನೆರವಾಗುತ್ತದೆ.ದೂರ ಪ್ರಯಾಣದ ಬಳಿಕ ಸುಸ್ತು , ಕೈಕಾಲು ಸೆಳೆತ, ಆಯಾಸ ಎಂದು ಅನಿಸಿದರೆ ಒಂದು ಬಕೆಟ್  ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಐದು ನಿಮಿಷದ ಬಳಿಕ ನಿಮ್ಮ ಪಾದಗಳನ್ನು ಅದರಲ್ಲಿ ಇಟ್ಟುನೋಡಿ, ನಿಮ್ಮ ನೋವು ಎಲ್ಲವು ಮಾಯವಾಗಿ ನಿಮಗೆ ಆರಾಮದಾಯಕ ಅನಿಸಬಹುದು.

Comments are closed.