ಕರಾವಳಿ

ಬೈಂದೂರು ಕೊಡೇರಿಯಲ್ಲಿ ಸಾಂಪ್ರದಾಯಿಕವಾಗಿ ಸಂಪನ್ನಗೊಂಡ ‘ಏಕಲವ್ಯ ಕಂಬಳೋತ್ಸವ’; ಫಲಿತಾಂಶ ವಿವರ(Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಅವಿಭಜಿತ ದಕ್ಷಿಣಕನ್ನಡದಲ್ಲೇ ಮೊದಲು ಎಂಬಂತೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಎಂಬಲ್ಲಿ ಈ ಸಾಲಿನ ಮೊದಲ ಸಾಂಪ್ರದಾಯಿಕ ಕಂಬಳ ‘ಏಕಲವ್ಯ ಕಂಬಳೋತ್ಸವ’ ಬೈಂದೂರು ತಾಲೂಕು ಕಂಬಳ ಸಮಿತಿಯ ಸಹಯೋಗದೊಂದಿಗೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಪಟೇಲರಮನೆ ಕಂಬಳಗದ್ದೆಯಲ್ಲಿ ಏಕಲವ್ಯ ಕಂಬಳೋತ್ಸವ ಸರಳವಾಗಿ, ಸಂಪ್ರದಾಯಬದ್ದವಾಗಿ ನ.13 ಶನಿವಾರದಂದು ನಡೆಯಿತು.

ಧಾರ್ಮಿಕ ಹಾಗೂ ಜಾನಪದೀಯ ಆಚರಣೆಯಾಗಿರುವ ಕಂಬಳೋತ್ಸವವನ್ನು ಸರಕಾರದ ಅನುಮತಿಯೊಂದಿಗೆ ನಡೆಸಲಾಯಿತು.ಉತ್ತರ ಕನ್ನಡದಿಂದ ಬ್ರಹ್ಮಾವರದ ತನಕ 40 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸಿದ್ದವು. ಆಗಮಿಸಿದ ಎಲ್ಲ ಕೋಣಗಳನ್ನು ಸಾಂಪ್ರಾದಾಯಿಕ ಗೌರವಾದರಗಳಿಂದ ಸ್ವಾಗತಿಸಿಕೊಳ್ಳಲಾಯಿತು. ಈ ಬಾರಿ ವಿಶೇಷವಾಗಿ ಕಂಬಳದ ಕೋಣಗಳ ವೇಗ ಅಳೆಯಲು ಸೆನ್ಸಾರ್ ಅಳವಡಿಸಲಾಗಿತ್ತು. ಇದು ಈ ವಲಯ ವ್ಯಾಪ್ತಿಯಲ್ಲಿ ಪ್ರಥಮ ಪ್ರಯೋಗವಾಗಿದ್ದು ಯಶಸ್ವಿಯಾಗಿದೆ.

ಕಂಬಳದಲ್ಲಿ ಹಗ್ಗ ಸಬ್ ಜ್ಯೂನಿಯರ್ ವಿಭಾಗ, ಹಗ್ಗ ಜ್ಯೂನಿಯರ್ ವಿಭಾಗ, ಹಗ್ಗ ಸಿನಿಯರ್ ವಿಭಾಗ ಮತ್ತು ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತಿಯ ಸ್ಥಾನ ಪಡೆದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ವಲಯ ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ, ದಿನೇಶ ದೇವಾಡಿಗ, ಉಪಾಧ್ಯಕ್ಷರಾದ ಚೈತ್ರಾ ಪರಮೇಶ್ವರ ಪೂಜಾರಿ, ವೆಂಕಟರಮಣ ಗಾಣಿಗ, ಕಾರ್ಯದರ್ಶಿ ಸುರೇಶ್ ಮೇಲ್ಮನೆ, ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಮಹಾ ಪ್ರಬಂಧಕರು, ಸಿಬ್ಬಂದಿಗಳು, ಗ್ರಾಮಪಂಚಾಯತ್ ಸದಸ್ಯರಾದ ಸುಬ್ಬಣ್ಣ ಶೆಟ್ಟಿ, ಆನಂದ ಪೂಜಾರಿ, ಕೃಷ್ಣ ಖಾರ್ವಿ, ಹಿರಿಯ ಕಂಬಳ ಓಟಗಾರ ಸಂಜೀವ ಮರವಂತೆ, ಅಪ್ಪೇಡಿ ಮಹಾಲಿಂಗ ಪೂಜಾರಿ, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಮಹಾಬಲ ಕೊಡೇರಿ, ಏಕಲವ್ಯ ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.

ಗಣೇಶ್ ಕೊಠಾರಿ, ಕಿಶೋರ್ ಪೂಜಾರಿ ಸಸಿಹಿತ್ಲು,ವೆಂಕಟೇಶ್ ಬಡಾಮನೆ ನಿರೂಪಿಸಿದರು.

ಕಂಬಳದ ಫಲಿತಾಂಶ…
ಸಬ್ ಜ್ಯೂನಿಯರ್ ವಿಭಾಗ:
ಪ್ರಥಮ- ಜಟ್ಟಿಗೇಶ್ವರ ಕೃಪಾ, ರವಿಚಂದ್ರ ದೇವಾಡಿಗ ಹೊಸ್ಮನೆ ನಾಯ್ಕನಕಟ್ಟೆ (ಓಡಿಸಿದವರು- ವಿಶ್ವನಾಥ ದೇವಾಡಿಗ).
ದ್ವಿತೀಯ- ಸೋಮ ದೇವಾಡಿಗ ಬಡಾಮನೆ ಮಹಾಬಲೇಶ್ವರ ಬಿ. (ಓಡಿಸಿದವರು- ವಿಶ್ವನಾಥ ದೇವಾಡಿಗ)

ಜ್ಯೂನಿಯರ್ ವಿಭಾಗ:
ಪ್ರಥಮ- ಸಮೃದ್ಧಿ, ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನು (ಓಡಿಸಿದವರು- ವಿಶ್ವನಾಥ ದೇವಾಡಿಗ)
ದ್ವಿತೀಯ- ಎಚ್.ಎನ್. ನಿವಾಸ ಪಿನ್ನುಪಾಲ ಭಟ್ಕಳ (ಓಡಿಸಿದವರು- ಶಂಕರ ನಾಯ್ಕ ಭಟ್ಕಳ)

ಸೀನಿಯರ್ ವಿಭಾಗ:
ಪ್ರಥಮ- ನೀಲಕಂಠ ಹೂದಾರ್ ತೆಗ್ಗರ್ಸೆ (ಓಡಿಸಿದವರು- ರವಿ ಪೂಜಾರಿ ಗುಣಮಕ್ಕಿ)
ದ್ವಿತೀಯ- ಶೇಖರ ದೇವಾಡಿಗ ಕೋಟ ಹರ್ತಟ್ಟು (ಓಡಿಸಿದವರು- ಬಾಲಕೃಷ್ಣ)

ಹಲಗೆ ವಿಭಾಗ:
ಪ್ರಥಮ- ವೆಂಕಟರಮಣ ಗಾಣಿಗ ನಾವುಂದ (ಓಡಿಸಿದವರು- ರಾಘವೇಂದ್ರ)
ದ್ವಿತೀಯ- ಸಾಸ್ತಾನ ಪಾಂಡೇಶ್ವರ ಗಣೇಶ ಪೂಜಾರಿ (ಓಡಿಸಿದವರು- ಭಾಸ್ಕರ ದೇವಾಡಿಗ ಮಹಾಬಲೇಶ್ವರ)

Comments are closed.