UAE

ದುಬೈ, ಶಾರ್ಜಾ ಸೇರಿದಂತೆ ಯುಎಇ ಹಲವೆಡೆಗಳಲ್ಲಿ ಭೂಕಂಪನದ ಅನುಭವ

Pinterest LinkedIn Tumblr

ದುಬೈ: ಇರಾನ್‌ನ ದಕ್ಷಿಣದಲ್ಲಿ ಸಂಜೆ 4.07ಕ್ಕೆ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಭಾನುವಾರ ತಿಳಿಸಿದೆ.

(ಸಾಂದರ್ಭಿಕ ಚಿತ್ರ)

ದುಬೈ, ಶಾರ್ಜಾ ಸೇರಿದಂತೆ ಯುಎಇಯ ಹಲವೆಡೆಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಈ ನಗರದ ನಿವಾಸಿಗಳು ಗಾಬರಿಯಿಂದ ಮನೆ ಹಾಗೂ ಕಚೇರಿಗಳಿಂದ ಹೊರ ಬರುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳಿಂದ ತಿಳಿದಿಬಂದಿದೆ. ಈ ಬಗ್ಗೆ ಕಲೀಜ್ ಟೈಮ್ಸ್ ವರದಿ ಮಾಡಿದೆ.

ಹೆಚ್ಚಿನ ವಿವರಗಳು ಇನ್ನಷ್ಠೇ ಲಭ್ಯವಾಗಬೇಕಿದೆ.

 

Comments are closed.