ರಾಷ್ಟ್ರೀಯ

ವಿಶ್ವದ ಅತ್ಯಂತ ದುಬಾರಿ ಕಾರನ್ನೇ ಟ್ಯಾಕ್ಸಿಯನ್ನಾಗಿಸಿದ ಕೇರಳದ ವ್ಯಕ್ತಿ! ಇದಕ್ಕೂ ಒಂದು ಕಾರಣವಿದೆ…..

Pinterest LinkedIn Tumblr

ವಿಶ್ವದ ಅತ್ಯಂತ ದುಬಾರಿ ಕಾರೆಂದೇ ಗುರುತಿಸಿಡಿಕೊಂಡಿರುವ ರೋಲ್ಸ್​ ರಾಯ್ಸ್​ ಕಾರು ಬಾಡಿಗೆ ಟ್ಯಾಕ್ಸಿ ಮಾಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ…? ಅದು ಕೂಡ ನಮ್ಮ ನೆರೆಯ ಕೇರಳದಲ್ಲಿ ಎಂಬುದು ಅಚ್ಚರಿಯ ವಿಷಯ.

ರೋಲ್ಸ್ ರಾಯ್ಸ್ ಶ್ರೀಮಂತರ ಕಾರಲ್ಲ, ಇದು ಆಗರ್ಭ ಶ್ರೀಮಂತರಿಗೆ ಮಾತ್ರ. ಕೋಟಿ ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು ಖರೀದಿಸುವುದು ಹಾಗೂ ನಿರ್ವಹಣೆ ಮಾಡುವುದು ಸುಲಭದ ಮಾತಲ್ಲ. ಅತಿ ಶ್ರೀಮಂತ ವ್ಯಕ್ತಿಗಳು ಈ ಕಾರನ್ನು ಖರೀದಿಸುತ್ತಾರೆ ಮತ್ತು ಬಳಸುತ್ತಾರೆ. ಯಾಕೆಂದರೆ ಸಾಮಾನ್ಯ ವ್ಯಕ್ತಿ ಇದರ ಬೆಲೆ ಕೇಳಿದರೆ ಆಗಸ ನೋಡುತ್ತಾನೆ. ಅಷ್ಟೊಂದು ಬೆಲೆಯನ್ನು ಹೊಂದಿದೆ ಈ ಕಂಪನಿ ಉತ್ಪಾದಿಸುವ ಕಾರುಗಳು. ಆದರೆ ಇಲ್ಲೊಂದು ಅಚ್ಚರಿಯ ವಿಚಾರವೆಂದರೆ ವ್ಯಕ್ತಿಯೊಬ್ಬರು ರೋಲ್ಸ್​ ರಾಯ್ಸ್​ ಕಂಪನಿ ಕಾರೊಂದನ್ನು ಟ್ಯಾಕ್ಸಿಯನ್ನಾಗಿ ಮಾಡಿದ್ದಾರೆ. ಅದರಲ್ಲೂ ಭಾರತೀಯರೊಬ್ಬರು ಈ ಕಾರನ್ನು ಟ್ಯಾಕ್ಸಿಯನ್ನಾಗಿಸಿ ಬಾಡಿಗೆ ಕೊಡುತ್ತಿದ್ದಾರೆ ಎಂಬುದು ಮಗದೊಂದು ಅಚ್ಚರಿ ವಿಚಾರವಾಗಿದೆ!.

https://www.instagram.com/p/CGhzV7NFBw5/?utm_source=ig_web_copy_link

 

ಕೇರಳ ಮೂಲದ ಬಾಬಿ ಎಂಬವರು ರೋಲ್ಸ್​ ರಾಯ್ಸ್​ ಫ್ಯಾಂಟಮ್​ ಕಾರನ್ನು ಬಾಡಿಗೆ ಟ್ಯಾಕ್ಸಿಯನ್ನಾಗಿಸಿ ಬಾಡಿಗೆ ನೀಡುತ್ತಾರೆ. ಅದರಲ್ಲೂ ಕಡಿಮೆ ಹಣಕ್ಕೆ ಬಾಡಿಗೆ ನೀಡುತ್ತಾರೆ.

ಉದ್ಯಮಿಯಾಗಿರುವ ಬಾಬಿ ಆಕ್ಸಿಜನ್​ ಎಂಬ ಹೆಸರಿನ ರೆಸಾರ್ಟ್​ ನಡೆಸುತ್ತಿದ್ದಾರೆ. ಈ ರೆಸಾರ್ಟ್​ಗೆ ಬರುವ ಗ್ರಾಹಕರಿಗೆ ಅಲ್ಲಿ ಓಡಾಡಾಲು ರೋಲ್ಸ್​ ರಾಯ್ಸ್​ ಫ್ಯಾಂಟಮ್​ ಕಾರನ್ನು ಬಾಡಿಗೆ ನೀಡುತ್ತಾರೆ.

ಗೋಲ್ಡ್​ ಬಣ್ಣದ ಕಾರು ಇದಾಗಿದ್ದು, ಈ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿದೆ. ಬಾಬಿ ಮತ್ತು ಕಾರಿನ ಫೋಟೋಗಳು ಕೂಡ ಫೇಸ್​ಬುಕ್​, ಇನ್​ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.

ಇನ್ನು ಬಾಬಿ ಈ ಕಾರನ್ನು ಎಂದಿಗೂ ಹೊರಗಿನವರಿಗೆ ಬಾಡಿಗೆಗೆ ನೀಡುವುದಿಲ್ಲ. ರೆಸಾರ್ಟ್​ಗೆ ಬಂದ ಅತಿಥಿಗಳಿಗೆ ಮಾತ್ರ ಕಡಿಮೆ ಬಾಡಿಗೆಗೆ ಈ ಕಾರಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಹಾಗೆಯೇ ಫ್ಯಾಂಟಮ್​ ಕಾರಿನ ಬೆಲೆ 8 ರಿಂದ 11 ಕೋಟಿವರೆಗೆ ಇರುತ್ತದೆ.

Comments are closed.