ಕರ್ನಾಟಕ

ಅಣ್ಣನ ಮಗುವನ್ನು ಎತ್ತಿಕೊಂಡ ಸಂಭ್ರಮವನ್ನು ನಟ ಧ್ರುವಾ ಸರ್ಜಾ ಹೇಳಿದ್ದು ಹೀಗೆ…

Pinterest LinkedIn Tumblr

ಬೆಂಗಳೂರು: ಅಣ್ಣ ಕೂಡ ತನಗೆ ಗಂಡು ಮಾಗು ಆಗುತ್ತೆ ಎನ್ನುವ ನಂಬಿಕೆಯಲ್ಲಿದ್ದ. ಇಂದು ಅತ್ತಿಗೆಗೆ ಗಂಡು ಮಗು ಜನಿಸಿದ್ದು ಬಹಳ ಖುಷಿಯಾಗಿದೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆಗೆ ಇದ್ದ ಫೀಲ್ ಆಯ್ತು ಎಂದು ನಟ ಧ್ರುವ ಸರ್ಜಾ ಅವರು ಅಣ್ಣನ‌ ಮಗುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ತಮ್ಮ ಫೇಸ್‌ಬುಕ್‌ ಫೇಜಿನಲ್ಲಿ ಮಗುವನ್ನು ಎತ್ತಿಕೊಂಡ ಫೊಟೋದ ಜೊತೆ ”ಸಿಂಹದ ಮರಿ ಬಂದಾಯ್ತು..ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ..ಜೈ ಆಂಜನೇಯ” ಎಂದು ಮತ್ತೊಂದು ಪೋಟೋ ಜೊತೆ “ಅಣ್ಣನನ್ನು ಮತ್ತೆ ಪಡೆದ ಈ ಅನುಭವ ಸುಮಧುರ ಜೈ ಆಂಜನೇಯ”.. ಮಗುವನ್ನು ಎತ್ತಿಕೊಂಡ ಇನ್ನೊಂದು ಫೋಟೋದ ಜೊತೆ “ಹೇಳಲಾಗದ ಖುಷಿ” ಎಂದು ಬರೆದುಕೊಂಡಿದ್ದಾರೆ.

ಅತ್ತಿಗೆ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿದು ಕೂಡಲೇ ಧ್ರುವಾ ಸರ್ಜಾ ಪತ್ನಿ ಪ್ರೇರಣಾ ಜೊತೆ ಆಸ್ಪತ್ರೆಗೆ ಆಗಮಿಸಿ ಮಗುವನ್ನು ಎತ್ತಿಕೊಂಡು ಸಂಭ್ರಮಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗು ಹಾಗೂ ಅತ್ತಿಗೆ ಆರೋಗ್ಯವಾಗಿದ್ದಾರೆ. ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಖುಷಿ ಹೆಚ್ಚಾಗಿದ್ದರಿಂದ ತುಂಬಾ ರೋಮಾಂಚನವಾಗಿತ್ತು. ಹೀಗಾಗಿ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವನ್ನು ಅಂದಾಜಿಸಲು ಸಾಧ್ಯವಾಗಲಿಲ್ಲ. ಮಗುವಿಗೆ ಹೆಸರಿಡುವ ಕುರಿತು ಇನ್ನೂ ಯಾವುದೇ ಮಾತುಕತೆ ನಡೆದಿಲ್ಲ.

ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

Comments are closed.