ಪ್ರಮುಖ ವರದಿಗಳು

ಉದ್ದದ ಗಡ್ಡ ಬಿಟ್ಟು ಕೆಲಸ ಕಳೆದುಕೊಂಡ ಎಸೈ : ಕೆಲ್ಸಕ್ಕೂ ಗಡ್ಡಕ್ಕೂ ಏನು ಸಂಬಂಧ.? ಇಲ್ಲಿದೆ ಉತ್ತರ

Pinterest LinkedIn Tumblr

ಉತ್ತರ ಪ್ರದೇಶ: ಪೊಲೀಸರು ನೀಟಾಗಿ ಶೇವ್ ಮಾಡಿಕೊಳ್ಳಬೇಕು ಅಥವಾ ದಾಡಿ ಬಿಡಲು ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಿದ್ದರೂ ಇಲ್ಲೊಬ್ಬರು ಉದ್ದದ ಗಡ್ಡ ಬಿಟ್ಟು ಕೆಲಸ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಭಾಗ್ಪಾತ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ʼರೊಬ್ಬರು ಉದ್ದದ ಗಡ್ಡ ಬಿಟ್ಟಿದ್ದರು. ಇದ್ರಿಂದ ಸಿಟ್ಟಾದ ಇಲಾಖೆ ನಿಯಮ ಉಲ್ಲಂಘನೆ ಕಾರಣ ನೀಡಿ ಅವರನ್ನ ಅಮಾನತು ಮಾಡಿದೆ..

ಪೊಲೀಸ್​ ಇಲಾಖೆಯ ನಿಯಮವನ್ನ ಮೀರಿ ಗಡ್ಡ ಬೆಳೆಸಿಕೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಭಾಗ್​ಪತ್​ನ ಪೊಲೀಸ್​ ಸಬ್ ಇನ್ಸ್‌ಪೆಕ್ಟರ್ ಇಂಟೆಸರ್ ಅಲಿ ಎನ್ನುವವರನ್ನ ಕೆಲ್ಸದಿಂದ ಅಮಾನತುಗೊಳಿಸಲಾಗಿದೆ.

ಉತ್ತರಪ್ರದೇಶದ ಬಾಘ್​ಪಟ್​ನಲ್ಲಿ 3 ವರ್ಷಗಳಿಂದ ಸಬ್​ ಇನ್​ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದ ಕಾರಣ, ಗಡ್ಡ ಬೋಳಿಸಿಕೊಂಡು ಬರುವಂತೆ ಅಥವಾ ಗಡ್ಡ ಉಳಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿತ್ತು.

ಮೂರು ಮೂರು ಬಾರಿ ಈ ಬಗ್ಗೆ ನಿರ್ದೇಶನ ನೀಡಿದ್ದರೂ ಅವರು ಗಡ್ಡ ಬೋಳಿಸಲೂ ಇಲ್ಲ ಹಾಗೂ ಗಡ್ಡ ಉಳಿಸಿಕೊಂಡೇ ಕಾರ್ಯನಿರ್ವಹಿಸಲು ಮೇಲಧಿಕಾರಿಗಳಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಕೌರ ಮಾಡಿಸಿ ಇಲ್ಲವೇ ಅದಕ್ಕೆ ಅಗತ್ಯವಾದ ಅನುಮತಿಯನ್ನಾದ್ರು ಪಡೆಯಿರಿ ಎಂದು ಸಲಹೆ ನೀಡಿದರೂ ಇದ್ಯಾವುದನ್ನೂ ಕೇರ್‌ ಮಾಡದ ಸಬ್‌ ಇನ್ಸ್ ಪೆಕ್ಟರ್‌ ತಮ್ಮ ಪಾಡಿಗೆ ತಾವು ಗಡ್ಡವನ್ನ ಬೆಳೆಸುತ್ಲೆ ಇದ್ರು. ಇದ್ರಿಂದ ಸಿಟ್ಟಾದ ಇಲಾಖೆ ನಿಯಮ ಉಲ್ಲಂಘನೆ ಕಾರಣ ನೀಡಿ ಅವರನ್ನ ಅಮಾನತು ಮಾಡಲಾಗಿದೆ.

ಅಯ್ಯೋ, ಕೆಲ್ಸಕ್ಕೂ ಗಡ್ಡಕ್ಕೂ ಏನು ಸಂಬಂಧ.? ಕೌರ ಮಾಡದಿದ್ರೆ ಕೆಲ್ಸ ಹೋಗುತ್ತಾ ಅಂತಾ ನೀವು ಅಂದುಕೊಳ್ತಿರ ಬಹುದು.  ಆದ್ರೆ,ಪೊಲೀಸ್​ ಇಲಾಖೆಯ ನಿಯಮಗಳಲ್ಲಿ ಗಡ್ಡ ಬೆಳೆಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ, ಪೊಲೀಸ್​ ವೃತ್ತಿಯಲ್ಲಿ ಇರುವ ಸಿಕ್ಖರು ಮಾತ್ರ ಗಡ್ಡ ಬಿಟ್ಟಿರಲು ಅನುಮತಿ ಇದೆ. ಆದರೆ ಉಳಿದ ಎಲ್ಲ ಪೊಲೀಸರು ಸ್ವಚ್ಛವಾಗಿ ಸಂಪೂರ್ಣವಾಗಿ ಶೇವ್​ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಒಂದು ವೇಳೆ ಗಡ್ಡಧಾರಿ ಆಗಿರಬೇಕು ಎಂದರೆ ಮೇಲಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಆದರೆ ಇಂತೆಸರ್ ಅಲಿ ಎರಡರಲ್ಲಿ ಯಾವುದನ್ನೂ ಮಾಡದ್ದರಿಂದ ಅಮಾನತು ಮಾಡಲಾಗಿದೆ ಎಂದು ಬಾಘ್​ಪಟ್​ನ ಎಸ್​ಪಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.

Comments are closed.