ಕರಾವಳಿ

ಕೋವಿಡ್ ಸಾವು ಮೂಡಿಸಿದ ಆತಂಕ : ಶವದಲ್ಲಿಯೂ 16 ಗಂಟೆ ಕೊರೋನಾ ಜೀವಂತ

Pinterest LinkedIn Tumblr

ಬೆಂಗಳೂರು : ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವದಲ್ಲಿಯೂ ಕೊರೋನಾ ಜೀವಂತ ವಾಗಿರುತ್ತದೆ ಎಂಬ ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ.

ಕೊರೋನಾ ಸೋಂಕಿತನ ಶವ ಪರೀಕ್ಷೆಯಲ್ಲಿ ಆತಂಕಕಾರಿಯಾದಂತ ಅಂಶವೊಂದು ಬಹಿರಂಗವಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಂತ ಶವದಲ್ಲಿಯೂ ಕೊರೋನಾ ಸರಿ ಸುಮಾರು 16 ಗಂಟೆ ಜೀವಂತವಾಗಿರುತ್ತದೆ ಎಂಬ ಈ ಮಾಹಿತಿಯಿಂದ ಕೊರೋನಾ ಭೀತಿ ಮತ್ತಷ್ಟು ಆತಂಕ ಮೂಡಿಸಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಎಂಬುವರು ಕೊರೋನಾ ಸೋಂಕಿನಿಂದ ಮೃತಪಟ್ಟಂತ ಶವದ ಶವ ಪರೀಕ್ಷೆಯನ್ನು ನಡೆಸಿದ್ದಾರೆ. ಕೊರೋನಾ ಸೋಂಕಿನಿಂದ ಮೃತಪಟ್ಟಂತ ವ್ಯಕ್ತಿಯ ಶವವನ್ನು ಶವ ಪರೀಕ್ಷೆ(ಪೋಸ್ಟ್ ಮಾರ್ಟನ್) ಮಾಡಿದಾಗ ಶವ ಪರೀಕ್ಷೆಯಲ್ಲಿ ಕೊರೋನಾ ಕೇವಲ ಶ್ವಾಸಕೋಶಕ್ಕೆ ಮಾತ್ರವಲ್ಲದೇ ಇತರೇ ಅಂಗಾಂಗಳ ಮೇಲೂ ಮಾರಕ ಪರಿಣಾಮ ಬೀರಲಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಈ ಪ್ರಯೋಗದ ಆಧಾರದಲ್ಲಿ ಕೊರೋನಾದಿಂದ ಮೃತಪಟ್ಟ ಶವದಲ್ಲಿ ಕೊರೋನಾ ಸೋಂಕು 16 ಗಂಟೆಗಳ ನಂತ್ರವೂ ಸಕ್ರೀಯವಾಗಿರುತ್ತದೆ ಎಂಬ ಆತಂಕಕಾರಿ ಸಂಗತಿಯನ್ನು ಡಾ.ದಿನೇಶ್ ರಾವ್ ಬಹಿರಂಗ ಪಡಿಸಿದ್ದಾರೆ.

Comments are closed.