ಕರಾವಳಿ

ಮೊಮ್ಮಗನ ಆಗಮನದಿಂದ ಸಂಭ್ರಮಪಟ್ಟಿರುವ ಖ್ಯಾತ ನಟ ಅರ್ಜುನ್ ಸರ್ಜಾ ಹೇಳಿದ್ದೇನು?

Pinterest LinkedIn Tumblr

ಬೆಂಗಳೂರು,ಅಕ್ಟೋಬರ್.22 : ಚಿರು ಮತ್ತೆ ಹುಟ್ಟಿ ಬಂದಷ್ಟೇ ಸಂತಸವಾಗುತ್ತಿದೆ. ಮೊಮ್ಮಗನ ಆಗಮನದಿಂದ ಚಿರು ಇಲ್ಲ ಎಂಬ ದುಃಖದಲ್ಲೂ ಮತ್ತೆ ಸಂತೋಷ ಮೂಡಿದೆ ಎಂದು ಖ್ಯಾತ ನಟ ಅರ್ಜುನ್ ಸರ್ಜಾ ಸಂತಸ ಹಂಚಿಕೊಂಡಿದ್ದಾರೆ.

ಮೇಘನಾ ರಾಜ್‍ಗೆ ಅವರು ಇಂದು ಬೆಳಗ್ಗೆ ಗಂಡು ಮಗುವಿಗೆ ಜನನ ನೀಡಿದ್ದು, ಮಗುವಿನ ಆಗಮನದಿಂದ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮೇಘನಾ ರಾಜ್​ ರಾಘವೇಂದ್ರ ರಾಯರ ದಿನವಾದ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಆರೋಗ್ಯವಾಗಿದ್ದಾರೆ ಎಂದು ಸರ್ಜಾ ಕುಟುಂಬ ತಿಳಿಸಿದೆ.

ಗುರುರಾಘವೇಂದ್ರ ರಾಯರ ವಾರದಂದೇ ಮಗು ಜನ್ಮ ನೀಡಿದ್ದು, ಗಜಕೇಸರಿ ಯೋಗದಲ್ಲಿ ಹುಟ್ಟಿದೆ ಎಂದು ಹೇಳಲಾಗಿದೆ. ನವರಾತ್ರಿ ಶುಭ ದಿನದಂದು ಮಗುವಿನ ಜನನವಾಗಿದ್ದು, ಒಳ್ಳೆಯ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.

ಇದೇ ವೇಳೆ ಮೊಮ್ಮಗನ ಆಗಮನದಿಂದ ಸಂಭ್ರಮಪಟ್ಟಿರುವ ಖ್ಯಾತ ನಟ ಅರ್ಜುನ್ ಸರ್ಜಾ, ಸಿನಿಮಾ ಕೆಲಸಗಳ ಹಿನ್ನೆಲೆಯಲ್ಲಿ ಚೆನ್ನೈನಲ್ಲಿದ್ದು ಅಲ್ಲಿಂದಲೇ ಸಂತಸ ಹಂಚಿಕೊಂಡಿದ್ದಾರೆ. ’36 ವರ್ಷಗಳ ಹಿಂದೆ ಚಿರು ಜನಿಸಿದಾಗ ಚೆನ್ನೈನಿಂದ ಓಡಿ ಬಂದಿದ್ದೆ. ಇದೀಗ ಆತನ ಮಗುವನ್ನು ನೋಡಲು ಓಡಿ ಬರುತ್ತಿದ್ದೇನೆ. ನಾವು ಬೆಂಗಳೂರಿಗೆ ಹೊರಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಿಜಕ್ಕೂ ಒಂದು ಕಷ್ಟದ ಜತೆಗೆ ಖುಷಿಯ ಸುದ್ದಿಯನ್ನೂ ಆ ದೇವರು ಕರುಣಿಸಿದ್ದಾನೆ. ಈ ಶುಭ ಘಳಿಗೆಯ ಹೊತ್ತಿನಲ್ಲಿ ನಮ್ಮ ಹುಡುಗ ಚಿರು ಇದ್ದಿದ್ದರೆ ಅದೆಷ್ಟು ಸಂಭ್ರಮಿಸುತ್ತದ್ದನೋ ಗೊತ್ತಿಲ್ಲ. ಈಗಲೂ ಎಲ್ಲೋ ಒಂದು ಕಡೆ ನಿಂತು ಇದೆಲ್ಲವನ್ನು ನೋಡುತ್ತಿರುತ್ತಾನೆ. ಆತನ ಇಲ್ಲ ಎಂಬುದನ್ನು ನೆನಸಿಕೊಂಡರೆ ದುಃಖ ಬರುತ್ತದೆ. ಆ ನೋವನ್ನು ಮರೆಸಲು ಜೂ. ಚಿರು ಆಗಮಿಸಿದ್ದಾನೆ ಎಂದು ಸರ್ಜಾ ಹೇಳಿದ್ದಾರೆ.

ಹೆಣ್ಣು ಮಗು ಅಥವಾ ಗಂಡುಮಗು ಎಂಬ ಬೇಧವಿಲ್ಲ. ಅದರೆ ಚಿರು ಅಗಲಿಕೆಯಿಂದ ಸಾಕಷ್ಟು ನೋವಿನಲ್ಲಿದ್ದ ನಮ್ಮ ಮನೆಗೆ ಮಗು ಆಗಮನ ಸಂತೋಷ ತಂದಿದೆ. ನಮ್ಮ ಅಮ್ಮನ ಮೊಗದಲ್ಲಿ ನಾಲ್ಕು ತಿಂಗಳ ಬಳಿಕ ಸಂತಸವನ್ನು ನೋಡುತ್ತಿದ್ದೇನೆ. ಚಿರು ಮತ್ತೆ ಹುಟ್ಟಿ ಬಂದಷ್ಟೇ ಸಂತಸವಾಗುತ್ತಿದೆ. ನಮ್ಮ ತಾಯಿಯವರಿಗೂ ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

ಧ್ರುವ ಸರ್ಜಾನ ಮುಖದಲ್ಲಿ 4 ತಿಂಗಳಿನಿಂದ ನಗು ಇರಲಿಲ್ಲ. ಚಿರು ಮಗುವಿನಿಂದ ಎಲ್ಲರ ಮುಖದಲ್ಲಿ ನಗು ಮೂಡಿದೆ. ಸರ್ಜಾರ ಕುಟುಂಬಕ್ಕೆ ಮಗು ಬರುತ್ತಿರುವುದು ಸಂತೋಷದ ಜತೆಗೆ ತಾವು ತಾತಾ ಆಗುತ್ತಿರುವ ಸಂತಸವೂ ಇದೆ ಎಂದು ಹೇಳಿಕೊಂಡಿದ್ದಾರೆ.

ಇದೆಲ್ಲಕ್ಕಿಂತ ವಿಶೇಷ ಏನೆಂದರೆ, 2017ರ ಅಕ್ಟೋಬರ್​ 22ರಂದೇ ಮೇಘನಾ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅದೇ ಶುಭ ದಿನದಂದೇ ಮಗು ಜನಿಸಿದೆ. ಬೆಳಗ್ಗೆ 11.07 ನಿಮಿಷಕ್ಕೆ ಮಗುವಿನ ಜನನವಾಗಿದ್ದು, ಚಿಕ್ಕಪ್ಪ ಧ್ರುವ ಸರ್ಜಾ ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ಸಹ ಸದ್ಯ ಹರಿದಾಡುತ್ತಿದೆ. ಇತ್ತ ನಾರ್ಮಲ್​ ಹೆರಿಗೆಯಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Comments are closed.