ಮನೋರಂಜನೆ

ನಟಿಗೆ ಸಾಮಾಜಿಕ ಜಾಲತಾಣದ ಮೂಲಕ ಪುರುಷನ ಮರ್ಮಾಂ#ಗದ ಫೋಟೋ ಕಳುಹಿಸಿದ ವ್ಯಕ್ತಿಯ ವಿರುದ್ಧ ದೂರು

Pinterest LinkedIn Tumblr

ಮುಂಬೈ: ನಟಿ ಕವಿತಾ ಕೌಶಿಲ್’ಗೆ ಸಾಮಾಜಿಕ ಜಾಲತಾಣದ ಮೂಲಕ ಪುರುಷನ ಮರ್ಮಾಂ#ಗದ ಫೋಟೋ ಕಳುಹಿಸಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಫೋಟೋಗಳ ಸ್ಕ್ರೀನ್ ಶಾಟ್ ತೆಗೆದು ಮುಂಬೈ ಪೊಲೀಸ್, ಸೈಬರ್ ಘಟಕ , ಅದಿತ್ಯ ಠಾಕ್ರೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿದ್ದು, ಈ ವ್ಯಕ್ತಿಯನ್ನು ಬಂಧಿಸುವುದು ಕಷ್ಟವೇನಲ್ಲಾ ಎಂಬ ಭರವಸೆ ಹೊಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಸಮಾಜದಲ್ಲಿನ ಕಪಟತೆಯನ್ನು ಪ್ರಸ್ತಾಪಿಸಿದ್ದು, ಆತ ನಾಚಿಕೆಗೇಡಿನ ಕೃತ್ಯ ಮಾಡಿದ್ದರೂ ಯಾರೂ ಕೂಡಾ ಮಾತನಾಡುತ್ತಿಲ್ಲ, ಆತ ಎಲ್ಲಿದ್ದಾನೆ ಎಂಬುದನ್ನು ಹೇಳುತ್ತಿಲ್ಲ. ಮುಂಬೈ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕವಿತಾ ಕೌಶಿಕ್ ಒತ್ತಾಯಿಸಿದ್ದಾರೆ.

Comments are closed.