ಕರಾವಳಿ

ರಾಮ ಮಂದಿರದ ಜೊತೆಗೆ ರಾಮರಾಜ್ಯ ನಿರ್ಮಾಣವಾಗಬೇಕು: ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಶ್ರೀ (Video)

Pinterest LinkedIn Tumblr

 ಉಡುಪಿ: ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರುವ ಹಿನ್ನೆಲೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಯಲ್ಲಿ ಲಕ್ಷ ತುಳಸಿ ಅರ್ಚನೆಯನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿದರು. ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಹನುಮ ವಿಗ್ರಹಕ್ಕೆ ತುಳಸಿ ಅರ್ಚನೆ ನಡೆಸಿದ ಶ್ರೀಗಳು ರಾಮಮಂತ್ರ ಹೋಮ, ವಿಷ್ಣು ಸಹಸ್ರನಾಮದಲ್ಲಿ ಭಾಗಿಯಾದರು.

ಈ ಸಂದರ್ಭ ಮಾತನಾಡಿದ ಅವರು, ಶತಶತಮಾನಗಳ ಎಲ್ಲಾ ಭಾರತೀಯರ ಕನಸು ನನಸಾಗುವ ಕಾಲವಿದು. ದೇವರ ಅನುಗ್ರಹದಿಂದ ಮಂದಿರ ನಿರ್ಮಾಣ ಕಾರ್ಯ ಸುಸೂತ್ರವಾಗಿ ನೆರವೇರಲಿದೆ. ಮನೆಮನೆಯಲ್ಲೂ ಶ್ರೀರಾಮ ನಾಮತಾರಕ ಮಂತ್ರ ಜಪ ನಡೆಯಲಿ. ಮಂದಿರ ನಿರ್ಮಾಣದ ಜೊತೆಗೆ ರಾಮರಾಜ್ಯದ ಕನಸು ನನಸಾಗಬೇಕು. ಪ್ರಜೆಗಳೆಲ್ಲಾ ರಾಮನಂತೆ ಬದುಕಿದರೆ ರಾಮ ರಾಜ್ಯ ನಿರ್ಮಾಣ ಸಾಧ್ಯವಿದೆ ಎಂದು ಶ್ರೀಗಳು ಅಭಿಮತ ವ್ಯಕ್ತಪಡಿಸಿದರು.

ಇದೇ ವೇಳೆ ಹಿರಿಯ ಶ್ರೀಗಳನ್ನು ನೆನಪಿಸಿಕೊಂಡ ವಿಶ್ವಪ್ರಸನ್ನ ತೀರ್ಥರು, ‘ನಮ್ಮ ಗುರುಗಳು ಭೌತಿಕವಾಗಿ, ದೈಹಿಕವಾಗಿ ನಂಮ್ಮ್ಮೊಂದಿಗಿದ್ದಿದ್ದರೆ ಬಹಳಷ್ಟು ಸಂಭ್ರಮಪಡುತ್ತಿದ್ದರು. ಆದರೆ ಅವರು ಯಾವುದಾದರೂ ಸ್ವರೂಪದಲ್ಲಿ ಈ ಕಾರ್ಯಕ್ರಮ ನೋಡುತ್ತಿದ್ದಾರೆ ಎನ್ನುವ ನಂಬಿಕೆಯಿದೆ ಎಂದರು.

Comments are closed.