ರಾಷ್ಟ್ರೀಯ

ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ; ‘ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ಕೋಟಿ ನಮನಗಳು’

Pinterest LinkedIn Tumblr

ಅಯೋಧ್ಯೆ:ದಶಕಗಳ ಅವಿರತ ಹೋರಾಟದ ಫಲವಾಗಿ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆನೆ ರವೇರಿದ್ದು, ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ಕೋಟಿ ನಮನಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಸಮಸ್ತ ರಾಮ ಭಕ್ತರ ಪ್ರತಿನಿಧಿಯಾಗಿ ನಿಮ್ಮ ಎದುರುಗಡೆ ನಿಂತಿರುವುದಕ್ಕೆ ಧನ್ಯತಾ ಭಾವವಿದೆ ಎಂದು ವಿನಮ್ರದಿಂದ ನುಡಿದರು.

ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:

ಸಮಸ್ತ ಭಾರತೀಯರ ಕನಸು ನನಸಾದ ಶುಭ ಘಳಿಗೆ ಇದು.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಸಮಸ್ತ ಭಾರತೀಯರ ಕನಸು.

ಭಾರತೀಯರ ಕನಸು ಈಡೇರಿದ್ದು, ಭವಿಷ್ಯದ ಭಾರತದ ನಿರ್ಮಾಣಕ್ಕೆ ದಾರಿದೀಪವಾಗಲಿದೆ.

ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಭೂಮಿ ಪೂಜೆ ಕಾರ್ಯಕ್ರಮದ ಸಂಭ್ರಮಾಚರಣೆ ನಡೆದಿದೆ.

ದೇಶ-ವಿದೇಶಗಳ ಕೋಟಿ ಕೋಟಿ ರಾಮ ಭಕ್ತರಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ.

ಭೂಮಿ ಪೂಜೆಗೆ ನನ್ನನ್ನು ಆಮಂತ್ರಿಸಿದ್ದು ನನ್ನ ಸೌಭಾಗ್ಯ ಎಂದ ಪ್ರಧಾನಿ ಮೋದಿ.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಅವಕಾಶ ನೀಡಿದ್ದಕ್ಕೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ.

ಸಂಪೂರ್ಣ ಔಆರತ ರಾಮಮಯವಾಗಿದೆ ಎಂದ ಪ್ರಧಾನಿ ಮೋದಿ.

ರಾಮ ಜನ್ಮಭೂಮಿಯಲ್ಲಿ ಇಂದು ಪ್ರಭು ಶ್ರೀರಾಮನ ಆಗಮನವಾಗಿದ್ದು, ಈ ಶುಭ ಘಳಿಗೆಗೆ ಇಡೀ ದೇಶ ಸಾಕ್ಷಿಯಾಗಿದೆ.

ರಾಮ ಜನ್ಮಭೂಮಿಗಾಗಿ ಹೋರಾಡಿದ ಎಲ್ಲ ಮಹನೀಯರನ್ನೂ ಸ್ಮರಿಸುವುದಾಗಿ ಹೇಳಿದ ಪ್ರಧಾನಿ ಮೋದಿ.

ಪ್ರಭು ಶ್ರೀರಾಮ ನಮ್ಮ ಭಾರತೀಯ ಸಂಸ್ಕತಿಯ ಆಧಾರ.

ಭಾರತದ ಅಸ್ಮಿತೆ ಹಾಗೂ ಭಾರತೀಯರ ಸಾಮೂಹಿಕತೆಯ ಅಮೋಘ ಶಕ್ತಿ ಇಡೀ ಜಗತ್ತಿಗೆ ಅಧ್ಯಯನ ವಸ್ತುವಾಗಿದೆ.

ಪ್ರಭು ಶ್ರೀರಾಮ ಕೇವಲ ಭಾರತಕ್ಕೆ ಮಾತ್ರ ಸಿಮೀತವಾಗಿರದೇ ವಿದೇಶಗಳ ಸಂಸ್ಕೃತಿಯಲ್ಲೂ ಅಡಕವಾಗಿರುವುದು ಸ್ಪಷ್ಟ.

ರಾಮನ ಆದರ್ಶಗಳ ಸಂದೇಶಗಳನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವುದು ನಮ್ಮ ಯುವ ಪೀಳಿಗೆಯ ಕರ್ತವ್ಯ.

ತಮ್ಮ ಭಾಷಣದುದ್ದಕ್ಕೂ ಪ್ರಭು ಶ್ರೀರಾಮನ ಸಂದೇಶಗಳನ್ನು ಸಂಸ್ಕೃತದಲ್ಲಿ ಪಠಿಸಿದ ಪ್ರಧಾನಿ ಮೋದಿ.

ಮಹಾತ್ಮಾ ಗಾಂಧಿ ಅವರ ರಾಮ ರಾಜ್ಯದ ಕನಸು ನನಸಾಗುವ ಸಮಯ ಬಂದಿದ್ದು, ನಾವೆಲ್ಲಾ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಕರೆ ನೀಡಿದ ಮೋದಿ.

ಎಲ್ಲರ ಜೊತೆಗೂಡಿ ಎಲ್ಲರ ವಿಶ್ವಾಸದೊಂದಿಗೆ ಎಲ್ಲರ ಶ್ರೆಯೋಭಿವೃದ್ಧಿಗೆ ನಾವು ದುಡಿಯಬೇಕಿದೆ.

ಆತ್ಮ ನಿರ್ಭರ ಭಾರತ ನಿರ್ಮಾಣದ ಕನಸಿಗೆ ಇಂದಿನ ಭೂಮಿ ಪೂಜೆ ಕಾರ್ಯಕ್ರಮ ದಾರಿದೀಪ ಎಂದು ಬಣ್ಣಿಸಿದ ಪ್ರಧಾನಿ ಮೋದಿ.

ಸಮಸ್ತ ಭಾರತೀಯರಿಗೆ ವಂದನೆ ಸಲ್ಲಿಸಿ ತಮ್ಮ ಭಾಷಣಕ್ಕೆ ಅಂತ್ಯ ಹಾಡಿದ ಪ್ರಧಾನಿ ಮೋದಿ.

ಹೀಗೆ ಪ್ರಧಾನಿ ಮೋದಿ ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು, ಭವ್ಯ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಸದೃಢ ಭಾರತದ ನಿರ್ಮಾಣದ ಶಪಥ ಮಾಡೋಣ ಎಂದು ಜನತೆಗೆ ಕರೆ ನೀಡಿದರು.

Comments are closed.