ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ : ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಆಗಸ್ಟ್ 05 : ಕೋವಿಡ್ – 19 ಕಾರಣದಿಂದ ಮಂಗಳೂರು ವಿಶ್ವವಿದ್ಯಾನಿಲಯದ 2019-20ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ಪೂರ್ವ ನಿರ್ಧರಿತ ವೇಳಾಪಟ್ಟಿಯಂತೆ ನಡೆಸಲು ಸಾಧ್ಯವಾಗಿರುವುದಿಲ್ಲ.

ಪ್ರಸ್ತುತ ಯು.ಜಿ.ಸಿ ಮತ್ತು ಕರ್ನಾಟಕ ಸರಕಾದ ಉನ್ನತ ಶಿಕ್ಷಣ ಇಲಾಖೆ ಇದರ ಮಾರ್ಗಸೂಚಿಗಳ ಪ್ರಕಾರ 2019-20ನೇ ಸಾಲಿನ ಪದವಿ ಮಟ್ಟದ 6ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು 2020ರ ಸಪ್ಟೆಂಬರ್ ಅಂತ್ಯದ ಒಳಗೆ ನಡೆಸಬೇಕಾಗಿರುತ್ತದೆ.

ಈ ಬಗೆಗಿನ ವೇಳಾಪಟ್ಟಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಜಾಲತಾಣ www.mangaloreuniversity.ac.in ದಲ್ಲಿ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ ಅಥವಾ ದೂರವಾಣಿ ಸಂಖ್ಯೆ:0824-2287276 ಸಂಪರ್ಕಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರ ಪ್ರಕಟಣೆ ತಿಳಿಸಿದೆ.

Comments are closed.