ಕರಾವಳಿ

ಮಣ್ಣಿನಡಿ‌‌ ಸಿಕ್ಕ ರೋಹಿತ್ ರಕ್ಷಣೆ- ಅಗ್ನಿಶಾಮಕಕ್ಕೆ 25 ಸಾವಿರ ವೈಯಕ್ತಿಕ ಬಹುಮಾನ: ಶಾಸಕ ಬಿ.ಎಂ.ಎಸ್(Video)

Pinterest LinkedIn Tumblr

ಕುಂದಾಪುರ: ಬೋರ್ ವೆಲ್ ರಿಪೇರಿ ವೇಳೆ 15 ಅಡಿಯ ಮಣ್ಣಿನೊಳಕ್ಕೆ ಸಿಕ್ಕಿದ್ದ ಯುವಕ ರೋಹಿತ್ ಖಾರ್ವಿಯನ್ನು ಸತತ 6 ಗಂಟೆ ಕಾರ್ಯಾಚರಣೆ ಮೂಲಕ ರಕ್ಷಿಸಿದ ಅಗ್ನಿಶಾಮಕ ದಳದ ಕಾರ್ಯಾಚರಣೆಯನ್ನು ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಅಭಿನಂಧಿಸಿದ್ದು ಇದು ದೇವರು ಮೆಚ್ಚುವ ಕೆಲಸ ಎಂದಿದ್ದಾರೆ.

(ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ)

ಬಹುಮಾನ ಘೋಷಣೆ..
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಬೆಳಿಗ್ಗೆ ಘಟನೆ ನಡೆದ ಮಾಹಿತಿ ಬಂದ ತಕ್ಷಣ ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಮಮಂದಿರ ಪದಾಧಿಕಾರಿಗಳ ಜೊತೆ ಮಾತನಾಡಿದ್ದೆ. ಕುಂದಾಪುರ ಅಗ್ನಿಶಾಮಕ ದಳವು ರೋಹಿತ್ ಅವರನ್ನು ಯಾವುದೇ ಸಮಸ್ಯೆಯಾಗದಂತೆ ನಾಜೂಕಿನಿಂದ ಮೇಲಕ್ಕೆತ್ತಿದ್ದು ಅವರ ಕಾರ್ಯಕ್ಕೆ ಅಭಿನಂದನೆ ಜೊತೆಗೆ ವೈಯಕ್ತಿಕ ನೆಲೆಯಲ್ಲಿ 25 ಸಾವಿರ ಬಹುಮಾನ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಗ್ನಿಶಾಮಕ ಕಾರ್ಯಚರಣೆ ತಂಡ…
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ಎನ್. ಮೊಗೇರ, ಪ್ರಮುಖ ಅಗ್ನಿಶಾಮಕ ಪ್ರದೀಪ್ ನಾಯ್ಕ, ಅಗ್ನಿಶಾಮಕ ಚಾಲಕ ಆನಂದ, ಅಗ್ನಿಶಾಮಕರಾದ ಪದ್ಮನಾಭ ಕಾಂಚನ್, ಕೃಷ್ಣ ನಾಯ್ಕ, ದಿನೇಶ, ಗೃಹ ರಕ್ಷಕ ಗಣೇಶ್ ಆಚಾರ್ ಈ ಕಾರ್ಯಾಚರಣೆಯಲ್ಲಿದ್ದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ-

ಬೋರ್ ವೆಲ್ ರಿಪೇರಿ ವೇಳೆ ಮಣ್ಣು ಕುಸಿತ- ಮಣ್ಣಿನೊಳಗೆ ಸಿಲುಕಿದ ಯುವಕನ ರಕ್ಷಣಾ ಕಾರ್ಯಾಚರಣೆ

ಆಪರೇಶನ್‌ ಬೋರ್’ವೆಲ್ ಯಶಸ್ವಿ: ಸಾವನ್ನು ಗೆದ್ದು ಬಂದ ರೋಹಿತ್ ಖಾರ್ವಿ

 

 

Comments are closed.